ದೂರದೃಷ್ಟಿಯ ಬಜೆಟ್‌: ಜ್ಯೋತಿಗಣೇಶ್

157

Get real time updates directly on you device, subscribe now.

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ಜನರ ಪ್ರಗತಿಯ ಆಶಯದಂತೆ ಮುಂದಿನ 25 ವರ್ಷಗಳ ದೂರದೃಷ್ಟಿಯ ಪ್ರಗತಿದಾಯಕ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಮಂಡಿಸಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದ್ದಾರೆ.

ಕಾವೇರಿ ಪೆನ್ನಾರ್‌, ಕೃಷ್ಣ ಗೋದಾವರಿ ನದಿ ಜೋಡಣೆ ಘೋಷಿಸಿರುವುದು ರಾಜ್ಯದ ಬಯಲುಸೀಮೆ ನೀರಾವರಿ ಸಮಸ್ಯೆಗೆ ಪರಿಹಾರವೆನಿಸಿದೆ. ಕೃಷಿ, ಶಿಕ್ಷಣ, ಮೂಲಸೌಕರ್ಯ, ವಸತಿ ಕ್ಷೇತ್ರಕ್ಕೆ ಈ ಬಜೆಟ್‌ನಲ್ಲಿ ವಿಶೇಷ ಒತ್ತು ಕೊಟ್ಟಿದ್ದು, ವಸತಿ ರಹಿತರಿಗೆ ರೂ.80 ಲಕ್ಷ ಮನೆ ನಿರ್ಮಾಣ, 2 ಲಕ್ಷ ಅಂಗನವಾಡಿ ಮೇಲ್ದರ್ಜೆಗೇರಿಸುವುದು, 400 ವಂದೇ ಭಾರತ್‌ ಹೊಸ ರೈಲುಗಳ ಸಂಚಾರ, 25 ಸಾವಿರ ಕಿ.ಮೀ ಹೆದ್ದಾರಿ ಅಭಿವೃದ್ಧಿ ವಾಣಿಜ್ಯ ಆರ್ಥಿಕ ಚಟುವಟಿಕೆಗಳ ಉನ್ನತಿಗೆ ಸಹಕಾರಿಯಾಗಿದೆ. ನಗರ ಗ್ರಾಮೀಣ ಪ್ರದೇಶಗಳ ಸಮಾನಾಂತರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಪ್ರಕಟಿಸಿರುವುದು ಹಾಗೂ ರಾಜ್ಯಕ್ಕೆ 1 ಲಕ್ಷ ಕೋಟಿ ಬಡ್ಡಿ ರಹಿತ ಸಾಲ ಪ್ರಕಟಿಸಿರುವುದು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆ ನೀಗಿಸಲಿದೆ. ಆತ್ಮ ನಿರ್ಭರದಡಿ 60 ಲಕ್ಷ ಉದ್ಯೋಗ ಸೃಷ್ಟಿ ಗುರಿ, ಸ್ಮಾರ್ಟ್‌ ಆಪ್‌ಗಳಿಗೆ ತೆರಿಗೆ ವಿನಾಯಿತಿ, ತೆರಿಗೆ ಸರಳೀಕರಣ, 5ಜಿ ಸೇವೆಗೆ ಅನುಮತಿ, ಡಿಜಿಟಲ್‌ ವಿವಿ ಸ್ಥಾಪನೆ, ಡಿಜಿಟಲ್‌ ಕರೆನ್ಸಿಗೆ ಅನುಮತಿ, ಸೋಲಾರ್‌ ವಿದ್ಯುತ್‌, ದೇಶಿಯ ಎಣ್ಣೆ ಕಾಳುಗಳ ಉತ್ಪಾದನೆಗೆ ಪ್ರೋತ್ಸಾಹ, ಇವೆಲ್ಲವೂ ಭವಿಷ್ಯದಲ್ಲಿ ಭಾರತವನ್ನು ಆತ್ಮನಿರ್ಭರದೆಡೆಗೆ ಕೊಂಡೊಯ್ಯುವ ಸಾಧನಗಳೆನಿಸಿವೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!