ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿ ಗೊಟ್ಟಿಕೆರೆ ಗ್ರಾಮದಲ್ಲಿ ರಾಸುಗಳ ಉದರ ಪೋಷಣೆ ಸಲುವಾಗಿ ಶೇಖರಿಸಲಾಗಿದ್ದ ಹುಲ್ಲಿನ ಬಣವೆ ಬೆಂಕಿ ಬಿದ್ದು ಭಣವೆ ಭಸ್ಮವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಹುಲ್ಲಿನ ಬಣವೆ ಗೊಟ್ಟಿಕೆರೆ ಗ್ರಾಮದಲ್ಲಿನ ರೈತ ಕೃಷ್ಣೇಗೌಡ ಎಂಬುವರಿಗೆ ಸೇರಿದ್ದಾಗಿದೆ, ಗ್ರಾಮ ಸಮೀಪದಲ್ಲಿ ಶೇಖರಿಸಲಾಗಿದ್ದ ಹುಲ್ಲಿನ ಬಣವೆ ಹೊತ್ತಿ ಉರಿಯುತ್ತಿರುವುದನ್ನು ಕಂಡ ಗ್ರಾಮಸ್ಥರು ನಂದಿಸಲು ಮುಂದಾಗಿದ್ದಾರೆ, ಆದರೆ ಬೆಂಕಿಯ ಕೆನ್ನಾಲಿಗೆ ತೀವ್ರತೆ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರು ಬೆಂಕಿ ನಂದಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ರೈತ ಕೃಷ್ಣೇಗೌಡರಿಗೆ ಮುಂದಿನ ದಿನಗಳಲ್ಲಿ ರಾಸುಗಳನ್ನು ಸಾಕುವುದು ಸವಾಲೆಸಿದೆ, ಹುಲ್ಲನ್ನು ಕಳೆದುಕೊಂಡಿರುವ ರೈತನಿಗೆ ಸರಕಾರದ ವತಿಯಿಂದ ಪರಿಹಾರ ದೊರಕಿಸಿ ಕೊಡಬೇಕೆಂಬುದು ಸ್ಥಳೀಯ ರೈತರ ಆಗ್ರಹವಾಗಿದೆ.
ಈ ಕುರಿತು ರೈತ ಕೃಷ್ಣೇಗೌಡ ನೀಡಿರುವ ದೂರಿನ ಮೇರೆಗೆ ತುರುವೇಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಕಿಗೆ ಹುಲ್ಲಿನ ಬಣವೆ ಭಸ್ಮ
Get real time updates directly on you device, subscribe now.
Prev Post
Comments are closed.