ಮಧುಗಿರಿ: ಪುರಸಭೆ ವ್ಯಾಪ್ತಿಯ ಜಾಮಿಯಾ ಮಸೀದಿ ಬಳಿ ಇರುವ ಪುರಸಭೆಯ ಮಟನ್ ಮಾರ್ಕೆಟ್ನಲ್ಲಿನ ವ್ಯಾಪಾರಸ್ಥರು ಕಳೆದ 2 ವರ್ಷಗಳಿಂದ ಟ್ರೇಡ್ ಲೈಸ್ಸ್ ಪಡೆಯದೆ ಬಾಡಿಗೆ ಹಣವನ್ನು ಪಾವತಿಸದೇ ಇದ್ದ ಕಾರಣ ಮುಖ್ಯಾಧಿಕಾರಿ ನಜ್ಮಾ ಅವರು ಬುಧವಾರ ಅಂಗಡಿಗಳಿಗೆ ಬೀಗ ಜಡಿದು ದಿಟ್ಟತನ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಒಳಗಾದರು.
ಇದನ್ನೇ ನೆಪ ಮಾಡಿಕೊಂಡು ಪ್ರತಿಭಟಿಸುವ ನೆಪದಲ್ಲಿ ಪಟ್ಟಣದಲ್ಲಿ ದ್ವಿಚಕ್ರ ವಾಹನದಲ್ಲಿ ವ್ಯಾಪಾರಸ್ಥರು ಸಂಚರಿಸಿ ಹಾರನ್ ಮಾಡಿಕೊಂಡು ಪುರಸಭಾ ಕಚೇರಿವರೆಗೂ ಬಂದಿದ್ದರಿಂದ ಸಾರ್ವಜನಿಕರಲ್ಲಿ ಕೆಲ ಕ್ಷಣ ಆತಂಕ ಮೂಡಿಸಿದ ಘಟನೆ ನಡೆಯಿತು. ಬುಧವಾರ ಸಂತೆ ದಿನವಾಗಿದ್ದರಿಂದ ಸಂತೆಗೆ ಆಗಮಿಸಿದ್ದ ಕೆಲವು ಮಹಿಳೆಯರು ದಿಕ್ಕಾಪಾಲಾಗಿ ಓಡಿದರು, ಮಟನ್ ಮಾರ್ಕೆಟ್ ಸಮೀಪದಲ್ಲೇ ಡಿವೈಎಸ್ಪಿ ಕಚೇರಿ ಇದ್ದರೂ ಕೂಡ ಕಾನೂನು ಉಲ್ಲಂಘನೆ ಮಾಡಿ ಈ ರೀತಿ ಪ್ರತಿಭಟನೆ ನಡೆಸಿದ್ದು, ಸಾರ್ವಜನಿಕರಿಂದ ಆಕೋಶ ವ್ಯಕ್ತವಾಗಿದೆ. ಈ ರೀತಿ ಏಕಾಏಕಿ ಪ್ರತಿಭಟನೆ ಮಾಡಿದಲ್ಲದೆ ಕಾನೂನು ಉಲ್ಲಂಘಿಸಿ 2 ವರ್ಷಗಳಿಂದ ಕಾನೂನು ಬಾಹಿರವಾಗಿ ಮಟನ್ ಮಾರ್ಕೆಟ್ನಲ್ಲಿ ತಮ್ಮ ವ್ಯವಹಾರ ನಡೆಸಿದ್ದಲ್ಲದೆ ಬಾಡಿಗೆ ಕಟ್ಟದೆ ಪರವಾನಿಗೆ ಪಡೆಯದೆ ಈ ರೀತಿ ಉದ್ದಟತನ ತೋರಿ ಮಧುಗಿರಿಯಲ್ಲಿ ಶಾಂತಿಯ ಸಂಕೇತವಾಗಿರುವ ಸ್ಥಳವನ್ನು ಶಾಂತಿ ಭಂಗ ಮಾಡುವ ಯತ್ನ ಮಾಡಿದ್ದನ್ನು ಸಹ ಹಲವು ಬುದ್ಧಿಜೀವಿಗಳು ಖಂಡಿಸಿದ್ದಾರೆ.
ಪುರಸಭಾ ಮುಖ್ಯಾಧಿಕಾರಿ ನಜ್ಮಾ ಪ್ರತಿಕ್ರಿಯಿಸಿ, ಕಳೆದ 2 ವರ್ಷಗಳಿಂದ ಬಾಡಿಗೆ ಹಣ ಕಟ್ಟದೆ ಹಾಗೂ ಪರವಾನಗಿಯನ್ನು ಪಡೆಯದೆ ವ್ಯಾಪಾರ ಮಾಡುತ್ತಿದ್ದ ಬಗ್ಗೆ ಸಾಕಷ್ಟು ಬಾರಿ ಪುರಸಭೆ ವತಿಯಿಂದ ನೋಟಿಸ್ ನೀಡಿದರೂ ಕೂಡ ಕೇರ್ ಮಾಡದ ಕಾರಣ ಬೀಗ ಜಡಿಯಲಾಯಿತು ಎಂದು ತಿಳಿಸಿದರು.
ಇನ್ನೂ ಗುರು ಭವನದ ಮುಂಭಾಗದಲ್ಲಿರುವ 40 ವಾಣಿಜ್ಯ ಮಳಿಗೆಗಳಿಂದ 4 ಲಕ್ಷ ರೂ. ಕಂದಾಯ ಪಾವತಿಯಾಗಬೇಕಿದ್ದು, ಗುರುಭವನ ಸಮಿತಿಯವರು ಸಹ ನೋಟಿಸ್ ನೀಡಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಡಿಡಿಪಿಐ ಮತ್ತು ಬಿಇಒ ಅವರು ಗುರು ಭವನ ಸಮಿತಿಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ಹಣ ಡ್ರಾ ಮಾಡಲು ತಡವಾಗುತ್ತಿದೆ. ಇದರ ಬಗ್ಗೆ ಗುರು ಭವನ ಸಮಿತಿ ಫೆಬ್ರವರಿ 7 ರಂದು ಸಭೆ ಕರೆಯಲಾಗಿದ್ದು ಅಲ್ಲಿ ತೀರ್ಮಾನ ಕೈಗೊಂಡು ಹಣ ಕಟ್ಟಲಾಗುವುದು, ಇಲ್ಲವಾದರೆ ನಿಮ್ಮ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ, ಆದ್ದರಿಂದ ಫೆಬ್ರವರಿ 10 ರ ವರೆಗೂ ಗಡುವು ನೀಡಿದ್ದು, ಆ ದಿನದಂದು ಹಣ ಕಟ್ಟದಿದ್ದರೆ ಎಲ್ಲಾ ವಾಣಿಜ್ಯ ಮಳಿಗೆಗಳಿಗೂ ಬೀಗ ಜಡಿಯುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಮನೆಗಂದಾಯ, ನಲ್ಲಿ ಕಂದಾಯ, ಪುರಸಭೆಗೆ ಒಳಪಡುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣ ಪಾವತಿಸದವರ ವಿರುದ್ಧ ಕೂಡ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ನಜ್ಮಾ ತಿಳಿಸಿದ್ದಾರೆ.
ಲೈಸೆನ್ಸ್ ಇಲ್ಲದ ಮಟನ್ ಅಂಗಡಿಗಳಿಗೆ ಬಿತ್ತು ಬೀಗ
Get real time updates directly on you device, subscribe now.
Prev Post
Comments are closed.