ತುರುವೇಕೆರೆ: ದಕ್ಷ ಅಧಿಕಾರಿಯಾಗಿದ್ದ ತುರುವೇಕೆರೆ ಸಿಪಿಐ ನವೀನ್ ರವರ ಅಮಾನತ್ತುಗೊಳಿಸಿರುವ ಆದೇಶವನ್ನು ಸರಕಾರ 3 ದಿನದೊಳಗಾಗಿ ಹಿಂಪಡೆಯಬೇಕು ಇಲ್ಲವಾದಲ್ಲಿ ಸಿಪಿಐ ಕಚೇರಿ ಎದುರು ವಿವಿಧ ಸಂಘಟನೆಗಳು ಹಾಗೂ ನಾಗರೀಕರು ಸೇರಿ ಅಹೋರಾತ್ರಿ ಧರಣಿ ನಡೆಸುವುದಾಗಿ ಹೆಡಗೀಹಳ್ಳಿ ವಿಶ್ವನಾಥ್ ಎಚ್ಚರಿಸಿದ್ದಾರೆ.
ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಪಿಐ ನವೀನ್ ತುರುವೇಕೆರೆಗೆ ವೃತ್ತ ನೀರೀಕ್ಷಕರಾಗಿ ಕಾರ್ಯ ತೃಪ್ತಿಕರವಾಗಿತ್ತು. ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಮೂಲಕ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದರು. ಆದರೇ ಇತ್ತೀಚೆಗೆ ದಂಡಿನಶಿವರ ವ್ಯಾಪ್ತಿಯ ಕೋಡಿಹಳ್ಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಐ ನವೀನ್ರನ್ನು ಅಮಾನತ್ತಿನಲ್ಲಿಟ್ಟಿರುವುದು ನ್ಯಾಯ ಸಮ್ಮತವಾದುದಲ್ಲ. ಈ ಪ್ರಕರಣದಲ್ಲಿ ದಂಡಿನಶಿವರ ಪಿಎಸ್ಐ ಮಾಡಿದ್ದ ತಪ್ಪಿಗೆ ಸಿಪಿಐ ತಲೆದಂಡವಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ತುಂಬಬೇಕಾದ್ದು ಪ್ರತಿ ನಾಗರೀಕನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ದಕ್ಷ ಅಧಿಕಾರಿಯಾಗಿದ್ದ ಸಿಪಿಐ ನವೀನ್ರವರ ಬೆಂಬಲಕ್ಕೆ ನಿಲ್ಲುವುದು ಅನಿವಾರ್ಯವಾಗಿದೆ. ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಮಾಡಿದ್ದ ಸಿಪಿಐ ನವೀನ್ ರವರ ಅಮಾನತ್ತು ಆದೇಶವನ್ನು ಹಿಂಪಡೆದು ತುರುವೇಕೆರೆ ವೃತ್ತದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಟಿ.ಕೆ.ಚಿದಾನಂದ್ ಮಾತನಾಡಿ, ಕ್ಷುಲ್ಲಕ ಕಾರಣಕ್ಕಾಗಿ ದಕ್ಷ ಅಧಿಕಾರಿಯಾಗಿದ್ದ ಸಿಪಿಐ ನವೀನ್ರವರ ಅಮಾನತ್ತು ಮಾಡಿರುವ ಕ್ರಮ ಬೇಸರ ತಂದಿದೆ. ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನವೀನ್ ರವರ ಅಮಾನತ್ತು ಆದೇಶ ರದ್ದಾಗಬೇಕು. ಇಲ್ಲವಾದಲ್ಲಿ ನಾಗರೀಕರು ಹಮ್ಮಿಕೊಳ್ಳುವ ಅಹೋರಾತ್ರಿ ಧರಣಿಗೆ ಸಾಥ್ ನೀಡುವುದಾಗಿ ತಿಳಿಸಿದರು.
ಮುಖಂಡ ಕುಮಾರಸ್ವಾಮಿ ಮಾತನಾಡಿ, ಸಮಾಜದ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ಸಿಪಿಐ ನವೀನ್ ಉತ್ತಮ ಅಧಿಕಾರಿ ಎನಿಸಿದ್ದರು. ಸರಕಾರವು ಅಮಾನತ್ತು ಆದೇಶ ವಾಪಸ್ ಪಡೆಯುವಂತೆ ಶಾಸಕ ಮಸಾಲಜಯರಾಮ್, ಸಚಿವರಾದ ಜೆ.ಸಿ.ಮಾಧುಸ್ವಾಮಿ , ಬಿ.ಸಿ. ನಾಗೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗಜ್ಞಾನೇಂದ್ರ ಅವರಿಗೆ ತಾಲೂಕಿನ ಸಮಸ್ತ ನಾಗರೀಕರ ಪರವಾಗಿ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಯಜಮಾನ್ ಮಹೇಶ್, ಹರಿಕಾರನಹಳ್ಳಿಪ್ರಸಾದ್, ಮಾವಿನಹಳ್ಳಿಕುಮಾರಣ್ಣ, ಬಡಗರಳ್ಳಿರಾಮೇಗೌಡ, ಶಂಕರಣ್ಣ, ರೇಣುಕಣ್ಣ, ಪ್ರಕಾಶ್ಯಾದವ್, ಆಟೋ ಚಾಲಕ ಸಂಘದ ಅಧ್ಯಕ್ಷ ಗಂಗಾಧರ್, ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.
ಸಿಪಿಐ ನವೀನ್ ಅಮಾನತ್ತು ಆದೇಶ ರದ್ದುಗೊಳಿಸದಿದ್ರೆ ಹೋರಾಟ
Get real time updates directly on you device, subscribe now.
Prev Post
Next Post
Comments are closed.