ಸಕಾಲ ಅರ್ಜಿ ಸ್ವೀಕರಿಸಲು ಜಿಲ್ಲಾಧಿಕಾರಿ ಸೂಚನೆ

ಗ್ರಾಮ ಒನ್‌ ಯೋಜನೆ ಅನುಷ್ಠಾನ ಶೀಘ್ರ: ಡೀಸಿ

181

Get real time updates directly on you device, subscribe now.

ಕುಣಿಗಲ್‌: ತಾಲೂಕಿನಲ್ಲಿ ಗ್ರೇಡ್‌-1 ಗ್ರಾಪಂ ಗುರುತಿಸಿ ಗ್ರಾಮ-1 ಯೋಜನೆ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಹೇಳಿದರು.

ಗುರುವಾರ, ತಾಲೂಕು ಕಚೇರಿಗೆ ಭೇಟಿ ನೀಡಿ ವಿವಿಧ ವಿಭಾಗಗಳ ಪ್ರಗತಿ ಪರಿಶೀಲಿಸಿದರು. ತಾಲೂಕಿನಲ್ಲಿ ಬಗರ್‌ಹುಕುಂ ಸೇರಿದಂತೆ ಇತರೆ ಭೂಮಿ ಸಮಸ್ಯೆ ಸಾಕಷ್ಟಿವೆ. ಎಲ್ಲವನ್ನು ಹಂತ ಹಂತವಾಗಿ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಗ್ರೇಡ್‌1 ಗ್ರಾಪಂ ಗುರುತಿಸಿ ಶೀಘ್ರದಲ್ಲೆ ಗ್ರಾಮ-1 ಯೋಜನೆ ಅನುಷ್ಠಾನ ಮಾಡುವ ಮೂಲಕ ಗ್ರಾಮಸ್ಥರು ಪಟ್ಟಣ ಪ್ರದೇಶಕ್ಕೆ ದಾಖಲೆ ಪಡೆಯಲು ಬಾರದೆ ಅವರ ಗ್ರಾಮಪಂಚಾಯಿತಿಯಲ್ಲೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಹುಲಿಯೂರು ದುರ್ಗ ನಾಡಕಚೇರಿಯಲ್ಲಿ ರಾಜಸ್ವ ನಿರೀಕ್ಷಕರು ಸರಿಯಾಗಿ ಕೆಲಸಕ್ಕೆ ಬಾರದ ಬಗ್ಗೆ, ವಿವಿಧ ಹೋಬಳಿಗಳ ರಾಜಸ್ವ ನಿರೀಕ್ಷರು ಕೇಂದ್ರ ಸ್ಥಾನದಲ್ಲಿ ಇರದ ಬಗ್ಗೆ ದೂರುಗಳು ಬಂದಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಉಪತಹಶೀಲ್ದಾರ್‌ ಕಚೇರಿಗೆ ಜಾಗ ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪತ್ರಬರೆಯಲಾಗಿದೆ. ಕಟ್ಟಡ ನಿರ್ಮಾಣಗೊಂಡ ನಂತರ ಅಯಾ ಕಚೇರಿಯಲ್ಲೆ ಸಂಬಂಧಪಟ್ಟ ಭೂದಾಖಲೆ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲೂಕು ಕಚೇರಿಯಲ್ಲಿ ಸಕಾಲ ಯೋಜನೆಯಡಿಯಲ್ಲಿ ಅರ್ಜಿಸ್ವೀಕಾರ ಮಾಡುತ್ತಿಲ್ಲ, ಕೌಂಟರ್ ಸಹ ಇಲ್ಲ ಎಂಬ ದೂರು ಬಂದ ಮೇರೆಗೆ ಕೂಡಲೆ ಕೌಂಟರ್‌ ಪ್ರಾರಂಭಿಸಿ ಅರ್ಜಿಸ್ವೀಕರಿಸಲು ಸಿಬ್ಬಂದಿಗೆ ಸೂಚನೆ ನೀಡಿದರು.
ಪುರಸಭೆ ಅಧ್ಯಕ್ಷ ರಂಗಸ್ವಾಮಿ ಭೇಟಿ ಮಾಡಿ, ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಕಂದಾಯ ಭೂಮಿಯಲ್ಲೂ ಖಾತೆ ಮಾಡಲಾಗಿದೆ. ಇನ್ನು ಕೆಲವೆಡೆ 1948ರಿಂದಲೂ ಖಾತೆ ಇದ್ದು ಎಲ್ಲಾ ಖಾತೆಯನ್ನು ಸರಿಗೊಳಿಸಬೇಕೆಂದು ಮನವಿ ಸಲ್ಲಿಸಿದ್ದ ಮೇರೆಗೆ ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪುರಸಭೆ ಅಧ್ಯಕ್ಷರು ಪುರಸಭೆಗೆ ಬಾಕಿ ಇರುವ ಸರ್ಕಾರಿ ಕಚೇರಿಗಳ ಅಸ್ತಿ ತೆರಿಗೆ ವಿವರ ನೀಡಿದ್ದು ಇಂಜಿನಿಯರಿಂಗ್‌ ಕಚೇರಿ, ವಸತಿಗೃಹ 2016 ರಿಂದ 3.97ಲಕ್ಷ, ಪೊಲೀಸ್‌ ವಸತಿಗೃಹ, ಕಚೇರಿ ಸೇರಿ ಪ್ರಸಕ್ತಸಾಲಿಗೆ 2.92ಲಕ್ಷ, ಸಾರ್ವಜನಿಕ ಅಸ್ಪತ್ರೆ 2002 ರಿಂದ 5.30ಲಕ್ಷ, ಪಿಎಲ್‌ಡಿಬ್ಯಾಂಕ್‌ 2002ರಿಂದ 13.41ಲಕ್ಷರೂ. ಬೆಸ್ಕಾಂ ಕಚೇರಿ 2002ರಿಂದ 2.39ಲಕ್ಷ, ತಾಲೂಕು ಪಂಚಾಯಿತಿ 2002 ರಿಂದ 8.59ಲಕ್ಷರೂ.ಬಾಕಿ ಇದ್ದು ಕುದುರೆ ಫಾರಂ ಅಸ್ತಿ ತೆರಿಗೆ ಬಾಕಿ ಪಟ್ಟಿ ಸಿದ್ದಪಡಿಸಲಾಗುತ್ತಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳ ಭೇಟಿ ವೇಳೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್‌, ಪ್ರಭಾರ ತಹಶೀಲ್ದಾರ್‌ ತಿಪ್ಪೆಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್‌, ಸದಸ್ಯರಾದ ನಾಗಣ್ಣ, ಮಲ್ಲಿಪಾಳ್ಯ ಶ್ರೀನಿವಾಸ್‌ ಇತರರು ಇದ್ದರು.

ಆರ್‌ಐ ಅಮಾನತ್ತು

ಜಿಲ್ಲಾಧಿಕಾರಿಗಳು ತಾಲೂಕು ಭೇಟಿ ವೇಳೆ, ಕೊತ್ತಗೆರೆ ನಾಡಕಛೇರಿಗೆ ಭೇಟಿ ನೀಡಿದ್ದು, ರಾಜಸ್ವ ನಿರೀಕ್ಷಕ ನಾಗೇಶ್‌ ಎಂಬುವರು ತಡವಾಗಿ ಅಗಮಿಸಿದ್ದು, ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ರಾಜಸ್ವ ನಿರೀಕ್ಷಕರನ್ನು ಅಮಾನತ್ತಿಗೆ ಆದೇಶಿಸಿದರು.

Get real time updates directly on you device, subscribe now.

Comments are closed.

error: Content is protected !!