ತುಮಕೂರು: ನಗರದಲ್ಲಿ ಯಾವುದೇ ಪರವಾನಗಿ, ಮುಂಜಾಗ್ರತಾ ಪರಿಕರಗಳಿಲ್ಲದೆ ವಿವಿಧ ಕೈಗಾರಿಕೆಗಳಿಗೆ, ಕ್ರಷರ್ ಗಳಿಗೆ ಬೇಕಾದ ಡಿಸೇಲ್ ಸಾಗಾಣೆ ಮಾಡುತ್ತಿದ್ದ ವಾಹನವನ್ನು ಆರ್‌ಟಿಓ ಇನ್ಸ್ಪೆಕ್ಟರ್ ಸದ್ರುಲ್ಲಾ ಷರೀಫ್ ಜಪ್ತಿ ಮಾಡಿ, ಕೇಸು ದಾಖಲಿಸಿದ್ದಾರೆ.
ತುಮಕೂರು ನಗರದ ವಿವಿಧ ಕೈಗಾರಿಕೆಗಳು, ಕ್ರಷರ್ ಗಳಿಗೆ ಅಗತ್ಯವಿರುವ ಡಿಸೇಲ್ ಪೂರೈಸಲು ಸರಕಾರದಿಂದ ಅನುಮತಿ ಪಡೆಯದೆ, ಡಿಸೇಲ್ ಸಾಗಿಸುವ ವೇಳೆ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸದೆ ಹಲವು ವರ್ಷಗಳಿಂದ ಕೆಎ 06ಸಿ2198 ವಾಹನ, ಗಾಯಿತ್ರಿ ಪೆಟ್ರೋಲ್ ಪಂಪ್ ಗೆ ಸೇರಿದ 407 ವಾಹನ, ಡಿಸೇಲ್ ಸಾಗಾಣಿಕೆ ಮಾಡುತ್ತಿದ್ದು, ವಾಹನದ ಮೇಲೆ ಇಂಧನ ಸಾಗಾಣಿಕಾ ವಾಹನ ಎಂಬ ನಾಮಫಲಕವನ್ನು ಹಾಕದೆ ಜನನಿಬೀಡ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ವಾಹನದಿಂದ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಖಚಿತ ಮಾಹಿತಿ ಮೇರೆಗೆ ಆರ್‌ಟಿಓ ಇನ್ಸ್ಪೆಕ್ಟರ್ ವಾಹನ ತಪಾಸಣೆ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.
ಸದರಿ ವಾಹನ ಈ ಹಿಂದೆ ಮಧುಗಿರಿ ಆರ್‌ಟಿಒ ಕಚೇರಿಯಲ್ಲಿ ಬ್ಲಾಕ್ ಲೀಸ್ಟ್ ಗೆ ಸೇರಿದ್ದು, ದಂಡಕಟ್ಟ ಬೇಕಾಗಿದ್ದು, ದಂಡವನ್ನು ಪಾವತಿಸದೆ ಹಲವು ತಿಂಗಳಿಂದ ಸಂಚಾರ ನಡೆಸುತ್ತಿರುವುದು ತನಿಖೆ ವೇಳೆ ದೃಢಪಟ್ಟ ಹಿನ್ನೆಲೆಯಲ್ಲಿ ವಾಹನವನ್ನು ಜಪ್ತಿ ಮಾಡಿ, ಮಾಲೀಕರು ಮತ್ತು ಚಾಲಕರ ಮೇಲೆ ಮೋಟಾರು ವಾಹನ ಕಾಯ್ದೆ ಅಪಾಯಕಾರಿ ವಾಹನ ಅಡಿ ಕೇಸು ದಾಖಲಿಸಿದ್ದಾರೆ.
ಅನಧಿಕೃತ ಡಿಸೇಲ್ ಸಾಗಾಣಿಕೆ ವಾಹನ ಜಪ್ತಿ
Get real time updates directly on you device, subscribe now.
Comments are closed.