ಜನತೆ ಆಶೀರ್ವಾದದಿಂದ ಎಂಎಲ್ಸಿ ಪಟ್ಟ ಸಿಕ್ಕಿದೆ: ಚಿದಾನಂದ್ ಎಂ

ಸರಳವಾಗಿ ಹುಟ್ಟು ಹಬ್ಬ ಆಚರಿಸಿ 11 ವಿದ್ಯಾರ್ಥಿಗಳ ಶಿಕ್ಷಣಕ್ಕೆ ದತ್ತು ಸ್ವೀಕರಿಸಿದ ಎಂಎಲ್ಸಿ

374

Get real time updates directly on you device, subscribe now.

ಶಿರಾ: ಗ್ರಾಮೀಣ ಪ್ರದೇಶದ ಬಡಕುಟುಂಬದಿಂದ ಬಂದ ನನಗೆ ಜನರು ಆಶೀರ್ವಾದ ಮಾಡಿದ ಕಾರಣ ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ವಿಯಾಗಿ, ವಿಧಾನಪರಿಷತ್ ಸದಸ್ಯ ಸ್ಥಾನದವರೆಗೂ ಬಂದು ನಿಂತಿದ್ದೇನೆ ಇದಕ್ಕೆ ಕಾರಣ ನನಗೆ ವಿದ್ಯೆ ನೀಡಿದ ಗುರು, ಸಮಾಜಮುಖಿ ಚಿಂತನೆಯ ಅರಿವು ಮೂಡಿಸಿ ಬೆಳೆಸಿದ ತಂದೆ-ತಾಯಿ ಹಾಗೂ ಸಮಾಜಸೇವೆ ಮಾಡುವಂತೆ ಪ್ರೇರೇಪಿಸಿದ ಸ್ನೇಹಿತರು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಅವರು ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಕೋವಿಡ್ನಿಂದ ಸಂಕಷ್ಟಕ್ಕೊಳಗಾಗಿದ್ದ ಕುಟುಂಬಗಳ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ 11 ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಮಾತನಾಡಿದರು. ತನ್ನ ಹುಟ್ಟೂರಿನಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಬೇಕೆಂದು ನನ್ನ ಮಹದಾಸೆಯಾಗಿತ್ತು. ಅದರಂತೆ ಶಿರಾದಲ್ಲಿ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದೆ. ಇದರಿಂದ ಕಳೆದ ಇಪ್ಪತ್ತು ವರ್ಷಗಳಿಂದ ತಾಲ್ಲೂಕಿನಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಯಿತು. ಇಂದು ನನ್ನ ಹುಟ್ಟು ಹಬ್ಬದ ಪ್ರಯುಕ ಶಿರಾ ತಾಲ್ಲೂಕಿನ 11 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಆ ಮಕ್ಕಳಿಗೆ ಎಲ್ಕೆಜಿ ಯಿಂದ ಪಿಯುಸಿ ವರೆಗೆ ಸಂಪೂರ್ಣ ಉಚಿತವಾಗಿ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದೇನೆ. ಹುಟ್ಟು ಹಬ್ಬಗಳು ಅರ್ಥಪೂರ್ಣವಾಗಿ ಸಮಾಜಮುಖಿ ಕೆಲಸಗಳ ಮೂಲಕವಾಗಬೇಕಿದೆ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಕೊರೊನಾ ರೋಗದಿಂದ ಪ್ರಪಂಚದ ಮನುಕುಲವನ್ನು ನಲುಗಿಸಿದೆ. ಇದರಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಸಾವಿರಾರು ಮಕ್ಕಳು ಗುಣಮಟ್ಟದ ಶಿಕ್ಷಣ ವಂಚಿತರಾಗಿದ್ದಾರೆ. ಅವರ ಬಾಳಲ್ಲಿ ನಾಡಿನ ಗಣ್ಯರು, ಪ್ರಜ್ಞಾವಂತರು ಭರವಸೆಯ ಬೆಳಕು ಮೂಡಿಸಬೇಕಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಶಿರಾ ಅಂಬೇಡ್ಕರ್ ಉದ್ಯಾನವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಗರದ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಶಾಲಾ ಆವರಣದಲ್ಲಿ ಗಿಡನೆಟ್ಟು, ಸರಕಾರಿ ಆಸ್ಪತ್ರೆಗೆ ಕೋವಿಡ್ ಕಿಟ್ಗಳನ್ನು ವಿತರಿಸಿ ನಂತರ ರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು.
ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಅವರು ಶುಭಾಷಯ ಸಲ್ಲಿಸಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಾ.ಪಿ.ಹೆಚ್.ಮಹೇಂದ್ರಪ್ಪ, ಪ್ರಾಂಶುಪಾಲ ಚಂದ್ರಯ್ಯ, ಮಾಜಿ ತಾ.ಪಂ. ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಶಿರಾ ನಗರ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್, ಚಂಗಾವರ ಮಾರಣ್ಣ, ಮಾಜಿ ನಗರಸಭಾ ಸದಸ್ಯರಾದ ನಟರಾಜ್, ಪ್ರಕಾಶ್ ಮುದ್ದುರಾಜ್ ಸೇರಿದಂತೆ ಹಲವರು ಶುಭಾಶಯ ಕೋರಿದರು.

Get real time updates directly on you device, subscribe now.

Comments are closed.

error: Content is protected !!