ತುಮಕೂರು: ಹಿಜಾಬ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು, ಅವರೇ ಕಾನೂನು ರೂಪಿಸಿ ಈಗ ವಿರೋಧವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರಿನ ಶಾಲಾ ಕಾಲೇಜಿನಲ್ಲಿಯೂ ಹಿಜಾಬ್ ಧರಿಸಿ ಬರುವ ಹೆಣ್ಣು ಮಕ್ಕಳಿದ್ದಾರೆ, ಧರ್ಮದಲ್ಲಿ ರಾಜಕಾರಣ ಬೆರೆಸಬಾರದು, ಆದರೆ ಮದರಸಾಗಳಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎನ್ನುವುದನ್ನು ಸರ್ಕಾರ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿರುವ ಸೌಹಾರ್ದ ಪರಿಸ್ಥಿತಿ ಹೀಗೆ ಮುಂದುವರೆಯಬೇಕಾದರೆ ಹಿಜಾಬ್ ಧರಿಸಬೇಕು ಎನ್ನುವವರ ಮೇಲೆ ದೇಶ ದೋಹದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದ ಅವರು, ಗೋಹತ್ಯೆ ಪ್ರಕರಣದಲ್ಲಿ ಆರೋಪಿಗಳು ಬುರ್ಖಾ ಧರಿಸಿಕೊಂಡು ಓಡಾಡುತ್ತಿದ್ದಾರೆ ಎಂದರು.
ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸಿ ಎನ್ನುವುದು ಇಲ್ಲ, ಇವರೇ ಮಾಡಿಕೊಂಡಿರುವುದು ಅಷ್ಟೆ, ಹಿಂದೆ ಭಾರತದಲ್ಲಿ ಬುರ್ಖಾ ಧರಿಸುವ ಪದ್ಧತಿ ಇರಲಿಲ್ಲ, ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ, ಬುರ್ಖಾ ಧರಿಸದೆ ಇದ್ದರೂ ಸೌಹಾರ್ದಯುತವಾಗಿ ಬದುಕು ನಡೆಸಿದ್ದೇವೆ, ಈಗ ಮಾತ್ರ ಹಿಜಾಬ್ ಧರಿಸಬೇಕೆನ್ನುವುದು ಎಷ್ಟು ಸರಿ ಎಂದರು ಪ್ರಶ್ನಿಸಿದರು.
ಡೋಂಗಿ ರಾಜಕಾರಣಿಗಳಿಂದ ದೇಶ ವಿಭಜನೆಯಾಯಿತು, ಎಪ್ಪತ್ತೈದು ವರ್ಷವಾದರೂ ದೇಶ ಮುಂದುವರೆಯಲು ಬಿಡಲಿಲ್ಲ, ವಿದ್ಯಾರ್ಥಿಗಳನ್ನು ವಿಂಗಡಿಸಿದರೆ ದೇಶದಲ್ಲಿ ಸೌಹಾರ್ದತೆ ಉಳಿಯುತ್ತದೆಯೆ, ಕೇರಳ ಹೈಕೋರ್ಟ್ ಹಿಜಾಬ್ ಬ್ಯಾನ್ ಮಾಡಿದೆ, ಆದರು ಧರಿಸುತ್ತಾರೆ ಎಂದರೆ ಇದು ಅಫ್ಘಾನಿಸ್ತಾನ ಅಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಯಸಿಂಹ ಇದ್ದರು.
ಹಿಜಾಬ್ ಧರಿಸಿ ಎನ್ನುವವರ ಮೇಲೆ ಕೇಸ್ ಹಾಕಿ: ಸೊಗಡು ಶಿವಣ್ಣ
Get real time updates directly on you device, subscribe now.
Prev Post
Comments are closed.