ಹಿಜಾಬ್‌, ಕೇಸರಿ ಶಾಲು ವಿವಾದ ತರವಲ್ಲ: ಶ್ರೀನಿವಾಸ್

151

Get real time updates directly on you device, subscribe now.

ಗುಬ್ಬಿ: ರಾಜ್ಯದ ಕೆಲವು ಶಾಲೆಗಳಲ್ಲಿ ಹಿಜಾಬ್‌ ಹಾಗೂ ಕೇಸರಿ ನಡುವೆ ಉದ್ಭವಿಸಿರುವ ಘಟನೆ ಬಹಳಷ್ಟು ಬೇಸರ ತರಿಸುತ್ತದೆ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಎಸ್‌.ಕೊಡಿಗೇಹಳ್ಳಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಪಾಠ ಶಾಲೆಯ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಓದುತ್ತಿರುವ ಮಕ್ಕಳಿಗೆ ಯಾವುದೇ ರೀತಿಯ ಜಾತಿ, ಧರ್ಮದ ಸಂಕೋಲೆಗಳಿಗೆ ಸಿಲುಕಿಸದೆ ನಾವೆಲ್ಲರೂ ಭಾರತೀಯರು, ರಾಜ್ಯದ ಕೆಲವು ಶಾಲೆಗಳಲ್ಲಿ ಹಿಜಾಬ್‌ ಹಾಗೂ ಕೇಸರಿ ನಡುವೆ ಉದ್ಭವಿಸಿರುವಂತಹ ಘಟನೆ ಬಹಳಷ್ಟು ಬೇಸರ ತರಿಸುತ್ತದೆ, ಶಾಲಾ ಮಕ್ಕಳಿಗೆ ಇಂತಹ ಧರ್ಮ, ಜಾತಿಯ ವಿಚಾರ ಹಚ್ಚಿರುವುದು ಸಮುದಾಯ ಪೋಷಕರು ಮಕ್ಕಳಿಗೆ ಆತಂಕ ಸೃಷ್ಟಿಮಾಡಿದೆ, ಬಿಜೆಪಿ ಪಕ್ಷವು ಧರ್ಮ, ದೇವಾಲಯ ಹಿಂದುತ್ವದ ಅಜೆಂಡಾ ಇಟ್ಟು ಕೊಂಡಿರುವುದು ಅವರ ಮೂಲ ತತ್ವವಾಗಿದೆ, ಆದರೆ ಇದನ್ನು ಶಾಲಾ ಕಾಲೇಜುಗಳಿಗೆ ತರುವುದು ಸೂಕ್ತವಲ್ಲ, ಯಾರೇ ತಪ್ಪು ಮಾಡಿದರು ಸಹ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಕೇಸರಿ ಹಾಗೂ ಹಿಜಾಬ್‌ ಇವೆರಡೂ ಶಾಲೆಯಲ್ಲಿ ತರದೆ ನಾವೆಲ್ಲ ಒಂದೇ ಎಂದು ಸಾರುವ ಶಾಲೆಯ ಸಮವಸ್ತ್ರ ಮಾತ್ರ ಕಡ್ಡಾಯ ಮಾಡಬೇಕು, ಇದು ಹೀಗೆ ಮುಂದುವರಿದರೆ ಸಮುದಾಯ ಪೋಷಕರು ಆತಂಕದಲ್ಲಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕಾಗುತ್ತದೆ ಎಂದರು.
ಇನ್ನೂ ಕೇಂದ್ರ ಬಜೆಟ್‌ನಲ್ಲಿ ಯಾವುದೇ ರೀತಿಯ ರೈತರಿಗೆ ಅನುಕೂಲವಾಗುವಂತಹ ಕೆಲಸ ಮಾಡಿಲ್ಲ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದ ಮೋದಿಯವರು ಕೇವಲ ಭಾಷಣ ಮಾಡುವುದಕ್ಕೆ ಅಷ್ಟೇ ಸೀಮಿತ ಬಿಟ್ಟರೆ ಕೃತಿ ಏನು ಇಲ್ಲ, ಬಜೆಟ್‌ನಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಯಾವುದೇ ರೀತಿಯ ಅನುದಾನ ನೀಡಿಲ್ಲ, ಯೋಜನೆಯು ಇಲ್ಲ, ಸಣ್ಣ ಕೈಗಾರಿಕೆಗಳಿಂದ ಸುಮಾರು ಶೇ.70 ರಷ್ಟು ಉದ್ಯೋಗ ಸಿಗುತ್ತದೆ, ಅದನ್ನು ಕಡೆಗಣಿಸಲಾಗಿದೆ, ಕೇವಲ ಖಾಸಗೀಕರಣಕ್ಕೆ ಹೆಚ್ಚು ಒತ್ತು ಕೊಡುವಂತಹ ಪ್ರಧಾನಿಯವರು ಅದಾನಿ, ಅಂಬಾನಿ ಅಂತಹವರಿಗೆ ದೇಶವನ್ನು ಮಾರಾಟ ಮಾಡುವುದಕ್ಕೆ ಸಿದ್ಧರಾಗಿದ್ದಾರೆ ಎಂದರು.
ಮುಂದಿನ ರಾಜ್ಯ ಬಜೆಟ್‌ ಸಹ ಇದೇ ರೀತಿ ಇರುತ್ತದೆ ಎಂಬುದು ಸ್ಪಷ್ಟವಾಗಿದೆ, ರಾಜ್ಯದ ನೀರಾವರಿ ಯೋಜನೆಗಳನ್ನು ಇದುವರೆಗೂ ಮಾಡಿಲ್ಲ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಂದೇ ಇದ್ದಲ್ಲಿ ಎಲ್ಲಾ ರೀತಿಯ ಕೆಲಸ ಮಾಡುತ್ತೇವೆ ಎಂದವರು ಯಾವ ನೀರಾವರಿ ಜೋಡಣೆ ಕಾರ್ಯವು ಮಾಡಿಲ್ಲ, ರಾಜ್ಯದ ರೈಲ್ವೆ ವಿಚಾರದಲ್ಲಿ ಅಭಿವೃದ್ಧಿ ಕೆಲಸ ಮಾಡುವುದರಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗಾಲಕ್ಷ್ಮಿರಾಮಚಂದ್ರ, ಉಪಾಧ್ಯಕ್ಷ ಪಾಂಡು, ಮುಖಂಡರಾದ ಸೊ.ಮು.ಮುನಿಯಪ್ಪ, ಮಂಜುನಾಥ್‌, ನವೀನ್‌, ರಾಮು, ರಾಜು, ತಿಮ್ಮೇಗೌಡ, ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!