ಮುಖ್ಯಶಿಕ್ಷಕನ ಧೋರಣೆಗೆ ಪೋಷಕರ ಆಕ್ರೋಶ

350

Get real time updates directly on you device, subscribe now.

ಕುಣಿಗಲ್‌: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರ ಧೋರಣೆ ಖಂಡಿಸಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಪೋಷಕರು ಧರಣಿಗೆ ಇಳಿದು ಮುಖ್ಯಶಿಕ್ಷಕನ ಮೇಲೆ ಕ್ರಮಕ್ಕೆ ಆಗ್ರಹಿಸಿದ ಮೇರೆಗೆ ಕ್ಷೇತ್ರಶಿಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಹುಲಿಯೂರುದುರ್ಗ ಸಮೀಪದ ಕೊಡವತ್ತಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಶಾಲೆಗೆ ತಡವಾಗಿ ಬರುವುದು, ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ವಿದ್ಯಾರ್ಥಿಗಳನ್ನು ಅಸಂಬದ್ಧ ಪದಗಳಿಂದ ನಿಂದಿಸಿದ್ದರಿಂದ ಬೇಸತ್ತ ಪೋಷಕರು ಸದರಿ ಮುಖ್ಯಶಿಕ್ಷಕನನ್ನು ಮೇಲೆ ಕ್ರಮಕ್ಕೆ ಆಗ್ರಹಿಸಿ ಧರಣಿಗೆ ಮುಂದಾಗಿದ್ದಲ್ಲದೆ ಕೂಡಲೆ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ಶಾಲೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ವರದಿ ನೀಡಬೇಕಾದ ಸಿಆರ್ಪಿ ಸಹ ಸರಿಯಾದ ವರದಿ ನೀಡದ ಬಗ್ಗೆಯೂ ಪೋಷಕರು ಆರೋಪಿಸಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜಯ್ಯ ಕಳೆದ ಬುಧವಾರ ಶಾಲೆಗೆ ಭೇಟಿ ನೀಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವರಾಮ, ನಾಗೇಶ ಅವರೊಂದಿಗೆ ಚರ್ಚೆ ನಡೆಸಿದ್ದು, ಪೋಷಕರು ಸದರಿ ಶಾಲೆಯಲ್ಲಿ ಕೊವಿಡ್‌ ಮುನ್ನ ನಲವತ್ತರಿಂದ ನಲವತ್ತೈದು ವಿದ್ಯಾರ್ಥಿಗಳಿದ್ದರು, ಇದೀಗ ಎಂಭತ್ತು ಮಕ್ಕಳು ದಾಖಲಾಗಿದ್ದಾರೆ, ಶಿಕ್ಷಕರ ಕೊರತೆ ಇದ್ದು ಶಾಲಾಭಿವೃದ್ಧಿ ಸಮಿತಿಯವರೆ ಮಕ್ಕಳಿಗೆ ಶಿಕ್ಷಣ ನೀಡಲು ಖಾಸಗಿಯಾಗಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಂಡಿದ್ದೇವೆ, ಆದರೆ, ಶಾಲೆಯಲ್ಲಿ ಮುಖ್ಯಶಿಕ್ಷಕರೊಬ್ಬರ ವರ್ತನೆಯಿಂದ ಇಡೀ ಶಾಲೆಗೆ ಕೆಟ್ಟ ಹೆಸರು ಬರುವಂತಾಗಿದೆ, ಇದೆ ರೀತಿ ನಡೆದರೆ ಸರ್ಕಾರಿ ಶಾಲೆಗೆ ಒಳ್ಳೆಯ ಹೆಸರು ಬರುತ್ತದೆ ಕೂಡಲೆ ಕ್ರಮ ಜರುಗಿಸಲು ಆಗ್ರಹಿದರು.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿದೆ.

Get real time updates directly on you device, subscribe now.

Comments are closed.

error: Content is protected !!