ಸರ್ವೆ ಶುಲ್ಕ ಹೆಚ್ಚಳಕ್ಕೆ ರೂಪೇಶ್ ಆಕ್ರೋಶ

166

Get real time updates directly on you device, subscribe now.

ಶಿರಾ: ಭೂ ಸರ್ವೆ ಅರ್ಜಿ ಶುಲ್ಕವನ್ನು ರಾಜ್ಯ ಸರ್ಕಾರ 35 ರೂ. ನಿಂದ ಗರಿಷ್ಟ 4000 ರೂ. ವರೆಗೆ ಏಕಾಏಕಿ ಏರಿಸಿ ಈಗಾಗಲೇ ಕೋವಿಡ್ ನೆರೆ ಮತ್ತು ಅಕಾಲಿಕ ಮಳೆಯಿಂದ ಕಂಗೆಟ್ಟಿರುವ ರೈತರ ಮೇಲೆ ಮತ್ತೊಂದು ಪ್ರಹಾರ ಮಾಡಿದಂತಾಗಿದೆ ಎಂದು ಸಾಮಾಜಿಕ ಚಿಂತಕ ಹಾಗೂ ಅಹಿಂದ ಯುವ ಮುಖಂಡ ರೂಪೇಶ್ ಕೃಷ್ಣಯ್ಯ ಆಕೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಹದ್ದುಬಸ್ತು ಅರ್ಜಿಗೆ ಪ್ರತಿ ಸರ್ವೆ ನಂಬರ್ ಗೆ 35 ರೂ. ಇತ್ತು, ಅಂದಾಜು 45 ವರ್ಷಗಳ ಹಿಂದೆ ಈ ಶುಲ್ಕ ನಿಗದಿಪಡಿಸಲಾಗಿತ್ತು, ಇದುವರೆಗೆ ಪರಿಷ್ಕರಣೆ ಆಗಿರಲಿಲ್ಲ, ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ ಅಧಿಕವಾಗಿರುವ ಹಿನ್ನಲೆಯಲ್ಲಿ ಶುಲ್ಕ ಏರಿಸಲಾಗಿದೆ ಎಂದು ಆದೇಶದಲ್ಲಿ ಹೇಳುವ ಸರ್ಕಾರ ಹತ್ತು ಪಟ್ಟು ಶುಲ್ಕ ಏರಿಕೆ ಅಥವಾ ಹಂತ ಹಂತವಾಗಿ ಪರಿಷ್ಕರಣೆ ಮಾಡಿದ್ದರು ಒಪ್ಪಬಹುದಾಗಿತ್ತು, ಆದರೆ ಏಕಾಏಕಿ ಹೆಚ್ಚು ಕಮ್ಮಿ 50 ಪಟ್ಟು ಹೆಚ್ಚು ಮಾಡಿರುವುದು ಅದರಲ್ಲೂ ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಸಮರ್ಥನೀಯವಲ್ಲ ಹಾಗೂ ನಾನಾ ವಲಯಗಳಿಗೆ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿರುವ ಬಡ ಹಿಡುವಳಿದಾರರ ಜೇಬಿಗೆ ಕತ್ತರಿ ಹಾಕುತ್ತಿದೆ.

ಹಾಲಿ ಶುಲ್ಕ ಕಟ್ಟಿ ವರ್ಷಗಳೇ ಕಳೆದರೂ ಕೆಲಸವೂ ಆಗುತ್ತಿಲ್ಲ, ಬೆಳೆದ ಬೆಳೆಗೆ ಸರಿಯಾಗಿ ಬೆಲೆಯೂ ಸಿಗದೆ ಇರುವ ಪರಿಸ್ಥಿತಿಯಲ್ಲಿ ಜಮೀನು ಗುರುತಿಸುವಿಕೆಗೆ ಸಾವಿರಾರು ರೂ. ಶುಲ್ಕ ಕಟ್ಟುವ ಸನ್ನಿವೇಶ ಎದುರಾಗಿದೆ, ಇಂತಹ ವ್ಯವಸ್ಥೆ ಹಾಗೂ ಸರ್ಕಾರದ ತೀರ್ಮಾನಗಳ ವಿರುದ್ಧ ಯಾವ ರಾಜಕೀಯ ಪಕ್ಷಗಳಾಗಲಿ ರಾಜಕಾರಣಿಗಳಾಗಲಿ ರೈತ ಪರ ಸಂಘಟನೆಗಳಾಗಲಿ ಬಾಯಿ ಬಿಚ್ಚದೆ ಅನಾವಶ್ಯಕ ವಿಚಾರ ಹಾಗೂ ವಿವಾದಗಳ ಕಡೆ ಜನರ ಗಮನ ಸೆಳೆಯುತ್ತಿರುವುದು ಸರಿಯಲ್ಲ , ಸರ್ಕಾರ ಈ ವಿಚಾರವಾಗಿ ತನ್ನ ತೀರ್ಮಾನವನ್ನು ಮರು ಪರಿಶೀಲಿಸುವಂತೆ ರೂಪೇಶ್ ಕೃಷ್ಣಯ್ಯ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!