ಕುಣಿಗಲ್: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ, ವಿರೋಧ ಪಕ್ಷಗಳಿಗಿಂತ ಬಲಿಷ್ಠವಾಗಿದೆ, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರು ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ನೇತೃತ್ವದಲ್ಲಿ ವಿವಿಧ ಕಾಂಗ್ರೆಸ್ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದಲೆ ನಾನು ಸ್ಪರ್ಧಿಸುತ್ತೇನೆ ಎಂದು ಮಾಜಿ ಸಂಸದ ಎಸ್‌ಪಿಎಂ ಹೇಳಿಕೆ ನೀಡುತ್ತಿದ್ದಾರೆ, ಮುಂದಿನ ವಿಧಾನಸಭೆ ಚುನಾವಣೆಗೆ ಅವರೆ ಅಧಿಕೃತವಾಗಿ ಕಾಂಗ್ರೆಸ್‌ನಿಂದ ಟಿಕೆಟ್ ತರಲಿ ಎಲ್ಲರೂ ಸೇರಿ ಅವರನ್ನು ಗೆಲ್ಲಿಸುತ್ತೇವೆ, ಅದು ಬಿಟ್ಟು ಜನತೆಗೆ ಬೇರೆ ಸಂದೇಶ ನೀಡುವಂತೆ ಮಾತನಾಡುವುದು ಸರಿಯಲ್ಲ, ವಿರೋಧ ಪಕ್ಷವಾದ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ತಮ್ಮ ಹುಟ್ಟೂರಿಗೆ ಮಂಜೂರಾದ ರಸ್ತೆ ಕಾಮಗಾರಿ ಅನುದಾನ ಅನುಷ್ಠಾನ ಮಾಡದೆ ವಿನಾಕಾರಣ ಶಾಸಕರ ಬಗ್ಗೆ ತೇಜೋವಧೆ ಮಾಡುವುದು ಸರಿಯಲ್ಲ, ಎಲ್ಲೆಂದರಲ್ಲಿ ಶಾಸಕರ ಕಾರ್ಯ ವೈಖರಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ, ಬಿಜೆಪಿ ಸರ್ಕಾರ ತಾಲೂಕಿನಲ್ಲಿ ಅಭಿವೃದ್ಧಿ ಮಾಡಲು ಅಡ್ಡಗಾಲಾಗಿರುವುದು ಜನತೆಗೆ ತಿಳಿದೆ, ಹೀಗಿರುವಾಗ ಜನಸಂಪರ್ಕ ಸಭೆಯ ಮೂಲಕ ತಾಲೂಕಿನ ಜನರ ದಿಕ್ಕುತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಶಾಸಕರ ಕಾರ್ಯವೈಖರಿ ಸಹಿಸಲಾಗದೆ ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದು ಅವರ ಪಕ್ಷದ ಶಾಸಕರಾಗಿದ್ದ ಅವಧಿಯಲ್ಲಿ ತಾಲೂಕಿನ ಹಲವಾರು ಕೆರೆಗಳಿಗೆ 25 ವರ್ಷಗಳಿಂದ ನೀರು ಏಕೆ ಹರಿಸಲಿಲ್ಲ ಎಂದು ಹೇಳಲಿ, ಶಾಸಕ ಡಾ.ರಂಗನಾಥ ಸತತ ಕಾರ್ಯ ವೈಖರಿಯಿಂದ 25 ವರ್ಷಗಳಿಂದ ನೀರು ಹರಿಯದ ಕೆರೆಗಳಿಗೆಲ್ಲಾ ನೀರು ಹರಿಸಿದ್ದಾರೆ ಎಂದರು.
ಮುಖಂಡ ಹಾಲುವಾಗಿಲು ಸ್ವಾಮಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಅತ್ಯಂತ ದುರ್ಬಲವಾಗಿದ್ದ ಸಮಯದಲ್ಲಿ ಸಂಸದ ಡಿ.ಕೆ.ಸುರೇಶ್ ಆಗಮಿಸಿ ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿ ತುಂಬಿದ್ದರಿಂದ ಪಕ್ಷವೂ ತಾಲೂಕಿನಲ್ಲಿ ಹೆಚ್ಚು ಬಲಿಷ್ಠವಾಗಿದೆ. ಈ ಹಂತದಲ್ಲಿ ಮಾಜಿ ಸಂಸದರು ಪಕ್ಷದಲ್ಲಿ ಒಳ್ಳೆ ಬೆಳವಣಿಗೆ ನಡೆಯುತ್ತಿಲ್ಲ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ, ಮುಖಂಡರು ಯಾರೆ ಆಗಲಿ ಪಕ್ಷ ಕಟ್ಟಿ ಬೆಳೆಸಬೇಕು ವಿನಃ ಪಕ್ಷ ಸಂಘಟನೆಗೆ ತೊಂದರೆಯಾಗುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ, ಕೊವಿಡ್ ಮೊದಲ, ಎರಡನೆ ಅಲೆಯಲ್ಲಿ ಜನಪರ ಸೇವೆಗೆ ನಿಂತಿದ್ದು ಶಾಸಕರು, ಶಾಸಕರ, ಸಂಸದರ ಕಾರ್ಯ ವೈಖರಿಯಿಂದ ಕಾಂಗ್ರೆಸ್ ಪಕ್ಷವೂ ತಾಲೂಕಿನಲ್ಲಿ ಬಲಿಷ್ಠವಾಗಿದೆ ಎಂದರು.
ಮುಖಂಡರಾದ ಬೇಗೂರು ನಾರಾಯಣ, ಕುಮಾರ, ಬೋರೆಗೌಡ, ರಾಮಣ್ಣ, ಹರೀಶ, ರಾಜಣ್ಣ, ಗಂಗಾಧರ ಇತರರು ಇದ್ದರು.
ಕುಣಿಗಲ್‌ನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ
Get real time updates directly on you device, subscribe now.
Next Post
Comments are closed.