ನಡು ರಸ್ತೆಯಲ್ಲೇ ಮಡದಿಗೆ ಮಚ್ಚಿನೇಟು!

237

Get real time updates directly on you device, subscribe now.

ಶಿರಾ: ಗಂಡನೇ ನಡು ರಸ್ತೆಯಲ್ಲೇ ತನ್ನ ಮಡದಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ದೊಡ್ಡ ಆಲದಮರ ಗೇಟ್‌ ಬಸ್‌ ನಿಲ್ದಾಣದ ಬಳಿ ಮಂಗಳವಾರ ನಡೆದಿದೆ.

ಹಲ್ಲೆಗೊಳಗಾದ ಮಹಿಳೆ ಜ್ಯೋತಿ (25) ಎಂದು ತಿಳಿದುಬಂದಿದ್ದು, ತಾಲ್ಲೂಕಿನ ಹನುಮಂತನಗರದ ವಾಸಿಗಳಾಗಿರುವ ದಂಪತಿಗಳಾದ ಜ್ಯೊತಿ ಹಾಗೂ ಬಾಲು ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹೆಂಡತಿ ತವರು ಮನೆಗೆ ಹೊರಟು ದೊಡ್ಡಾಲದಮರ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಇದರಿಂದ ರೊಚ್ಚಿಗೆದ್ದ ಪತಿ ಬಾಲು ಮಚ್ಚಿನ ಸಮೇತವಾಗಿ ಬಸ್‌ ನಿಲ್ದಾಣಕ್ಕೆ ಬಂದು ಮಡದಿಯನ್ನು ಮನಬಂದಂತೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಈ ವೇಳೆ ಹೈವೆ ರೌಂಡ್ಸ್ ನಲ್ಲಿದ್ದ ಕಳ್ಳಂಬೆಳ್ಳ ಠಾಣೆಯ ಎಎಸ್‌ಐ ಗೋವಿಂದರಾಜು ಹಾಗೂ ಚಾಲಕ ಮಹೇಶ್‌ ತಮ್ಮ ಪ್ರಾಣದ ಹಂಗನ್ನು ತೊರೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!