ಕೋವಿಡ್‌ ನಿಯಮಾನುಸಾರ ಜಾತ್ರೆ ಯಶಸ್ವಿ

ಐತಿಹಾಸಿಕ ಪ್ರಸಿದ್ಧ ಬಂಡಿ ಶ್ರೀರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

259

Get real time updates directly on you device, subscribe now.

ಶಿರಾ: ಶಿರಾ ತಾಲೂಕಿನ ತಾವರೆಕೆರೆ ಗ್ರಾಮದ ಐತಿಹಾಸಿಕ ಪ್ರಸಿದ್ಧ ಬಂಡಿ ಶ್ರೀರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ತಾಲೂಕು ಆಡಳಿತದ ಕಟ್ಟುನಿಟ್ಟಿನ ಕ್ರಮಗಳ ನಡುವೆ ಕೋವಿಡ್‌ ನಿಯಮಗಳನುಸಾರ ಸರಳ ರೀತಿಯಿಂದ ನೆರವೇರಿತು.

ಬಂಡಿ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ರದ್ದು ಮಾಡಿದ್ದ ತಾಲೂಕು ಆಡಳಿತ ಸರಳ ರೀತಿಯಲ್ಲಿ ಬ್ರಹ್ಮರಥೋತ್ಸವ ನಡೆಸುವಂತೆ ಅನುಮತಿ ನೀಡಿತ್ತು. ಸೋಮವಾರ ಮಧ್ಯಾಹ್ನ 2 ಗಂಟೆಗೆ ಬ್ರಹ್ಮರಥೋತ್ಸ ಹೂವಿನ ಅಲಂಕಾರ ಹಾಗೂ ಧಾರ್ಮಿಕ ಪೂಜೆ ವಿಧಾನಗಳ ಮೂಲಕ ರಥೋತ್ಸವ ನಡೆಯಲು ಸಿದ್ಧಗೊಂಡಿತು. ರಥಕ್ಕೆ ಗರುಡ ಪ್ರದಕ್ಷಿಣೆಗೆ ಹಾಕಿದರೆ ಮಾತ್ರ ರಥೋತ್ಸವ ನಡೆಯುತ್ತದೆ ಎಂಬ ಭಕ್ತರ ನಂಬಿಕೆ ಹುಸಿಯಾಗಲಿಲ್ಲ ಇಂದೂ ಸಹ ರಂಗನಾಥಸ್ವಾಮಿ ರಥಕ್ಕೆ ಗರುಡ ಪ್ರದಕ್ಷಿಣೆ ಹಾಕಿ ಭಕ್ತರನ್ನು ಪುಳಕಿತರನ್ನಾಗಿಸಿತು.
ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಸಿ.ಎಂ.ರಾಜೇಶ್‌ ಗೌಡ ಅವರು ಕೋವಿಡ್‌ ನಿಯಮಗಳ ಪ್ರಕಾರ ಸರಳ ರೀತಿಯಲ್ಲಿ ರಥೋತ್ಸವ ಕಾರ್ಯಕ್ರಮ ನೆರವೇರಿಸಲು ಸಹಕರಿಸಿದ ಭಕ್ತ ಸಮೂಹಕ್ಕೆ ಕೃತಜ್ಞತೆ ಸಲ್ಲಿಸಿದರು, ಕೊರೋನಾದಂತಹ ಸಾಂಕ್ರಾಮಿಕ ರೋಗ ಇಡೀ ಜಗತ್ತಿಗೆ ಕಂಟಕವಾಗಿ ಪರಿಣಮಿಸಿ ಜೀವನವೇನೆಂಬುದನ್ನು ತೋರಿಸಿದೆ. ಇಂತಹ ರೋಗಗಳು ಶಾಶ್ವತವಾಗಿ ದೂರವಾಗಲು ದೈವ ಶಕ್ತಿ ಅನುಗ್ರಹ ಅಗತ್ಯವಿದ್ದು ಮುಂಬರುವ ದಿನಗಳು ರಾಜ್ಯ ಮತ್ತು ಶಿರಾ ಕ್ಷೇತ್ರದಲ್ಲಿ ಜನ ಆರೋಗ್ಯದಿಂದ ಮತ್ತು ಸುಭಿಕ್ಷೆಯಿಂದ ಇರುವಂತೆ ಆಶೀರ್ವದಿಸಬೇಕೆಂದು ಬಂಡಿ ಶ್ರೀರಂಗನಾಥ ಸ್ವಾಮಿಯಲ್ಲಿ ಒಬ್ಬ ಸಾಮಾನ್ಯ ಭಕ್ತನಾಗಿ ಪ್ರಾರ್ಥಿಸುವುದಾಗಿ ತಿಳಿಸಿದರು.
ತಹಸಿಲ್ದಾರ್‌ ಮಮತಾ, ಗ್ರೇಡ್‌-2 ತಹಸಿಲ್ದಾರ್‌ ಮಂಜುನಾಥ್‌, ಉಪತಹಸೀಲ್ದಾರ್‌ ಸುನಿಲ್‌ ಕುಮಾರ್‌, ಮುಖಂಡರಾದ ಕೃಷ್ಣೇಗೌಡ, ತಾವರೆಕೆರೆ ದೇವರಾಜು, ಮನೋಹರ ನಾಯಕ್‌, ಗ್ರಾ.ಪಂ. ಸದಸ್ಯ ಶಿವು ಸ್ನೇಹಪ್ರಿಯ, ಬಲರಾಮ್‌ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!