ಕುಣಿಗಲ್: ತಾಲೂಕಿನಾದ್ಯಂತ ಕಳೆದೊಂದು ವಾರದಲ್ಲಿ ಜಾನುವಾರು ಕಳ್ಳತನ ಮಿತಿ ಮೀರಿದ್ದು ರೈತರು, ಜಾನುವಾರು ಮಾಲೀಕರು ಪರದಾಡುವಂತಾಗಿದೆ. ಪೊಲೀಸ್ ಇಲಾಖೆಯವರು ಜಾನುವಾರು ಕಳ್ಳತನ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಆಗ್ರಹಿಸಿದ್ದಾರೆ.
ತಾಲೂಕಿನ ಸೋಮೇದೇವರ ಪಾಳ್ಯದಲ್ಲಿ ಕಳೆದ ಭಾನುವಾರ ರಾತ್ರಿ ಗರ್ಭ ಧರಿಸಿದ್ದ ಒಂದು ಲಕ್ಷ ರೂ. ಮೌಲ್ಯದ ಸೀಮೆ ಹಸು ಕಳವು ಮಾಡಲಾಗಿದೆ, ಈ ಘಟನೆ ನಂತರ ಅರಸರಪಾಳ್ಯದಲ್ಲಿನ ರೈತರೊಬ್ಬರು ಸಾಕಿದ್ದ ನಾಲ್ಕು ಮೇಕೆ ಕಳವು ಮಾಡಲಾಗಿದೆ, ಶಾನಭೋಗನಹಳ್ಳಿಯಲ್ಲಿ ಕೆಲದಿನದ ಹಿಂದೆ ಮೂವತ್ತು ಕುರಿ ಕಳವು ಮಾಡಲಾಗಿದೆ. ತಾಲೂಕಿನಾದ್ಯಂತ ಹಲವಾರು ಕಡೆಗಳಲ್ಲಿ ಜಾನುವಾರು ಕಳವು ಮಾಡಲಾಗುತ್ತಿದೆ. ಸಾಮಾನ್ಯ ರೈತ ಠಾಣೆಗೆ ತೆರಳಿ ದೂರು ನೀಡದ ಸ್ಥಿತಿ ಇದೆ, ಕಾರಣ ಠಾಣೆಗಳಲ್ಲಿ ಕೆಲ ಪೊಲೀಸರ ವರ್ತನೆ ಅವರ ಕಿಡಿನುಡಿಗಳು ರೈತನನ್ನು ಹತಾಶೆಗೊಳಿಸುತ್ತಿದೆ, ಒಂದೆಡೆ ಕೊವಿಡ್ ಮಹಾಮಾರಿ, ಮತ್ತೊಂದೆಡೆ ಅತಿವೃಷ್ಠಿಯ ಹೊಡೆತದಿಂದ ಬದುಕು ಕಟ್ಟಿಕೊಳ್ಳಲು ರೈತರು ಜಾನುವಾರು ಸಾಕಾಣೆ ಅವಲಂಬಿಸಿದ್ದು ಕಳ್ಳರ ಕಾಟದಿಂದ ರೈತರ ಬದುಕು ದುಸ್ತರವಾಗುತ್ತಿದೆ. ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಾನುವಾರು ಕಳ್ಳತನ ತಡೆಗಟ್ಟುವಂತೆ ಆಗ್ರಹಿಸಿದ್ದಾರೆ.
ಜಾನುವಾರು ಕಳ್ಳತನ ತಪ್ಪಿಸಲು ರೈತರ ಆಗ್ರಹ
Get real time updates directly on you device, subscribe now.
Prev Post
Next Post
Comments are closed.