ಹಿಂದುಳಿದ ವರ್ಗಗಳಿಗೆ ದೊಡ್ಡ ಇತಿಹಾಸವಿದೆ: ಧನಿಯಕುಮಾರ್

177

Get real time updates directly on you device, subscribe now.

ತುಮಕೂರು: ಕುಲಕಸುಬವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಶ್ರಮಜೀವಿ ಸಮುದಾಯಗಳಿಗೆ ಅದರದ್ದೇ ಆದ ಇತಿಹಾಸವಿದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್‌ ತಿಳಿಸಿದ್ದಾರೆ.

ನಗರದ ಕಾಳಿದಾಸ ಹಾಸ್ಟೆಲ್ ನಲ್ಲಿ ನಡೆದ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಐತಿಹಾಸಿಕ ಹಿನ್ನೆಲೆ ಇರುವ ಶ್ರಮ ಸಂಸ್ಕೃತಿಯ ಸಮುದಾಯಗಳು ಇಂದು ಹಲವಾರು ಬಿಕ್ಕಟ್ಟು ಅನುಭವಿಸುತ್ತಿದ್ದು, ಇವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಬೇಕಿದೆ ಎಂದರು.
ಸರಕಾರ ಹಲವರು ಸಮುದಾಯಗಳನ್ನು ಗುರುತಿಸಿ, ಅವುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿದೆ, ಆದರೆ ನೀಡಿರುವ ಅನುದಾನ ಅತ್ಯಂತ ಕಡಿಮೆ ಇದೆ, ಸವಿತಾ ಸಮಾಜದ ಅಭಿವೃದ್ಧಿಗೆ ನೀಡಿದ ಅನುದಾನ ಐದು ಕೋಟಿ ರೂ. ಗಳಲ್ಲಿ ಆ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕನಿಷ್ಠ 25 ಕೋಟಿ ರೂ. ಗಳನ್ನಾದರೂ ಸರಕಾರ ಬಜೆಟ್‌ನಲ್ಲಿ ಮೀಸಲಿಡಬೇಕು, ಹಾಗೆಯೇ ಇತರೆ ಸಮುದಾಯಗಳ ನಿಗಮಗಳಿಗೂ ಹೆಚ್ಚಿನ ಅನುದಾನ ನೀಡಿದಾಗ ಮಾತ್ರ ತಳ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯ, ಇದರ ಜೊತೆಗೆ ಈ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಧನಿಯಕುಮಾರ್‌ ತಿಳಿಸಿದರು.
ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರಗೌಡ ಮಾತನಾಡಿ, ಹಿಂದುಳಿದ ವರ್ಗದಲ್ಲಿರುವ ಎಲ್ಲಾ 96 ಜಾತಿಗಳಿಗೆ ಎಲ್ಲಾ ರೀತಿಯ ಅವಕಾಶಗಳು ಮುಕ್ತವಾಗಿ ದೊರೆತು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಕಲ್ಪಿಸಬೇಕಿದೆ, ಸರಕಾರ ನೀಡುತ್ತಿರುವ ಸವಲತ್ತುಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಹಿಂದುಳಿದ ವರ್ಗಗಳ ಮುಖಂಡ ಹಾಗೂ ಪತ್ರಕರ್ತ ಟಿ.ಎನ್‌.ಮಧುಕರ್‌ ಮಾತನಾಡಿ, ಹಿಂದುಳಿದ ವರ್ಗಗಳ ಒಕ್ಕೂಟದಿಂದ ಸಮುದಾಯದ ಎಲ್ಲಾ ಹಿರಿಯರ ಜಯಂತಿಗಳನ್ನು ಸಾಮೂಹಿಕವಾಗಿ ಆಚರಿಸುಬೇಕು, ಈ ಮೂಲಕ ಸಮುದಾಯಗಳಲ್ಲಿ ಪರಸ್ವರ ಸ್ನೇಹವನ್ನು ಗಟ್ಟಿಗೊಳಿಸುವ ಕೆಲಸ ಮಾಡಲಾಗುತ್ತಿದೆ, ಇದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.
ಇಂದಿನ ಕರ್ನಾಟಕದ ಸ್ಥಿತಿ ಅತ್ಯಂತ ಸಂದ್ಗಿತೆಯಲ್ಲಿದೆ, ಹಿಜಾಬ್‌ ಮತ್ತು ಕೇಸರಿ ಶಾಲಿನ ನಡುವಿನ ಕಿತ್ತಾಟದಿಂದ ಸಮಾಜದ ಮುಂದಿನ ಪ್ರಜೆಗಳಲ್ಲಿ ಪರಸ್ವರ ದ್ವೇಷ ಭಾವನೆ ಹುಟ್ಟುವಂತೆ ಮಾಡಿದೆ, ಇದರ ಪರಿಣಾಮ ಭಾರತದ ಭವಿಷ್ಯ ಮತ್ತಷ್ಟು ಘನಘೋರವಾಗಲಿದೆ. ಹಿಜಾಬ್‌ ಇಂದು ಹುಟ್ಟಿದ್ದಲ್ಲ, ನಾವು ಓದುವಾಗಲು ಮಕ್ಕಳು ಧರಿಸುತ್ತಿದ್ದರು, ಆದರೆ ಈಗ ಮುನ್ನೆಲೆಗೆ ಬರಲು ಕಾರಣ ಏನು ಎಂಬುದನ್ನು ನಾವು ಅರಿಯಬೇಕಿದೆ, ರಾಜಕೀಯ ಪಕ್ಷಗಳ ಮೇಲಾಟಕ್ಕೆ ವಿದ್ಯಾರ್ಥಿಗಳು ಬಲಿಯಾಗುವುದು ಬೇಡ, ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು, ಶಾಲಾ, ಕಾಲೇಜುಗಳಲ್ಲಿ ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು ಎಂದು ಮಧುಕರ್‌ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಶಾಂತಕುಮಾರ್‌, ಕೆಂಪರಾಜು, ಪ್ರೆಸ್‌ ರಾಜಣ್ಣ, ರೈತ ಸಂಘದ ಪರುಶುರಾಮ್‌, ಸವಿತಾ ಸಮಾಜದ ಮಂಜೇಶ್‌, ವಿಠಲ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!