ಕಾರ್ಮಿಕರ ಪರ ಕಾಯ್ದೆ ರೂಪಿಸಬೇಕಿದೆ: ಬಿ.ಉಮೇಶ್

108

Get real time updates directly on you device, subscribe now.

ತುಮಕೂರು: ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ಸಂಹಿತಿಕರಣಗೊಳಿಸುವ ಪ್ರಕ್ರಿಯೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನು 1996 ಹಾಗೂ ಸೆಸ್‌ ಕಾನೂನು ರದ್ದು ಮಾಡಿದೆ, ಜೊತೆಗೆ ಕೇಂದ್ರದ ಕಾರ್ಮಿಕ ಸಂಹಿತೆ ಅಡಿಯಲ್ಲಿ ಸೆಸ್‌ ಸಂಗ್ರಹ ಮಿತಿಯನ್ನು 10 ಲಕ್ಷ 1996 ಈ ಎರಡೂ ಕಾನೂನುಗಳನ್ನು ರೂಪಾಯಿ ಮೌಲ್ಯದಿಂದ 50 ಲಕ್ಷ ರೂಪಾಯಿ ಮೌಲ್ಯ ಮೇಲ್ಪಟ್ಟು ಎಂದು ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ಸೆಸ್‌ ಸಂಗ್ರಹ ಗಣನೀಯವಾಗಿ ಕುಸಿಯಲಿದೆ ಕೂಡಲೇ ಸರ್ಕಾರ 1996ರ ಆದೇಶದಂತೆ ಕಾರ್ಮಿಕರಿಗೆ ರೂಪಿಸಬೇಕು ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಸಮಿತಿ ಜಿಲ್ಲಾಧ್ಯಕ್ಷ ಬಿ.ಉಮೇಶ್‌ ಒತ್ತಾಯಿಸಿದರು.

ನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ನೀಡಿ ನಂತರ ಮಾತನಾಡಿ, ರಾಜ್ಯದಲ್ಲಿ ಕಟ್ಟಡ ಕಾರ್ಮಿಕ ಮಂಡಳಿ ಮತ್ತು ಸೆಸ್‌ ಸಂಗ್ರಹ ವ್ಯವಸ್ಥೆ ಬಲಪಡಿಸಲು ಕ್ರಮ ವಹಿಸಬೇಕು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲೆ ಜಿಎಸ್‌ಟಿ ಏರಿಕೆ ಮಾಡಿರುವುದರಿಂದ ಕಟ್ಟಡ ನಿರ್ಮಾಣ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ, ನಿರುದ್ಯೋಗ ಹೆಚ್ಚುವ ಜೊತೆಗೆ ಆರ್ಥಿಕ ಚಟುವಟಿಕೆ ಸೊರಗಲಿದೆ ಎಂದರು.
ಕೇಂದ್ರ ಸರ್ಕಾರದ ಕಾರ್ಪೊರೇಟ್‌ ನೀತಿಗಳನ್ನು ಕೈಬಿಡಬೇಕು, ಕಟ್ಟಡ ಉದ್ಯಮ ರಕ್ಷಿಸಬೇಕು, ಅಂತರ ರಾಜ್ಯ ವಲಸೆ ಕಾರ್ಮಿಕರ ಕಾನೂನು- 1979ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಫೆಡರೆಷನ್‌ ಸಮಿತಿಯ ಗೌರವಾಧ್ಯಕ್ಷ ಟಿ.ಎಂ.ಗೋವಿಂದರಾಜು, ಬೆಟ್ಟಪ್ಪ, ಇಬ್ರಾಹಿಂ ಖಲೀಲ್‌, ರವೀಶ್‌, ಕಾಂತರಾಜು, ಉಪಾಧ್ಯಕ್ಷ ಶಂಕರಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!