ತುಮಕೂರು: ರಾಜ್ಯದ ಸಮಗ್ರ ಶಿಕ್ಷಣ, ಆರೋಗ್ಯ ಮತ್ತು ಜನ ಜೀವನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರ ಬಡವರು, ಮಧ್ಯಮ ವರ್ಗ,ಪರಿಶಿಷ್ಟ ಜಾತಿ ಮತ್ತು ವರ್ಗಗಳು ಹಾಗೂ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರಿಗೆ ಅನುಕೂಲವಾಗುವಂತಹ ಜನಪರ ಬಜೆಟ್ ಮಂಡಿಸಬೇಕೆಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರಗಳು ತಮ್ಮ ಬಜೆಟ್‌ಗಳಲ್ಲಿ ಜನಪ್ರಿಯತೆಯ ಹೆಸರಿನಲ್ಲಿ ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಆಕಾಶ ತೋರಿಸಿ ಪಾತಳಕ್ಕೆ ತುಳಿಯುವ ಕೆಲಸ ಮಾಡುತ್ತಿವೆ, ಸರಕಾರಿ ಶಾಲೆಗಳನ್ನು ಮುಚ್ಚಿಸಿ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂ. ವಂತಿಗೆ ಕಟ್ಟಿ ಶಿಕ್ಷಣ ಪಡೆಯುವಂತಾಗಿದೆ, ಹಾಗಾಗಿ ಈ ಸಾಲಿನ ಬಜೆಟ್‌ನಲ್ಲಿ ಕನಿಷ್ಠ 30 ಸಾವಿರ ಕೋಟಿ ರೂ. ಮೀಸಲಿಡಬೇಕು, ಪ್ರತಿ ತಾಲೂಕು ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪದವಿ ಕಾಲೇಜುಗಳನ್ನು ನಿರ್ಮಿಸಬೇಕು, ವಿದ್ಯಾರ್ಥಿ ನಿಲಯಗಳ ಮೇಲ್ದೆರ್ಜೆಗೆರಿಸುವುದರ ಜೊತೆಗೆ ವಿದ್ಯಾರ್ಥಿಗಳ ಊಟದ ಭತ್ಯೆ ಹೆಚ್ಚಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯವೆಂಬುದು ಜನ ಸಮಾನ್ಯರಿಗೆ ಕೈಗೆಟುಕದಂತಾಗಿದೆ, ಹಾಗಾಗಿ ಸರಕಾರ ಪ್ರತಿ ಪ್ರಜೆಗೂ ಉಚಿತ ಆರೋಗ್ಯ ಒದಗಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಜಾರಿಗೆ ತರಬೇಕು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಪಿಹೆಚ್‌ಸಿ ತೆರೆಯುವ ಮೂಲಕ ಜನರಿಗೆ ಉಚಿತ ಆರೋಗ್ಯ ಒದಗಿಸಬೇಕೆಂಬುದು ಎಸ್‌ಡಿಪಿಐ ಆಗ್ರಹವಾಗಿದೆ ಎಂದು ಭಾಸ್ಕರ್ ಪ್ರಸಾದ್ ತಿಳಿಸಿದರು.
ದೇಶದ ಜನಸಂಖ್ಯೆಯ ಶೇ.12 ರಷ್ಟಿರುವ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಮೀಸಲಿಡಬೇಕು, ಸಾಲದ ಯೋಜನೆಯ ಅನುದಾನ ದ್ವಿಗುಣಗೊಳಿಸಬೇಕು, ಸಂಪೂರ್ಣ ಬಡ್ಡಿ ರಹಿತ ಸಾಲ ನೀಡುವುದರ ಜೊತೆಗೆ ಕನ್ನಡ ಮತ್ತು ಉರ್ದು ಶಾಲೆಗಳನ್ನು ಮೇಲ್ದೆರ್ಜೆಗೆರಿಸಬೇಕು, ಎಸಿ, ಸಿಪಿ, ಟಿಎಸ್‌ಪಿ ಅನುದಾನವನ್ನು ಸಮರ್ಪಕ ಬಳಕೆ ಮಾಡದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂಬುದು ಎಸ್‌ಡಿಪಿಐ ಒತ್ತಾಯವಾಗಿದೆ, ಜೆಸ್ಟಿಸ್ ಸದಾಶಿವ ಆಯೋಗದ ವರದಿ ಜಾರಿ, ಕಾಂತರಾಜ್ ಆಯೋಗದ ವರದಿ ಬಿಡುಗಡೆಯಾಗಬೇಕೆಂಬುದು ನಮ್ಮ ಆಗ್ರಹವಾಗಿದೆ, ಒಟ್ಟು 28 ವಿವಿಧ ಅಂಶಗಳನ್ನು ಮುಂದಿಟ್ಟುಕೊಂಡು ಮುಂದಿನ ಬಜೆಟ್‌ನಲ್ಲಿ ಸೇರಿಸುವಂತೆ ಸರಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಉಮ್ರುದ್ದೀನ್, ಜಿಲ್ಲಾ ಉಪಾಧ್ಯಕ್ಷ ಆಲೀಂ ಉಲ್ಲಾ ಶರೀಫ್, ಜಿಲ್ಲಾ ಕೋಶಾಧಿಕಾರಿ ಷಫಿಉಲ್ಲಾ ಖಾನ್ ಮತ್ತು ಸದಸ್ಯರಾದ ಮುಕ್ತಾರ್ ಅಹಮದ್ ಮತ್ತಿತರರು ಇದ್ದರು.
ಹಿಂದುಳಿದ ವರ್ಗಗಳಿಗಾಗಿ ಅಭಿವೃದ್ಧಿ ಬಜೆಟ್ ಮಂಡಿಸಿ
Get real time updates directly on you device, subscribe now.
Comments are closed.