ನವದೆಹಲಿ: ಕೊರೋನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದು ಇದೇ ಸಂದರ್ಭದಲ್ಲಿ ಮೂರನೇ ಬಾರಿಗೆ ವಿಡಿಯೋ ಸಂದೇಶದ ಮೂಲಕ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
11 ನಿಮಿಷ 30 ಸೆಕೆಂಡ್‌ಗಳ ವಿಡಿಯೊದಲ್ಲಿ ‘ಕೊರೊನಾ ಅಂಧಕಾರ ಓಡಿಸಲು ಎಲ್ಲರೂ ಒಂದೇ ಸಮಯಕ್ಕೆ ದೀಪ ಬೆಳಗೋಣ, ನಾವು ಯಾರೂ ಒಂಟಿಯಲ್ಲ ಎಂದು ಸಾರೋಣ’ ಎಂಬ ಸಂದೇಶ ನೀಡಿದ್ದಾರೆ.
ಕರೊನಾ ಅಂಧಕಾರವನ್ನು ಹೋಗಲಾಡಿಸಲು ಇದೇ ಭಾನುವಾರ ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಕೇವಲ ಒಂಭತ್ತು ನಿಮಿಷ ಕೊಡಿ. 130 ಕೋಟಿ ಭಾರತೀಯರು ಮನೆಯ ಎಲ್ಲ ಲೈಟ್ಗಳನ್ನೂ ಆರಿಸಿ, ಮೊಂಬತ್ತಿ, ದೀಪ, ಟೋರ್ಚ್, ಮೊಬೈಲ್ನ ಫ್ಲ್ಯಾಶ್ ಲೈಟನ್ನು ಹಿಡಿದು ಮನೆಯ ಮೇಲೆ ಬಾಲ್ಕನಿಗೋ, ಜಗುಲಿಗೋ ಬನ್ನಿ. ನಾವೆಲ್ಲ ಒಟ್ಟಾಗಿ ಒಂದು ಸಂದೇಶವನ್ನು ಸಾರೋಣ.
ನಾವು ಒಂಟಿಯಲ್ಲ, ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ. ನಾವೆಲ್ಲರೂ ಜತೆಗಿದ್ದೇವೆ ಎಂಬ ಸಂದೇಶವದು. ಆ ಮೂಲಕ ಎಲ್ಲರ ಆತ್ಮಸ್ಥೈರ್ಯವನ್ನು ಹೆಚ್ಚಿಸೋಣ ಎಂದು ಪ್ರಧಾನಿ ಮೋದಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.
A video messsage to my fellow Indians. https://t.co/rcS97tTFrH
— Narendra Modi (@narendramodi) April 3, 2020
Comments are closed.