ಸರ್ಕಾರಿ ಸೇವೆ ಬೇಕು ಎಂದಾದರೆ ಪರೀಕ್ಷೆ ಎದುರಿಸಿ

ಸ್ಪರ್ಧಾತ್ಮಕ ಸಂಚಿಕೆ ಬಿಡುಗಡೆಗೊಳಿಸಿ ಲಿಂಗದಹಳ್ಳಿ ಚೇತನ್ ಕುಮಾರ್ ಹೇಳಿಕೆ

147

Get real time updates directly on you device, subscribe now.

ಶಿರಾ: ಇದು ಸ್ಪರ್ಧಾತ್ಮಕ ಯುಗ. ಚೆನ್ನಾಗಿ ಅಧ್ಯಯನ ಮಾಡಿ ಸಿದ್ಧರಾದರೆ ಮಾತ್ರ ನಾವು ಇಂದಿನ ಯುಗದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಸ್ಪರ್ಧಾಗೈಡ್ ಸಂಪಾದಕ ಲಿಂಗದಹಳ್ಳಿ ಲಿಂಗದಹಳ್ಳಿ ಚೇತನ್ ಕುಮಾರ್ ಹೇಳಿದರು.

ವಿಜಯವಾಣಿ ಹಾಗೂ ಸ್ಪರ್ಧಾಗೈಡ್ ಸಹಯೋಗದಲ್ಲಿ ತಾವರೆಕೆರೆ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ವಿಶೇಷ ಸಂಚಿಕೆ ವಿತರಿಸಿ ಮಾತನಾಡಿ, ನಾವು ಎಷ್ಟು ದಿನ ಬಾಳಿ ಬದುಕುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಒಂದೊಂದು ದಿನವೂ ನಮ್ಮ ಜೀವನದ ಆಯುಷ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ನಾವು ಅಂದುಕೊಂಡ ಗುರಿಯತ್ತ ನಾವು ದಾಪುಗಾಲು ಹಾಕಬೇಕು. ಆ ನಿಟ್ಟಿನಲ್ಲಿ ನಾವು ಸದಾ ಪ್ರಯತ್ನ ಮಾಡಬೇಕು. ದಿನದ 24 ಗಂಟೆಗಳ ಕಾಲ ನಾವು ಸಾಧನೆ ಮಾಡಲು ಎಷ್ಟು ಸಮಯ ಮೀಸಲಿಡಬೇಕು ಎಂಬುದರ ಕುರಿತು ಆಲೋಚಿಸಿ ವಿದ್ಯಾಭ್ಯಾಸ ಮಾಡಬೇಕು ಎಂದರು.
ನಾವು ಕಲಿಯುವ ಸಂದರ್ಭದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಬೆರಳೆಣಿಕೆಯಷ್ಟು ಸಂಸ್ಥೆಗಳಷ್ಟೆ ಇದ್ದವು. ಈಗ ತಿಳಿದುಕೊಳ್ಳಲು ಬಹಳಷ್ಟು ಅವಕಾಶಗಳಿವೆ. ಆದರೆ, ನಮ್ಮ ಭಾಗದಲ್ಲಿ ಜಾಗೃತಿಯ ಕೊರತೆ ಇದೆ. ಈ ಭಾಗದವರೂ ಐಎಎಸ್, ಐಪಿಎಸ್, ಕೆಎಎಸ್ ಮತ್ತಿತರ ಅಧಿಕಾರಿಗಳಾಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಒಲವು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣೇಗೌಡ, ವಿಜಯವಾಣಿ ವರದಿಗಾರ ಎಸ್.ಎನ್.ಜಯಪಾಲ್, ತಾವರೆಕೆರೆ ಮುಖ್ಯೋಪಾಧ್ಯಾಯ ರಂಗಣ್ಣ, ಮದ್ದಕ್ಕನಹಳ್ಳಿ ಮುಖ್ಯೋಪಾಧ್ಯಾಯ ರಂಗಯ್ಯ, ಪತ್ರಿಕಾ ವಿತರಕ ಸಂಘದ ಅಧ್ಯಕ್ಷ ನರಸಿಂಹಯ್ಯ, ಬಲರಾಮ್ ಜೆಸಿಬಿ, ತಾವರೆಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಷ್ಮಾ ಯಶೋಧರ, ಅಧ್ಯಾಪಕ ಶಿವಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!