ಮಧುಗಿರಿ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಐಸಿಯು ಸೌಲಭ್ಯವುಳ್ಳ ಆಂಬುಲೆನ್ಸ್ ನನ್ನು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ತಮ್ಮ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡುಗೆ ನೀಡಿದರು.
ಶನಿವಾರ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ ನಾರಾಯಣ ಸ್ವಾಮಿ ಹಾಗೂ ಅನೇಕ ಕಾರ್ಯಕರ್ತರೊಂದಿಗೆ ಚಿದಾನಂದ್ ಎಂ ಗೌಡ ಆ್ಯಂಬುಲೆನ್ಸ್ ಗೆ ಚಾಲನೆ ನೀಡಿದರು.
ಈ ಕಾರ್ಯಕ್ಕೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು, ಈ ವೇಳೆ ಎಂಎಲ್‌ಸಿ ಚಿದಾನಂದ್ ಎಂ.ಗೌಡ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿನ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರಗಳು ಕೋವಿಡ್ 1, 2, 3ನೇ ಅಲೆಯನ್ನು ದೇಶಾದ್ಯಂತ ಸಮರ್ಥವಾಗಿ ನಿರ್ವಹಿಸಿದೆ, ಬಿಜೆಪಿ ಸರ್ಕಾರ ಜನರ ಜೀವ ರಕ್ಷಣೆಗೆ, ಆರೋಗ್ಯ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದ್ದು, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವುದರ ಮೂಲಕ ಆಸ್ಪತ್ರೆಗಳಲ್ಲಿ ಆಮೂಲಾಗ್ರ ಬದಲಾವಣೆ ತಂದು ವೈದ್ಯರ ಕೊರತೆ, ಆಕ್ಸಿಜನ್ ಕೊರತೆ ನೀಗಿಸಲಾಗಿದೆ, ಸರ್ಕಾರದ ಕ್ರಮದಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಅವಲಂಬನೆ ಹೆಚ್ಚಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಸ್ವದೇಶಿ ಲಸಿಕೆ ತಯಾರಿಸಿ ಆಂದೋಲನದ ರೀತಿಯಲ್ಲಿ ರಾಷ್ಟ್ರದ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಮೂಲಕ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ದ ಗೆದ್ದಿದೆ, ಭಾರತ ವಿಶ್ವದ ಇತರ ರಾಷ್ಟ್ರಗಳಿಗೂ ಲಸಿಕೆ ಪೂರೈಸಿ ಜನರ ಜೀವ ಉಳಿಸುವ ಮಹತ್ಕಾರ್ಯ ಮಾಡಿದೆ, ಆ ಮೂಲಕ ವಿಶ್ವಸಂಸ್ಥೆ ಇಂದಲೂ ಮೆಚ್ಚುಗೆ ಗಳಿಸಿದೆ, ಈ ಸಾಧನೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ, ಇಡೀ ವಿಶ್ವವೇ ಇಂದು ಭಾರತದ ಸಹಾಯಕ್ಕಾಗಿ ಕಾದು ಕುಳಿತಿದೆ, ಗ್ರಾಮೀಣ ಭಾಗದ ಜನರಿಗೂ ತುರ್ತು ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯುವಂತಾಗಲು ಈ ಆ್ಯಂಬುಲೆನ್ಸ್ ಸೇವೆ ಬಳಸಿಕೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.
ಮಧುಗಿರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅವರ ಅನುದಾನದಲ್ಲಿ 23 ಲಕ್ಷ ರೂ. ವೆಚ್ಚದ ಆ್ಯಂಬುಲೆನ್ಸ್ ನ್ನು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ನೀಡಿದರು.
ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಶಾಸಕರಾದ ಜ್ಯೋತಿ ಗಣೇಶ್, ರಾಜೇಶ್ ಗೌಡ, ರೇಷ್ಮೆ ನಿಗಮ ಅಧ್ಯಕ್ಷ ಎಸ್.ಆರ್.ಗೌಡ, ತಾಲ್ಲೂಕು ಅಧ್ಯಕ್ಷ ನರಸಿಂಹ ಮೂರ್ತಿ, ಮುಖಂಡರಾದ ಕೃಷ್ಣ ಮೂರ್ತಿ, ಪ್ರಸನ್ನ ಕುಮಾರ್, ತೇಜಸ್, ತಿಪ್ಪೇಸ್ವಾಮಿ, ನಾಗೇಂದ್ರ, ನಾಗರಾಜಪ್ಪ, ಜಗದೀಶ್ ಇತರರು ಇದ್ದರು.
ಆಸ್ಪತ್ರೆಗೆ ಆ್ಯಂಬುಲೆನ್ಸ್ ನೀಡಿದ ಚಿದಾನಂದ ಗೌಡ
Get real time updates directly on you device, subscribe now.
Comments are closed.