ಪೋಷಕರು, ಶಿಕ್ಷಕರು ಕೋರ್ಟ್‌ ಆದೇಶ ಪಾಲಿಸಬೇಕು: ಸಿಪಿಐ

292

Get real time updates directly on you device, subscribe now.

ಕುಣಿಗಲ್‌: ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ನಿಷೇಧ ಕುರಿತಂತೆ ಉಚ್ಛನ್ಯಾಯಾಲಯ ನೀಡಿರುವ ಆದೇಶ ಪಾಲನೆ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಪ್ರೌಢಶಾಲೆಗಳಲ್ಲಿ ಪೋಷಕರ, ಶಿಕ್ಷಕರ ಸಭೆ ನಡೆಸಿ ಘನ ನ್ಯಾಯಾಲಯದ ಆದೇಶ ಪಾಲನೆ ನಿಟ್ಟಿನಲ್ಲಿ ಹಲವು ಸೂಚನೆ ನೀಡಿದರು.

ಪಟ್ಟಣದ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರು, ಪೋಷಕರ ಸಭೆಯಲ್ಲಿ ಸಿಪಿಐ ಡಿ.ಎಲ್.ರಾಜು, ನ್ಯಾಯಾಲಯವು ಶೈಕ್ಷಣಿಕ ಸಂಸ್ಥೆಯ ತರಗತಿಗಳಲ್ಲಿ ಯಾವುದೇ ತರಹದ ಧಾರ್ಮಿಕತೆ ಬಿಂಬಿಸುವ ವಸ್ತ್ರ ಸಂಹಿತೆ ಪಾಲನೆ ಮಾಡದೆ ಸಂಸ್ಥೆಗಳು ಸೂಚಿಸಿರುವ ಸಮವಸ್ತ್ರ ಧರಿಸಿ ಶೈಕ್ಷಣಿಕ ಚಟುಟಿವಟಿಕೆಗಳಲ್ಲಿ ತೊಡಗಿಕೊಳ್ಳಬೇಕು, ಯಾವುದೇ ರೀತಿಯಲ್ಲಿ ಆದೇಶ ಪಾಲನೆಗೆ ತೊಡಕುಂಟು ಮಾಡದೆ ಗೊಂದಲ ಸೃಷ್ಟಿಸಬಾರದು, ಶಾಲೆಗಳ ಆವರಣದ 200 ಮೀಟರ್‌ ಸುತ್ತಲೂ ನಿಷೇಧಾಜ್ಞೆ ಜಾರಿಯಲ್ಲಿದ್ದು ಯಾವುದೇ ರೀತಿಯ ಪ್ರತಿಭಟನೆ, ಗುಂಪು ಗೂಡುವಿಕೆಗೆ ಅವಕಾಶ ಇಲ್ಲ, ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಶಾಂತಿ ಸುವ್ಯವಸ್ಥೆ, ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಒಕ್ಕಲಿಗರ ಸಂಘದ ಅಧ್ಯಕ್ಷ ನಂಜುಂಡಯ್ಯ, ಕಾರ್ಯದರ್ಶಿ ಹುಚ್ಚೇಗೌಡ, ನಿರ್ದೇಶಕ ನಂಜುಂಡಪ್ಪ, ಶಿವಣ್ಣ ಸೇರಿದಂತೆ ಶಾಲೆಯ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!