ಇಂಗ್ಲಿಷ್‌ ಭಾಷಾ ಶಿಕ್ಷಕರ ನೇಮಕಕ್ಕೆ ವಿದ್ಯಾರ್ಥಿಗಳ ಒತ್ತಾಯ

295

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಮುನಿಯೂರು ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶಾಶ್ವತವಾಗಿ ಇಂಗ್ಲಿಷ್‌ ಭಾಷಾ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಎಸ್‌ಡಿಎಂಸಿ ಅಧ್ಯಕ್ಷರು, ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.

ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು ಮಾತನಾಡಿ, ಕಳೆದ ಕೆಲ ತಿಂಗಳಿಂದ ಶಿಕ್ಷಕಿ ಸುಮಾ ನಮ್ಮ ಶಾಲೆಗ ಬರುತ್ತಿಲ್ಲ, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷಾ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ, ಇಂಗ್ಲಿಷ್‌ ಭಾಷಾ ಶಿಕ್ಷಕರನ್ನು ನೇಮಕ ಮಾಡುವಂತೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ, ನಮ್ಮೂರ ಶಾಲೆಯಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಈ ಕೂಡಲೇ ಶಾಶ್ವತವಾಗಿ ಇಂಗ್ಲಿಷ್‌ ಭಾಷಾ ಶಿಕ್ಷಕರನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಇಸಿಓ ಸಿದ್ದಪ್ಪ ಮಾತನಾಡಿ ಮುನಿಯೂರು ಶಾಲೆಯಲ್ಲಿ ಇಂಗ್ಲಿಷ್‌ ಭಾಷಾ ಶಿಕ್ಷಕರ ಕೊರತೆ ಇರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಎಂ.ಬೇವಿನಹಳ್ಳಿಯಿಂದ ಶೀಲಾ ಎಂಬ ಶಿಕ್ಷಕರನ್ನು ಮುನಿಯೂರು ಶಾಲೆಗ ನಿಯೋಜಿಸಲಾಗಿದೆ. ಸದರಿ ಶಿಕ್ಷಕರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪೂರ್ಣಾವಧಿಯಾಗಿ ಇಂಗ್ಲಿಷ್‌ ಶಿಕ್ಷಕರಾಗಿ ಮುನಿಯೂರು ಶಾಲೆಗ ಬರಲಿದ್ದಾರೆ. ಇಲಾಖೆಯು ಶೈಕ್ಷಣಿಕ ವಾತಾವರಣಕ್ಕೆ ಪೂರಕ ವ್ಯವಸ್ಥೆ ಮಾಡಲು ಸಿದ್ಧವಿದೆ, ಪೋಷಕರು ಪ್ರತಿಭಟನೆ ಕೈ ಬಡಿಬೇಕೆಂದು ಮನವಿ ಮಾಡಿದರು.
5ನೇ ತರಗತಿ ವಿದ್ಯಾರ್ಥಿನಿ ಗಗನ ಮಾತನಾಡಿ ನಮಗೆ ಇಂಗ್ಲಿಷ್‌ ಪಾಠ ಮಾಡುವ ಶಿಕ್ಷಕರಿಲ್ಲದೆ ಇಂಗ್ಲಿಷ್‌ ಕಲಿಕೆ ಸಾಧ್ಯವಾಗಿಲ್ಲ, ಪರೀಕ್ಷೆ ಹತ್ತಿರವಾಗುತ್ತಿದ್ದು ನಮಗೆ ಕೂಡಲೆ ಇಂಗ್ಲಿಷ್‌ ಶಿಕ್ಷಕರನ್ನು ನೇಮಿಸಿ ಇಂಗ್ಲಿಷ್‌ ಕಲಿಯಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.
ಇಂಗ್ಲಿಷ್‌ ಭಾಷಾ ಶಿಕ್ಷಕರನ್ನು ಪೂರ್ಣಾವಧಿ ನಿಯೋಜಿಸುವ ಬಗ್ಗೆ ಇಸಿಓ ಸಿದ್ದಪ್ಪನವರ ಭರವಸೆಯ ಮೇರೆಗೆ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಯವರು ಪ್ರತಿಭಟನೆಗೆ ಅಂತ್ಯ ಹಾಡಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಮೋಹನ್‌, ರೈತ ಸಂಘದ ಅಧ್ಯಕ್ಷ ಜಯರಾಮ್‌, ಪ್ರವೀಣ್‌, ರಮೇಶ್‌, ರಾಮೇಗೌಡ, ಅರುಣ್‌, ಸಾಗರ್‌, ಪುರುಷೋತ್ತಮ್‌, ಚಂದ್ರಮ್ಮ, ಮಂಗಳಮ್ಮ, ವರಲಕ್ಷ್ಮೀ, ರಮ್ಯಾ, ಸೌಮ್ಯಾ ಇದ್ದರು.

Get real time updates directly on you device, subscribe now.

Comments are closed.

error: Content is protected !!