ತುರುವೇಕೆರೆ: ತಾಲೂಕಿನ ಮುನಿಯೂರಿನ ರೈಸ್ ಮಿಲ್‌ಗೆ ಪಾಲಿಶ್ ಮಾಡಲು ತಂದಿದ್ದರೆನ್ನಲಾದ 50 ಕೆಜಿಯ 63 ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡು, ಓರ್ವನನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ.
ಪಡಿತರ ಅಕ್ಕಿಯನ್ನು ಮುನಿಯೂರಿನ ರೈಸ್ ಮಿಲ್‌ಗೆ ತರಲಾಗಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ತಹಶೀಲ್ದಾರ್ ನಯೀಮುನ್ನಿಸ್ಸಾ, ಆಹಾರ ನಿರೀಕ್ಷಕ ಹಾಗೂ ಪೊಲೀಸರು ಕಾರ್ಯಚರಣೆಗಿಳಿದಿದ್ದರು. ಮುನಿಯೂರು ಗದ್ದೆ ಬಯಲಿನಲ್ಲಿ ಸಾಗುತ್ತಿದ್ದ ಅಕ್ಕಿ ತುಂಬಿದ ವಾಹನವನ್ನು ಪೊಲೀಸರ ಸಹಕಾರದೊಂದಿಗೆ ಗದ್ದೆ ಬಯಲಿನಲ್ಲಿ ತಪಾಸಣೆ ನೆಡೆಸಿದರು. ಅಕ್ಕಿಗೆ ಸಂಬಂಧಪಟ್ಟ ದಾಖಲೆಗಳು ಲಭ್ಯವಾಗದ ಹಿನ್ನಲೆಯಲ್ಲಿ ವಾಹನ ಚಾಲಕ ಚಂದ್ರುನನ್ನು ವಶಕ್ಕೆ ಪಡೆದ ತುರುವೇಕೆರೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಾಲಿಶ್ ಗೆ ತಂದಿದ್ದ 63 ಚೀಲ ಪಡಿತರ ಅಕ್ಕಿ ವಶ
Get real time updates directly on you device, subscribe now.
Comments are closed.