ಕುಣಿಗಲ್: ಸರ್ಕಾರಿ ಆಸ್ಪತ್ರೆಯಲ್ಲಿನ ಕೆಲ ಹೆರಿಗೆ ವೈದ್ಯರು ಮಾಡುವ ಲಂಚ ಕೋರತನಕ್ಕೆ ಶಾಸಕರಿಗೆ ಕೆಟ್ಟ ಹೆಸರು ಬರುವಂತಾಗಿದೆ, ವೈದ್ಯರ ವರ್ತನೆ ಸರಿಪಡಿಸಿಕೊಳ್ಳದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಲೋಹಿತ್‌ಗೌಡ ಎಚ್ಚರಿಕೆ ನೀಡಿದರು.
ಸೋಮವಾರ, ಪಟ್ಟಣದ ಸಾರ್ವಜನಿಕ ಅಸ್ಪತ್ರೆ ಹೆರಿಗೆ ತಜ್ಞರೊಬ್ಬರು ಹೆರಿಗೆಗೆ ದಾಖಲಾಗಿದ್ದ ಪಟ್ಟಣದ ಅಗ್ರಹಾರ ವಾಸಿ ಗೋವಿಂದರಾಜು ಅವರ ಪತ್ನಿಯನ್ನು ಡಿಸ್ಚಾರ್ಜ್ ಮಾಡಲು ಬಾಕಿ ಹಣ ನೀಡುವಂತೆ ಪೀಡಿಸಿದ್ದಾರೆಂಬ ಅರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಅಗಮಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಹೆರಿಗೆ ತಜ್ಞರನ್ನು ತರಾಟೆಗೆ ತೆಗೆದುಕೊಂಡರು. ಗೋವಿಂದರಾಜು ಅವರ ಪತ್ನಿ ಎರಡನೆ ಹೆರಿಗೆಗೆ ಕಳೆದ ಶುಕ್ರವಾರ ದಾಖಲು ಮಾಡಿದ್ದು, ಹೆರಿಗೆ ತಜ್ಞ (ಡಾ.ಹರಿಪ್ರಸಾದ್) 15ಸಾವಿರಕ್ಕೆ ಬೇಡಿಕೆ ಇಟ್ಟು ಹತ್ತುಸಾವಿರ ಪಡೆದು ಸೀಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಡಿಸ್ಚಾರ್ಜ್ ಮಾಡಲು ಬಾಕಿ ಐದು ಸಾವಿರ ನೀಡುವಂತೆ ಒತ್ತಾಯಮಾಡಿದ್ದು, ಹಣ ಇಲ್ಲದ ಕಾರಣ ಸದರಿ ವಿಷಯವನ್ನು ಯುವ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ತಂದರು.
ಸಾರ್ವಜನಿಕ ಅಸ್ಪತ್ರೆಯ ಅಡಳಿತಾಧಿಕಾರಿ ಡಾ.ಗಣೇಶ್ ಬಾಬು ಸಮ್ಮುಖದಲ್ಲಿ ಹೆರಿಗೆ ತಜ್ಞರನ್ನು ತರಾಟೆಗೆ ತೆಗೆದುಕೊಂಡರು. ಬಡವರು ಸರ್ಕಾರಿ ಅಸ್ಪತ್ರೆಗೆ ಬರುತ್ತಾರೆ. ಅದರೆ, ಇಲ್ಲಿ ಹೆರಿಗೆಗೆ 15 ಸಾವಿರ ಬೇಡಿಕೆ ಇಟ್ಟರೆ ಹೇಗೆ. ಅಸ್ಪತ್ರೆಯಲ್ಲಿ 62 ಹೆರಿಗೆಗಳಾಗಿದ್ದು 58 ಹೆರಿಗೆ ಸಿಸೇರಿಯನ್ ಅಗಿದೆ, ವೈದ್ಯರನ್ನು ನೋಡಿಕೊಂಡರೆ ನಾರ್ಮಲ್ ಇಲ್ಲಾಂದ್ರ ಸಿಸೇರಿಯನ್ ಇದು ಹೆರಿಗೆ ವೈದ್ಯರ ಕರಾಮತ್ತು. ಸರ್ಕಾರ ಉತ್ತಮ ಸಂಬಳ, ಸವಲತ್ತು ನೀಡಿದರೂ ಜನರಿಂದ ಹಣ ಪೀಕುವುದು ಬಿಡುವುದಿಲ್ಲ ಇದರಿಂದ ಸ್ಥಳೀಯ ಶಾಸಕರಿಗೂ ಕೆಟ್ಟ ಹೆಸರು ಬರುತ್ತದೆ. ಪಡೆದಿರುವ ಹತ್ತುಸಾವಿರ ವಾಪಸ್ ನೀಡಬೇಕೆಂದು ಒತ್ತಾಯಿಸಿ, ಇಲ್ಲವಾದರೆ ಅಸ್ಪತ್ರೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಮೇರೆಗೆ ಹೆರಿಗೆ ವೈದ್ಯರು ಹಣ ಹಿಂದಿರುಗಿಸುವ ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಗೊಂಡಿತು.
Get real time updates directly on you device, subscribe now.
Prev Post
Next Post
Comments are closed.