ಎಸ್.ವಿ.ಎಸ್‌ ಕಾಲೇಜು ಮುಂದೆ ಹಿಜಾಬ್‌ ಗದ್ದಲ

422

Get real time updates directly on you device, subscribe now.

ತುಮಕೂರು: ನಗರದ ಎಸ್.ವಿ.ಎಸ್‌ ಕಾಲೇಜು ಮುಂಭಾಗ ಹಿಜಾಬ್‌ ಮತ್ತು ಬುರ್ಕಾ ಹಾಕಿದ್ದ ಪೋಷಕರನ್ನ ಒಳಗೆ ಬಿಡದೆ ಇದ್ದಿದ್ದಕ್ಕೆ ಪೋಷಕರು ಕಾಲೇಜು ಆಡಳಿತ ಮಂಡಿಳಿ ವಿರುದ್ಧ ಆಕ್ರೋಶ ಹೊರ ಹಾಕಿದ ಘಟನೆ ನಡೆಯಿತು.

ಹಿಜಾಬ್‌ ಮತ್ತು ಕೇಸರಿ ಶಾಲು ಧರಿಸಿ ಶಾಲೆಗೆ ಆಗಮಿಸುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಬುರುಕು ಧರಿಸಿ ಬಂದ ಮಕ್ಕಳ ಪೋಷಕರನ್ನು ಗೇಟ್‌ ಬಳಿಯೇ ತಡೆದಿದ್ದಾರೆ, ಇದರಿಂದ ಕೆರಳಿದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ, ಅಲ್ಲದೆ ಪೋಷಕರು ಕಾಲೇಜು ಮುಂದೆ ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗದ್ದಾರೆ.
ಸ್ಥಳಕ್ಕೆ ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣೆಯ ಇನ್ಸ್ಪೆಕ್ಟರ್‌ ಮುನಿರಾಜು, ಪಿಎಸ್‌ಐ ಚಂದ್ರಕಲಾ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಪೋಷಕರ ಗಲಾಟೆ ಬಗ್ಗೆ ಬಿಇಓ ಹನುಮನಾಯಕ್‌ ಪ್ರತಿಕ್ರಿಯಿಸಿ ಈ ಶಾಲೆಯಲ್ಲಿ 500 ಜನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಮಕ್ಕಳ ಹಿಜಾಬ್‌ ತೆಗಿಸಿ ಶಾಲೆಯೊಳಗೆ ಬಿಟ್ಟಿದ್ದಾರೆ, ಯಾವುದೇ ರೀತಿಯ ಸಮಸ್ಯೆ ಇಲ್ಲ, ಈ ವೇಳೆ ಶಾಲಾ ಆವರಣಕ್ಕೆ ಬಂದ ಪೋಷಕರು ನಮ್ಮನ್ನ ಸಭೆಗೆ ಕರೆದಿಲ್ಲ ಅಂತ ಹೇಳಿದ್ದಾರೆ, ಪೋಷಕರು ಹಿಜಾಬ್‌ ಮತ್ತು ಬುರ್ಕಾ ಧರಿಸಿ ಶಾಲಾ ಆವರಣಕ್ಕೆ ಬರುವ ಅಗತ್ಯತೆ ಇಲ್ಲ, ಮಕ್ಕಳು ನಮ್ಮ ಜವಾಬ್ದಾರಿ, ಮಕ್ಕಳನ್ನ ನಾವು ಹ್ಯಾಂಡಲ್‌ ಮಾಡ್ಕೊಂಡು ಹೋಗ್ತಿವಿ, ಏನೂ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!