ಗ್ರಾಪಂ ಅಧಿಕಾರಿಗಳ ಅಕ್ರಮ ಖಂಡಿಸಿ ಪ್ರತಿಭಟನೆ

316

Get real time updates directly on you device, subscribe now.

ಕುಣಿಗಲ್‌: ಗ್ರಾಮ ಪಂಚಾಯಿತಿ ಅಧಿಕಾರಿಗಳ ಅಕ್ರಮ ಖಂಡಿಸಿ ತಾಲೂಕಿನ ತರೇದಕುಪ್ಪೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯಗಂಗಾಧರ, ಶಾನೇಗೌಡ ನೇತೃತ್ವದಲ್ಲಿ ಪಂಚಾಯಿತಿ ಕಾರ್ಯಾಲಯದ ಮುಂದೆ ಸಂಘಟಿತರಾದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಅಧಿಕಾರಿಗಳ ಅಕ್ರಮ ಖಂಡಿಸಿ ಘೋಷಣೆ ಕೂಗಿದರು.
ಸದಸ್ಯ ಗಂಗಾಧರ ಮಾತನಾಡಿ, ಗ್ರಾಮಾಂತರ ಪ್ರದೇಶದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ನರೇಗಾ ಯೋಜನೆ ಮೂಲಕ ಹಲವು ಕಾರ್ಯಕ್ರಮಗಳ ಜಾರಿಗೊಳಿಸಿದೆ, ತರೇದಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರ ವೈಯಕ್ತಿಕ ಕಾಮಗಾರಿ 216 ಅನುಮೋದನೆಯಾಗಬೇಕಿದೆ, ಆದರೆ ಇವುಗಳಿಗೆ ಸಮರ್ಪಕ ಅನುಮೋದನೆ ಸಿಗುತ್ತಿಲ್ಲ, 107 ಸಮುದಾಯ ಕಾಮಗಾರಿಗಳಿಗೆ ಮಾತ್ರ ಎಲ್ಲಾ ಅನುಮೋದನೆ ಸಿಕ್ಕು ನರೇಗ ನಿಯಮ ಉಲ್ಲಂಘಿಸಿ ಅನುದಾನ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ. ನಿಯಮಾನುಸಾರ ಶೆ. 60 ಕೂಲಿ ಹಣ, ಶೇ.40 ಮೆಟಿರಿಯಲ್‌ ಬಿಲ್‌ ಮಾಡಬೇಕು, ಆದರೆ ಶೇ.90 ಮೆಟಿರಿಯಲ್‌, 10 ಕೂಲಿ ಹಣಕ್ಕೆ ಬಿಲ್‌ ಮಾಡಲಾಗಿದೆ. ವೈಯಕ್ತಿಕ ಕಾಮಗಾರಿಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ, ಪಿಡಿಒ ಅವರ ಮೇಲೆ ಗಂಭೀರ ಆರೋಪ ಇರುವ ಕಾರಣ ಕಳೆದ ಹದಿನೈದು ದಿನಗಳಿಂದ ಕಾರ್ಯಾಲಯಕ್ಕೆ ಬರುತ್ತಿಲ್ಲ, ಆದರೂ ಸ್ಥಳೀಯ ಸಿಬ್ಬಂದಿ ಕರಾಮತ್ತಿನಿಂದ ದಿನಾಲೂ ಸಮುದಾಯ ಕಾಮಗಾರಿ ಬಿಲ್‌ ಆಗುತ್ತಿದೆ, ಪಿಡಿಒ ಕಚೇರಿಗೆ ಬಾರದೆ ಇದ್ದರೂ ಬಿಲ್‌ ಮಾಡುತ್ತಿರುವ ಬಗ್ಗೆ ಜಿಪಂ ಸಿಇಒ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗದ ಕಾರಣ ಪ್ರತಿಭಟನೆ ನಡೆಸುತ್ತಿದ್ದು ಅಧಿಕಾರಿಗಳು ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಇಒ ಜೋಸೆಫ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿಲೀಪ್‌, ಪ್ರಮುಖರಾದ ರವೀಶ, ಚಿಕ್ಕಣ್ಣ ಸ್ವಾಮಿ, ಶಾನೇಗೌಡ, ರಾಜೇಶ, ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!