ಶಾಸಕರು ರೈತರ ಸಮಸ್ಯೆಯನ್ನೇ ಕೇಳುತ್ತಿಲ್ಲ: ಡಿಕೆ

143

Get real time updates directly on you device, subscribe now.

ಕುಣಿಗಲ್‌: ತಾಲೂಕಿನಲ್ಲಿ ರೈತರಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಲು ಸರ್ಕಾರಕ್ಕೆ ಶಾಸಕರು ಮನವಿ ಮಾಡುವ ಬದಲು ಹಳ್ಳಿ, ಹಳ್ಳಿಗೆ ಮದ್ಯದಂಗಡಿ ನೀಡಿ ಎನ್ನುತ್ತಾರೆ, ಇಂತಹ ಶಾಸಕರು ರೈತರ ಸಮಸ್ಯೆಗೆ ಧ್ವನಿಯಾಗುವ ಬದಲು ರೈತರ ಸಮಸ್ಯೆ ಹೆಚ್ಚು ಮಾಡುತ್ತಾರೆ ಎಂದು ಬಿಜೆಪಿ ಮುಖಂಡ, ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ ಹೇಳಿದರು.

ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ, ಬೇಸಿಗೆ ಆರಂಭವಾಗಿದೆ ಬೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ವ್ಯಾಪಕ ದೂರುಗಳ ಮೇರೆಗೆ ರೈತರನ್ನುದ್ದೇಶಿಸಿ ಮಾತನಾಡಿ, ಬೆಸ್ಕಾಂ ಇಇ ಕಚೇರಿಗೆ ರೈತರೊಂದಿಗೆ ತೆರಳಿ ಇಇ ಸೇರಿದಂತೆ ಇತರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು,ಕೆಲ ಸೆಕ್ಷನ್ ಅಫೀಸರ್ ಗಳು, ರೈತರ ಕರೆ ಸ್ವೀಕರಿಸುವುದಿಲ್ಲ, ಸ್ವೀಕರಿಸಿದರೂ ಅಸಭ್ಯವಾಗಿ ವರ್ತಿಸುತ್ತಾ ಎಕವಚನದಲ್ಲಿ ಮಾತನಾಡುತ್ತಾರೆ. ಸರ್ಕಾರ 7ಗಂಟೆ ಮೂರು ಫೆಸ್‌ ವಿದ್ಯುತ್ ನೀಡುವಂತೆ ಸೂಚಿಸಿದ್ದರೂ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಎರಡು.,ಮೂರುಗಂಟೆ ಕೊಟ್ಟರೂ ಗಂಟೆಗೆ ಇಪ್ಪತ್ತುಸಾರಿ ಟ್ರಿಪ್‌ ಅಗುತ್ತದೆ. ಹಣಕೊಟ್ಟವರಿಗೆ ಮೊದಲು ಟಿಸಿ ಎಂಬ ಪರಿಪಾಠ ಬಿಡಿ, ಜಿಡ್ಡಿಗೆರೆಯಲ್ಲಿ ಕೆಲ ಲೈನ್ ಮನೆಗಳು ಮದ್ಯದ ಅಮಲಿನಲ್ಲಿ ತೆಲುತ್ತಾ ರೈತರಿಗೆ ಕಿರಿಕ್‌ ಮಾಡುತ್ತಿದ್ದು ಕ್ರಮವಹಿಸಿ, ನಿರಂತರ ವಿದ್ಯುತ್‌ ಸೇರಿದಂತೆ ಇತರೆ ಬೆಸ್ಕಾಂ ಕಾಮಗಾರಿಗಳಲ್ಲಿ ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದು, ಬೇಕಾದರೆ ನಾವೆ ಕೂಲಿ ಅಳು ಕಳಿಸಿಕೊಡುತ್ತೇವೆ ಬೇಸಿಗೆಯಲ್ಲಿ ರೈತರಿಗೆ ಯಾವುದೇ ತೊಂದರೆ ಅಗದ ರೀತಿಯಲ್ಲಿ ಕ್ರಮವಹಿಸಿ, ಅನುದಾನ ಕೊರತೆ ಇದ್ದರೆ ಹೇಳಿ ಸಚಿವರೊಂದಿಗೆ ಮಾತನಾಡಿ ಅನುದಾನ ಮಂಜೂರು ಮಾಡಿಸುತ್ತೇನೆ ಎಂದರು. ಬೆಸ್ಕಾಂ ಇಇ ಪುರುಷೋತ್ತಮ್‌, ಗುತ್ತಿಗೆದಾರರಿಂದ ಬೇಗ ಕೆಲಸ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಮದ್ಯಪಾನಿ ಲೈನ್‌ಮೆನ್ಗಳ ಬೆರೆಡೆ ನಿಯೋಜಿಸಲಾಗುವುದು.ರೈತರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ತಾಲೂಕಿನಲ್ಲಿ 5ತಾಸು ತ್ರಿಫೇಸ್‌ ವಿದ್ಯುತ್‌ ಪೂರೈಕೆ ಮಾಡಲು ಇಲಾಖೆ ಶ್ರಮಿಸುತ್ತಿದೆ. ರಾತ್ರಿ ಮೂರುಗಂಟೆ,ಹಗಲು ಎರಡು ಗಂಟೆ ನೀಡಲಾಗುವುದು. ಕಗ್ಗರೆ ಸಮೀಪದ ಬಸವಮತ್ತಿಕೆರೆಯಲ್ಲಿ ಸ್ಥಾವರ ಪೂರ್ಣಗೊಂಡಲ್ಲಿ ಈ ಭಾಗದಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಮಡಿಕೆಹಳ್ಳಿ ಹಾಗೂ ಬೇರಡೆಯಲ್ಲಿ ಎರಡುಸ್ಥಾವರ ತುರ್ತಾಗಿ ನಿರ್ಮಾಣವಾಗಬೇಕು ಅಗ ಸಮಸ್ಯೆ ಬಗೆಹರಿಯುತ್ತದೆ ಈ ನಿಟ್ಟಿನಲ್ಲಿ ಇಲಾಖೆ ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದೆವೆ ನೀರಾವರಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಲು ಶ್ರಮಿಸಲಾಗುತ್ತಿದೆ ಎಂದರು.
ಕೆಲಜಾನುಮಾರು ಮಾಲೀಕರು ಜಾನುವಾರು ಕಳವಿನ ಬಗ್ಗೆ ದೂರಿದ್ದು, ದೂರವಾಣಿ ಮೂಲಕ ಡಿವೈಎಸ್ಪಿಯವರನ್ನು ಸಂಪರ್ಕಿಸಿ ತಾಲೂಕಿನಲ್ಲಿ ಜಾನುವಾರುಕಳವು ಹೆಚ್ಚಾಗುತ್ತಿದೆ. ಪೊಲೀಸರು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಹಾಗೂ ಜಾನುವಾರು ಕಳವಿಗೆ ಸಂಬಂಧಿಸಿದಂತೆ ದೂರು ಪಡೆಯಬೇಕು, ಠಾಣೆಗೆ ಬರುವ ರೈತರೊಂದಿಗೆ ಸೌಜನ್ಯವಾಗಿ ನಡೆದು ಕೊಳ್ಳಬೇಕೆಂದು ಸೂಚಿಸಿದರು. ತಾಲೂಕು ಕಚೇರಿಯಲ್ಲಿ ಭೂಮಂಜೂರಾತಿಗೆ ಸಂಬಂಧಿಸಿದಂತೆ ದಾಖಲೆಗಳು ಮಾಯವಾಗುತ್ತಿರುವಬಗ್ಗೆ ಖಾಯಂ ತಹಶೀಲ್ದಾರ್‌ ಬಂದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ರಂಗಪ್ಪ ಎಂಬಾತ ಮನವಿಗೆ ತಿಳಿಸಿದರು. ಕಾಳೆಗೌಡ ಎಂಬಾತನ ಸಹಕಾರ ಸಂಘದ ಸಾಲ ತಿರುವಳಿ ಅಗಿದ್ದರೂ ಪಹಣಿಯಲ್ಲಿ ನಮೂದು ಬರುತ್ತಿದ್ದು ತೆರವುಗೊಳಿಸಲು ಮನವಿ ಮಾಡಿದರು ಮಾಡುತ್ತಿಲ್ಲ ಎಂದು ಮನವಿ ನೀಡಿದ ಮೇರೆಗೆ ತಾಲೂಕು ಕಚೇರಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಸ್ಥಳದಲ್ಲೆ ಸಮಸ್ಯೆ ಬಗೆಹರಿಸಿದರು.
ಗ್ರಾಪಂ ಸದಸ್ಯ ನಾಗರಾಜ, ಮುಖಂಡರಾದ ತಿಮ್ಮೇಗೌಡ, ರವಿ, ಧನುಶ್‌, ಅನೂಪ್‌, ಸಂದೀಪ್‌, ಸುನಿಲ್‌, ದೇವರಾಜ, ಅಂಜನ್‌, ಅಮರ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!