ಪಾವಗಡ: ಜ್ಯೇಷ್ಠ ದೇವಿ ಸಹಿತ ಶ್ರೀಶನೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಪಟ್ಟಣದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.
68ನೇ ಬ್ರಹ್ಮ ರಥೋತ್ಸವದ ಅಂಗವಾಗಿ ಸೋಮವಾರ, ಮಂಗಳವಾರ ಶ್ರೀಶನೇಶ್ವರ ಕಲ್ಯಾಣೋತ್ಸವ, ಕಲಶ ಸ್ಥಾಪನೆ, ಮಹಾ ಮಂಗಳಾರತಿ, ಚಂಡಿಕಾ ಹೋಮ, ನವಗ್ರಹ ಹೋಮ, ಮೂಲ ಮಂತ್ರ ಹೋಮ ಇನ್ನಿತರೆ ಪೂಜಾ ಕೈಂಕರ್ಯ ಶ್ರದ್ಧಾ ಭಕ್ತಿಯಿಂದ ಸಾಗಿದವು.
ಬೆಳಗ್ಗೆ ಮಹಾ ಮಂಗಳಾರತಿ ನಂತರ ವಾದ್ಯಗೋಷ್ಠಿಯೊಂದಿಗೆ ಉತ್ಸವ ಮೂರ್ತಿ ಕರೆತಂದು ಹೂಗಳಿಂದ ಅಲಂಕಾರಗೊಂಡಿದ್ದ ಬ್ರಹ್ಮ ರಥದಲ್ಲಿ ಸ್ಥಾಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವ ಕಣ್ತುಂಬಿಕೊಳ್ಳಲು ಬಂದ ಭಕ್ತ ಸಮೂಹ ರಥವನ್ನು ಎಳೆದು ಪುಳಕಿತರಾದರು, ಭಕ್ತಿಯಿಂದ ದವನ ಸಿಕ್ಕಿಸಿದ ಬಾಳೆಹಣ್ಣನ್ನು ಸಾಗುತ್ತಿದ್ದ ರಥಕ್ಕೆ ಎಸೆಯುತ್ತಿದ್ದದ್ದು ಗಮನ ಸೆಳೆಯಿತು.
ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದ್ದ ನವ ಗ್ರಹಗಳು, ಶೀತಲಾ ಯಂತ್ರ, ಜ್ಯೇಷ್ಠ ದೇವಿಯ ಮೂರ್ತಿಗಳು ಭಕ್ತರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು.
ಶನೇಶ್ವರ ಸ್ವಾಮಿಯನ್ನ ಭಕ್ತಿಯಿಂದ ಹರಸಿದರೆ ಒಳಿತಾಗುತ್ತದೆ, ಜೊತೆಗೆ ಶೀತಲಾ ಯಂತ್ರಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಯಾವುದೇ ಸಮಸ್ಯೆಗಳಿದ್ದರೂ ಅದರಲ್ಲೂ ಕಂಕಣ ಭಾಗ್ಯದ ಸಮಸ್ಯೆಯಿದ್ದವರು ಶೀತಲಾಂಭೆಗೆ ಮಾಂಗಲ್ಯಧಾರಣೆ ಮಾಡಿದರೆ ಕಂಕಣ ಭಾಗ್ಯ ಕೂಡಿಸುತ್ತದೆ ಎಂದು ಅರ್ಚಕ ಸತ್ಯ ನಾರಾಯಣ ತಿಳಿಸಿದರು.
ರಥೋತ್ಸವಕ್ಕೆ ಅಪಾರ ಭಕ್ತರು ಬಂದಿದ್ದರು, ಇನ್ನು ಫೆ.17 ರಂದು ಪಾಢ್ಯಮಿ ಮಹಾನ್ಯಾಸ ಪೂರ್ವಕ ಏಕಾ ದಶಾವತಾರ ರುರ್ದಾಭಿಷೇಕ, ನಾಗಣಹೋಮ, 18 ತಾರೀಕಿನ ಸಂಜೆ ಅವಶ್ಯಕ ಸ್ನಾನ, ವಸಂತೋತ್ಸವ, ಮಹಾ ಮಂಗಳಾರತಿ, 19 ಶನಿವಾರದಂದು ಶನಿಮಹಾತ್ಮ ಸ್ವಾಮಿಯ ಅಡ್ಡ ಪಲ್ಲಕ್ಕಿ ರಥೋತ್ಸವ ನಡೆಯಲಿದೆ ಎಂದು ಶನಿಮಹಾತ್ಮ ಕಾರ್ಯ ನಿರ್ವಾಹಕ ಸಂಘದ ಅಧ್ಯಕ್ಷರು ಕೆ.ವಿ.ಶ್ರೀನಿವಾಸ್ ತಿಳಿಸಿದರು.
ಈ ವೇಳೆ ಪಾವಗಡ ಪೊಲೀಸ್ ಇಲಾಖೆ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತೆ ಅಳವಡಿಸಿದ್ದರು.
ಶ್ರೀ ಶನಿಮಹಾತ್ಮ ಬ್ರಹ್ಮ ರಥೋತ್ಸವ
Get real time updates directly on you device, subscribe now.
Next Post
Comments are closed.