ತುಮಕೂರು: ಹಿಜಾಬ್ ವಿವಾದ ಉಚ್ಛ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುವಾಗಲೇ ಹಿಜಾಬ್ ಧರಿಸಿಕೊಂಡು ಶಾಲಾ ಕಾಲೇಜು ಪ್ರವೇಶ ಮಾಡಲು ಅವಕಾಶ ಕಲ್ಪಿಸಿ ಎಂದು ಒತ್ತಾಯಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ನಗರದ ನಾಲ್ಕೈದು ಕಾಲೇಜುಗಳ ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ನಮ್ಮ ಧರ್ಮಕ್ಕೆ ಅವಮಾನವಾಗದಂತೆ ಶಾಲಾ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡಬೇಕು, ನಮ್ಮ ಇಸ್ಲಾಂ ಧರ್ಮಕ್ಕೆ ಗೌರವ ನೀಡಬೇಕು, ಇಲ್ಲವಾದಲ್ಲಿ ನಮಗೆ ಟಿಸಿ ಕೊಡಿಸಬೇಕು ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಲು ಮುಂದಾದಾಗ ವಿದ್ಯಾರ್ಥಿಗಳನ್ನು ಒಳ ಪ್ರವೇಶ ಮಾಡದಂತೆ ಪೊಲೀಸರು ತಡೆಯಲು ಮುಂದಾದಾಗ ಕೆಲವೊತ್ತು ಮಾತಿನ ಚಕಮಕಿ ನಡೆಯಿತು.
ಹಿಜಾಬ್ ವಿವಾದ ಈಗಾಗಲೇ ಕೋರ್ಟ್ ವಿಚಾರಣಾ ಹಂತದಲ್ಲಿರುವುದರಿಂದ ನಾವು ಏನು ಮಾಡಲು ಸಾಧ್ಯವಿಲ್ಲ, ನೀವು ಕಾನೂನು ಮೀರಿ ನಡೆದರೆ ನಾವುಗಳು ಜವಾಬ್ದಾರಲ್ಲ ಎಂದು ತಿಳಿಸಿದ ಮೇಲೂ ಪೊಲೀಸರ ಮಾತಿಗೆ ಸೊಪ್ಪಾಕದ ವಿದ್ಯಾರ್ಥಿನಿಯರನ್ನು ಮನವೊಲಿಸಲು ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಮೋಹನ್ ಕುಮಾರ್ ಮಧ್ಯ ಪ್ರವೇಶ ಮಾಡಿ ನಿಮ್ಮ ಈ ಪ್ರತಿಭಟನಾ ನಿರ್ಧಾರ ಆರೋಗ್ಯಕರವಲ್ಲ, ನ್ಯಾಯಾಲಯದಲ್ಲಿ ಹಿಜಾಬ್ ವಿವಾದದ ಕುರಿತಾಗಿನ ತೀರ್ಪಿಗಾಗಿ ಪ್ರತಿಯೊಬ್ಬರೂ ಕಾಯಬೇಕು, ನಮಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ ನೀವು ಕಾಲಹರಣ ಮಾಡದೆ ಅಧ್ಯಯನದಲ್ಲಿ ತಲ್ಲೀನರಾಗಿ ಎಂದು ಸಲಹೆ ನೀಡಿದರಾದರೂ ಕೇಳದ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಆನ್‌ಲೈನ್ ಕ್ಲಾಸ್ ಮಾಡುವಂತೆ ತಹಶೀಲ್ದಾರ್‌ರನ್ನ ಒತ್ತಾಯಿಸಿದರು.
ಎಂಪ್ರೆಸ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ಸುಮಾರು 70 ಮಂದಿ ವಿದ್ಯಾರ್ಥಿನಿಯರು ಪೋಷಕರು ಹಾಗೂ ಇಬ್ಬರು ಶಿಕ್ಷಕಿಯರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಪಟ್ಟು ಹಿಡಿದರು.
ಸ್ಥಳದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ನವೀನ್, ಪಿಎಸ್‌ಐ ನವೀನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಕೊನೆಗೆ ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಯಾವುದೇ ಮಾತಿಗೂ ಮನ್ನಣೆ ನೀಡದ ಪೊಲೀಸರು ಕೋರ್ಟ್ ಆದೇಶಕ್ಕೆ ಪ್ರತಿಯೊಬ್ಬರೂ ತಲೆ ಭಾಗಬೇಕು ಎಂದು ಮನವೊಲಿಸುವ ಪ್ರಯತ್ನ ಮಾಡಿ ಪ್ರತಿಭಟನಾ ಸ್ಥಳದಿಂದ ಕಳುಹಿಸುವ ಪ್ರಯತ್ನ ಮಾಡಿ ವಾತಾವರಣ ತಿಳಿಗೊಳಿಸಿದರು.
Get real time updates directly on you device, subscribe now.
Prev Post
Next Post
Comments are closed.