ಕುಣಿಗಲ್: ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಗರ್ಭಧರಿಸಿದಾಗ ಆಕೆಯ ಗರ್ಭ ತೆಗೆಸುವಂತೆ, ಜಾತಿ ನೆಪದ ಮೇಲೆ ಮಾನಸಿಕ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ತಾಲೂಕಿನ ಪಿಡಿಒ ಒಬ್ಬರ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ನಗರ ವಾಸಿಯಾದ ರೇಷ್ಮ (ಹೆಸರುಬದಲಿಸಿದೆ) ಮದುವೆಯಾಗಿ ಕಾರಣಾಂತರದಿಂದ ಪತಿಯಿಂದ ದೂರವಾಗಿ ವಾಸಮಾಡುತ್ತಿದ್ದರು, ಇವರು ಕೆಲಸದ ಮೇಲೆ ತುಮಕೂರಿಗೆ ಬಂದಿದ್ದಾಗ ಸುದರ್ಶನ್ ಎಂಬುವರೊಂದಿಗೆ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ 2011ರಲ್ಲಿ ತುಮಕೂರು ಸಮೀಪದ ದೇವರಾಯನ ದುರ್ಗದ ದೇವಾಲಯದಲ್ಲಿ ಮದುವೆ ಯಾದರು, ತುಮಕೂರಿನ ಸಮೀಪದ ಗ್ರಾಮದಲ್ಲಿ ವಾಸವಾಗಿದ್ದರು, ಪತಿ ಸುದರ್ಶನ್ ಪಿಡಿಒ ಆಗಿ ಕುಣಿಗಲ್ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದು, 2016 ರಲ್ಲಿ ತುಮಕೂರು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಾಯಿಸಿಕೊಂಡಿದ್ದರು, ಈ ವಿಷಯ 2021ರ ಆಗಸ್ಟ್ ಮಾಹೆಯಲ್ಲಿ ಸುದರ್ಶನ್ ಮನೆಯವರಿಗೆ ಗೊತ್ತಾದ ಹಿನ್ನೆಲೆಯಲ್ಲಿ ಸುದರ್ಶನ್ ತಾಯಿ, ಅವರ ತಂಗಿಯರು ಸುದರ್ಶನ್‌ನನ್ನು ಅವರ ಮನೆಯಲ್ಲಿ ಕೂಡಿ ಹಾಕಿದ್ದು ನಂತರ ತಪ್ಪಿಸಿಕೊಂಡು ಬಂದ ಸುದರ್ಶನ್ ರೇಷ್ಮರೊಂದಿಗೆ ವಾಸ ಮಾಡುತ್ತಿದ್ದರು. ಈ ಮಧ್ಯೆ ರೇಷ್ಮ ಗರ್ಭಿಣಿಯಾದ ವಿಷಯ ತಿಳಿದ ಸುದರ್ಶನ್ ದಿನಾಲೂ ಕುಡಿದು ಬಂದು ಗರ್ಭ ತೆಗೆಸುವಂತೆ ಒತ್ತಾಯಿಸಿ ಗಲಾಟೆ ಮಾಡಿ ಮನೆಗೆ ಬರುವುದನ್ನು ಬಿಟ್ಟರು, ಪತಿ ಸುದರ್ಶನ್ ಮನೆಗೆ ಬರುವುದನ್ನು ಬಿಟ್ಟಿದ್ದರಿಂದ ದಿನಾಲೂ ಫೋನ್ ಮಾಡಿದರೂ ಉತ್ತರಿಸದ ಕಾರಣ ಫೆ. 27 ರಂದು ಪತಿ ಹುಡುಕಿಕೊಂಡು ಕುಣಿಗಲ್ ತಾಲೂಕಿನ ಗ್ರಾಪಂ ಕಚೇರಿ ಬಳಿ ಬಂದಾಗ, ಪತಿ ಸಿಗದ ಕಾರಣ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದರು, ಸಾರ್ವಜನಿಕರು ರಕ್ಷಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಟಿ.ನರಸಿಪುರದಲ್ಲಿನ ತಂದೆಯವರಿಗೆ ವಿಷಯ ತಿಳಿಸಿದ್ದು, ತಂದೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಸುದರ್ಶನ್ ಮನೆಯವರಿಂದ ಕಿರುಕುಳ ಅನುಭವಿಸಿದ ರೇಷ್ಮ ಕಳೆದ ಕೆಲ ದಿನದ ಹಿಂದೆ ನಾನು ಕೀಳು ಜಾತಿಯವಳೆಂದು ಸುದರ್ಶನ್ ಮೇಲು ಜಾತಿಗೆ ಸೇರಿದವರಾಗಿ ಅವರ ಮನೆಯವರು ನನಗೆ ಮಾನಸಿಕ ಹಿಂಸೆ ನೀಡಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದು, ಸುದರ್ಶನ್ ಅವರ ಮನೆಯವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಮೇರೆಗೆ ಕುಣಿಗಲ್ ಪೊಲೀಸರು ಸುದರ್ಶನ್, ತಾಯಿ, ತಂಗಿಯ ಮೇಲೆ ದೌರ್ಜನ್ಯ ತಡೆ ಕಾಯಿದೆಯ ವಿವಿಧ ಉಪ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಮಹಿಳೆಗೆ ಮಾನಸಿಕ ಹಿಂಸೆ- ಪಿಡಿಒ ಮೇಲೆ ದೂರು
Get real time updates directly on you device, subscribe now.
Prev Post
Next Post
Comments are closed.