ಕೊರಟಗೆರೆ: ಅಣ್ಣ, ತಂಗಿಯ ಮದುವೆಗೆ ಅಡ್ಡಿಪಡಿಸಿದ ಹೆತ್ತ ತಾಯಿಯ ಉಸಿರು ಗಟ್ಟಿಸಿ ಕೊಲೆ ಮಾಡಿ ಪ್ರಕರಣದ ದಾರಿ ತಪ್ಪಿಸಿದ್ದ ಇಬ್ಬರನ್ನು ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸೈ ನಾಗರಾಜು ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿ ಆಗಿದೆ.
ಕೊರಟಗೆರೆ ಪಟ್ಟಣದ ಸಜ್ಜನರ ಬೀದಿಯ ಸುಮಿತ್ರಾ (45) ಅಣ್ಣ- ತಂಗಿಯ ಪ್ರೀತಿಯ ವಿಚಾರಕ್ಕೆ ಕೊಲೆಯಾದ ದುರ್ದೈವಿ. ಚಿಕ್ಕಮ್ಮನ ಮಗನನ್ನು ಪ್ರೀತಿಸಿ ಮದುವೆಯ ಸಿದ್ಧತೆಗೆ ಮುಂದಾಗಿದ್ದ ಮಗಳಿಗೆ ಬುದ್ಧಿವಾದ ಹೇಳಿದ ತಾಯಿಯನ್ನೇ ಮಗಳು ತನ್ನ ಪ್ರೀಯಕರನ ಜೊತೆ ಸೇರಿ ಕಳೆದ 20 ದಿನಗಳ ಹಿಂದೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಸಜ್ಜನರ ಬೀದಿಯಲ್ಲಿ ಕೊಲೆಯಾದ ಸುಮಿತ್ರಾ ಮತ್ತು ಮಗಳು ಶೈಲಜಾ ವಾಸಿವಿದ್ದ ಮನೆಗೆ ಸುಮಿತ್ರಾ ತಂಗಿಯ ಮಗ ಪುನೀತನ ಜೊತೆ ಪ್ರೀತಿಯ ಬಲೆಗೆ ಬಿದ್ದ ಶೈಲಜಾ ಮದುವೆಗೆ ಮುಂದಾಗಿದ್ದಾರೆ. ಚಿಕ್ಕಮ್ಮನ ಮಗ ಈಕೆಗೆ ಅಣ್ಣ ಆಗುವುದರಿಂದ ತಾಯಿ ಮದುವೆಗೆ ನಿರಾಕರಿಸಿದ್ದಾರೆ, ಮದುವೆಗೆ ನಿರಾಕರಿಸಿದ ತಾಯಿಯನ್ನೇ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಅಣ್ಣ- ತಂಗಿಯ ಮದುವೆಗೆ ಅಡ್ಡಿಯಾಗಿದ್ದ ತನ್ನ ಚಿಕ್ಕಮ್ಮಳನ್ನು ಕೊಲೆ ಮಾಡಲು ಜ.30 ರಂದೆ ಯೋಜನೆ ರೂಪಿಸಿ ಜ.31ರ ರಾತ್ರಿ ಕೊರಟಗೆರೆ ಆಗಮಿಸಿ ಊಟ ಮಾಡಿ ಮಲಗಿದ್ದಾರೆ. ನಂತರ ಮಧ್ಯರಾತ್ರಿ 12 ಗಂಟೆಗೆ ಶೈಲಜಾ ತನ್ನ ತಾಯಿಯ ಮುಖವನ್ನು ತಲೆದಿಂಬಿನಿಂದ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿ ನೀರಿನ ಸಂಪಿಗೆ ಬಿಸಾಕಿ ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ.
ಮುಂಜಾನೆಯೇ ಎದ್ದು ಶೈಲಜಾರ ಅಕ್ಕನಿಗೆ ದೂರವಾಣಿ ಕರೆ ಮಾಡಿ ನಿಮ್ಮ ತಾಯಿ ಕಾಲು ಜಾರಿ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡುತ್ತಾರೆ. ನಂತರ 31 ರಂದು ಅಂತ್ಯಕ್ರಿಯೆ ನಡೆದಿತ್ತು, ತಾಯಿ ಸತ್ತ ಮೇಲೆ ಒಂಟಿಯಾಗಿದ್ದ ಶೈಲಜಾರನ್ನು ಅಕ್ಕನ ಮನೆಯಲ್ಲಿ ಇರಿಸಲು ಕುಟುಂಬದ ನಿರ್ಧಾರದ ವಿರುದ್ಧ ಏರುಧ್ವನಿ ಮಾಡಿದ್ದ ಪ್ರಿಯಕರ ಪುನೀತನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಕೊರಟಗೆರೆ ಪೊಲೀಸರ ತಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಣ್ಣೆಯ ನಾಗರಾಜು ಮಗ ಪುನೀತ್ ಮತ್ತು ಕೊರಟಗೆರೆ ಪಟ್ಟಣದ ವಾಸಿ ಲೇ.ಕೃಷ್ಣಚಾರಿಯ ಮಗಳು ಶೈಲಜಾ ಇಬ್ಬರನ್ನು ಬಂಧಿಸಿದ್ದಾರೆ. ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕಿದೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get real time updates directly on you device, subscribe now.
Prev Post
Next Post
Comments are closed.