ಮೆಡಿಕಲ್‌ ಕಾಲೇಜು ಪ್ರಾತ್ಯಕ್ಷತಾ ಕೇಂದ್ರಕ್ಕೆ ಚಾಲನೆ

272

Get real time updates directly on you device, subscribe now.

ತುಮಕೂರು: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಸಿದ್ಧಗಂಗಾ ಮೆಡಿಕಲ್‌ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಪ್ರಾತ್ಯಕ್ಷತಾ ಕೇಂದ್ರವನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಎಲ್ಲಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ. ಪೂಜ್ಯ ಶಿವಕುಮಾರ ಶ್ರೀಗಳು ರೂಪಿಸಿರುವ ದಾಸೋಹ ಪರಂಪರೆಗೆ ಸಿದ್ಧಗಂಗಾ ಮೆಡಿಕಲ್‌ ಕಾಲೇಜು ಕನ್ನಡಿಯಂತೆ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ವಸ್ತುಪ್ರದರ್ಶನದಲ್ಲಿ ಸಿದ್ಧಗಂಗಾ ಆಸ್ಪತ್ರೆ ಉಚಿತ ದಾಸೋಹ ವ್ಯವಸ್ಥೆಯ ಕುರಿತ ಸಮಗ್ರ ಚಿತ್ರಣ ಹಾಗೂ ಇದುವರೆಗೂ ನಡೆಸಿರುವ ಉಚಿತ ಆರೋಗ್ಯ ಶಿಬಿರಗಳ ಫೋಟೋ ಗ್ಯಾಲರಿ, ಪತ್ರಿಕಾ ಲೇಖನ ಹಾಗೂ ವೈದ್ಯರು ಸೇರಿದಂತೆ ಚಿಕಿತ್ಸಾ ಸಿಬ್ಬಂಧಿಗಳ ತಂಡವನ್ನು ಒಳಗೊಂಡಿದೆ.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮಹಾನಗರ ಪಾಲಿಕೆ ಮೇಯರ್‌ ಕೃಷ್ಣಪ್ಪ, ಎಸ್‌ಐಟಿ ಸಿಇಓ ಡಾ.ಶಿವಕುಮಾರಯ್ಯ, ಎಸಎಂಸಿಆರ್‌ಐ ಪ್ರಾಂಶುಪಾಲ ಡಾ.ಶಾಲಿನಿ, ನಿರ್ದೇಶಕ ಡಾ.ಎಸ್‌.ಪರಮೇಶ್‌, ಮೇಲ್ವಿಚಾರಕ ಡಾ.ನಿರಂಜನ್‌, ಸಿಇಓ ಡಾ.ಸಂಜೀವ್ ಕುಮಾರ್‌ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!