ಮಧುಗಿರಿ: ಮುಂದಿನ ದಿನಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲಾಗುವುದು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸವಲತ್ತು ವಿತರಿಸಿ ಮಾತನಾಡಿ, ಬಗರ್ ಹುಕುಂ ಕಮಿಟಿ ಕಳೆದ ಎರಡು ತಿಂಗಳ ಹಿಂದೆ ರಚನೆಯಾಗಿದ್ದು ಆ ಸಮಿತಿಯ ಅಧ್ಯಕ್ಷರು ನಾನೇ ಆಗಿದ್ದು, ತಹಶೀಲ್ದಾರ್ ಕಾರ್ಯದರ್ಶಿಗಳಾಗಿದ್ದು ಇತರೆ ಮೂರು ಮಂದಿ ಸದಸ್ಯರು ಇರುತ್ತಾರೆ.
ಬಗರ್ ಹುಕುಂ ಸಮಿತಿಯಲ್ಲಿ ಕಾನೂನು ವ್ಯಾಪ್ತಿಯಲ್ಲಿ ಸಾಗುವಳಿ ಚೀಟಿ ನೀಡಲಾಗುವುದು, ಜನಸ್ಪಂದನ ಕಾರ್ಯಕ್ರಮಗಳಿಂದ ಸರಕಾರದ ಸೌವಲತ್ತು ಜನರಿಗೆ ತಲುಪಿಸಲು ಸಹಕಾರಿಯಾಗುತ್ತದೆ, ಗ್ರಾಮಾಂತರ ಪ್ರದೇಶಗಳ ರೈತರನ್ನು ಕಚೇರಿಗಳಿಗೆ ಅನವಶ್ಯಕವಾಗಿ ಅಲೆದಾಡಿಸಬೇಡಿ ಎಂದರು.
ಈ ಸಂದರ್ಭದಲ್ಲಿ ರೇಷ್ಮೇ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ, ಬಿಸಿಎಂ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಕಮಲಮ್ಮ, ಟಿಹೆಚ್‌ಒ ರಮೇಶ್ ಬಾಬು, ಎಇಇ ರಾಜಗೋಪಾಲ್, ಎಡಿಎ ಹನುಮಂತರಾಯಪ್ಪ, ಅಬಕಾರಿ ಇಲಾಖೆಯ ರಾಮಮೂರ್ತಿ, ಮೀನುಗಾರಿಕೆ ಇಲಾಖೆ ರಂಗಸ್ವಾಮಿ, ಉಪ ತಹಶೀಲ್ದಾರ್ ಅನಂತನಾಗ್, ಕಂದಾಯಾಧಿಕಾರಿ ಚನ್ನವೀರಪ್ಪ, ನಾರಾಯಣಪ್ಪ, ಸಿದ್ದರಾಜು, ರಾಮಗೇರಿ, ಶಶಿಕುಮಾರ್, ವಿಶ್ವನಾಥ್, ಹರೀಶ್ ಹಾಜರಿದ್ದರು.
ಅರ್ಹರಿಗೆ ಸಾಗುವಳಿ ಚೀಟಿ ನೀಡ್ತೇವೆ: ವೀರಭದ್ರಯ್ಯ
Get real time updates directly on you device, subscribe now.
Prev Post
Comments are closed.