ಅಂಗನವಾಡಿ ಸಹಾಯಕಿ ಆತ್ಮಹತ್ಯೆಗೆ ಯತ್ನ

257

Get real time updates directly on you device, subscribe now.

ಕುಣಿಗಲ್: ಅಂಗನವಾಡಿ ಕಾಯಕರ್ತೆಯ ಹುದ್ದೆ ಆಯ್ಕೆ ಹಿನ್ನೆಲೆಯಲ್ಲಿ ಸೂಕ್ತ ಕ್ರಮವಾಗಲಿಲ್ಲ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.

ತಾಲೂಕಿನ ನಾಗೇಗೌಡನಪಾಳ್ಯದಲ್ಲಿ ಅಂಗನವಾಡಿ ಕೇಂದ್ರದ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಗೀತಾ ಎಂಬುವರು ಕೆಲ ತಿಂಗಳ ಹಿಂದೆ ಮುಂಬಡ್ತಿಗೆ ಅರ್ಜಿ ಸಲ್ಲಿಸಿದ ಮೇರೆಗೆ ಆಕೆಗೆ ಮುಂಬಡ್ತಿ ನೀಡಿ ಕಟ್ಟಿಗೆಹಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿ ಮುಂಬಡ್ತಿ ನೀಡಲಾಗಿತ್ತು, ಈ ಮಧ್ಯೆ ಕೆಲ ಗ್ರಾಮಸ್ಥರು ತಗಾದೆ ತೆಗೆದು ದೂರು ನೀಡಿದ್ದ ಮೇರೆಗೆ ಆಕೆಗೆ ನೀಡಿದ್ದ ಮುಂಬಡ್ತಿ ಹಿಂಪಡೆದು ಸಹಾಯಕಿಯಾಗಿ ಮರು ನಿಯೋಜನೆಗೊಳಿಸಲಾಗಿತ್ತು, ಆದರೂ ಕಾರ್ಯಕರ್ತೆ ಹುದ್ದೆಗೆ ಪರಿಗಣಿಸುವಂತೆ ಆಕೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು ಎನ್ನಲಾಗಿದೆ. ಈ ಮಧ್ಯೆ ಕಟ್ಟಿಗೆಹಳ್ಳಿಗೆ ಹೊಸದಾಗಿ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ಕರೆಯುವ ಪ್ರಕ್ರಿಯೆ ನಡೆದ ಹಿನ್ನೆಲೆಯಲ್ಲಿ, ಕಾರ್ಯಕರ್ತೆ ಹುದ್ದೆ ಸಿಗುತ್ತದೆ ಎಂದು ನಂಬಿಕೆ ಇಟ್ಟಿದ್ದ ಸಹಾಯಕಿ, ತನ್ನ ಮನವಿಗೆ ಸೂಕ್ತ ಪುರಸ್ಕಾರ ಸಿಗಲಿಲ್ಲ ಎಂದು ಭಾನುವಾರ ಸಂಜೆ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಮೃತೂರು ಪೊಲೀಸರು ಭೇಟಿ ನೀಡಿ ಆಕೆಯ ಹೇಳಿಕೆ ಪಡೆದಿದ್ದರೆ, ಸಿಡಿಪಿಒ ಅನುಶಾ, ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ಬಾಬು ಅವರೊಂದಿಗೆ ಚರ್ಚಿಸಿ ಆಕೆಯ ಆರೋಗ್ಯ ವಿಚಾರಿಸಿದ್ದಾರೆ, ಈ ಮಧ್ಯೆ ಅಂಗನವಾಡಿ ಕಾರ್ಮಿಕ ಸಂಘಟನೆಯ ಮುಖಂಡರು, ಸಂಘದಲ್ಲಿ ಒಗ್ಗಟ್ಟು ಇಲ್ಲದ ಕಾರಣ ಸಹಾಯಕಿಯರು ಸೇರಿದಂತೆ ಕಾರ್ಯಕರ್ತರ ಸಮಸ್ಯೆ ಆಲಿಸುವವರು ಯಾರು ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!