ದಂಡಿನ ಮಾರಮ್ಮನ ಜಾತ್ರೆ ನಡೆಸಲು ಒತ್ತಾಯ

245

Get real time updates directly on you device, subscribe now.

ಮಧುಗಿರಿ: ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀದಂಡಿನ ಮಾರಮ್ಮನ ಜಾತ್ರಾ ಮಹೋತ್ಸವ ನಡೆಸುವಂತೆ ಉಪ ವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ಕರುನಾಡ ವಿಜಯಸೇನೆ ಸಂಘಟನೆ ಅಧ್ಯಕ್ಷ ರು ಮತ್ತು ಪದಾಧಿಕಾರಿಗಳು ಸೋಮವಾರ ಮನವಿಪತ್ರ ಸಲ್ಲಿಸಿದರು.
ತಾಲ್ಲೂಕಿನ ಪ್ರಸಿದ್ಧ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀದಂಡಿನ ಮಾರಮ್ಮನ ಜಾತ್ರಾ ಮಹೋತ್ಸವವನ್ನು ಕಳೆದ ಎರಡು ವರ್ಷಗಳಿಂದ ಕೋವಿಡ್ -19 ಸಾಂಕ್ರಮಿಕ ರೋಗದ ಕಾರಣ ಜಾತ್ರಾ ಮಹೋತ್ಸವ ನಿಲ್ಲಿಸಲಾಗಿತ್ತು, ಆದರೆ ಪ್ರಸ್ತುತ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದ ಲಕ್ಷಣ ಕಡಿಮೆಯಾಗಿದ್ದು, ರೋಗದ ಆತಂಕದ ವಾತಾವರಣ ಸಹಜ ಸ್ಥಿತಿಗೆ ಬಂದಿದ್ದು, ಪ್ರಸ್ತುತ ವರ್ಷ ಸಹ ಜಾತ್ರೆ ರದ್ದುಗೊಳಿಸುವಂತೆ ಸೂಚಿಸಿರುವುದು ಭಕ್ತಾದಿಗಳಲ್ಲಿ ನಿರಾಸೆ ಮೂಡಿಸಿದೆ, ಕಾರಣ ಬೇರೆ ಪ್ರದೇಶಗಳಲ್ಲಿ ಜಾತ್ರಾ ಮಹೋತ್ಸವವನ್ನು ಕೋವಿಡ್ – 19 ನಿಯಾಮವಳಿ ಪಾಲನೆ ಮಾಡುತ್ತಾ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ, ಆದ್ದರಿಂದ ಮಧುಗಿರಿ ತಾಲ್ಲೂಕಿನ ಪ್ರಸಿದ್ದ ದಂಡಿನ ಮಾರಮ್ಮನ ಜಾತ್ರಾ ಮಹೋತ್ಸವವನ್ನು ಕೋವಿಡ್ – 19 ನಿಯಾಮಾವಳಿಗೆ ಅನುಗುಣವಾಗಿ ಆಚರಣೆ ಮಾಡಲು ಕರುನಾಡ ವಿಜಯ ಸೇನೆಯ ವತಿಯಿಂದ ತಾಲ್ಲೂಕ್ ಅಧ್ಯಕ್ಷ ತಿಮ್ಮರಾಜು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಜನರ ಹಿತದೃಷ್ಟಿಯಿಂದ ಕೋರಲಾಗಿದೆ.
ಜೊತೆಗೆ ಅಂಗಡಿ ಮಳಿಗೆಗಳ ಸ್ಥಾಪನೆಗೆ ಖಾಸಗಿಯವರಿಂದ ಟೆಂಡರ್ ಕರೆಯುವ ಮೂಲಕ ಅಂಗಡಿಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಮನಸ್ಸಿಗೆ ಬಂದಂತೆ ತೆರಿಗೆ ವಸೂಲಿ ಮಾಡುವುದು ಸರ್ವೆ ಸಾಮಾನ್ಯವಾಗಿದೆ, ಆದರೆ ಕಳೆದ ಎರಡು ವರ್ಷದಿಂದ ಕೋವಿಡ್- 19 ಸಾಂಕ್ರಮಿಕ ರೋಗದ ಕಾರಣ ವ್ಯಾಪಾರಸ್ಥರು ತುಂಬಾ ಕಷ್ಟದಲ್ಲಿದ್ದು, ವ್ಯಾಪರಸ್ಥರು ಮತ್ತು ಸಾವರ್ಜನಿಕರ ಹಿತದೃಷ್ಟಿಯಿಂದ ಪ್ರಸ್ತುತ ವರ್ಷ ಟೆಂಡರ್ ಪ್ರವೃತ್ತಿ ರದ್ದುಗೊಳಿಸಿ ಸರ್ಕಾರದ ನಿಯಮಾವಳಿಗೆ ಅನುಗುಣವಾಗಿ ಅಂಗಡಿ ಮಳಿಗೆಗಳ ಸ್ಥಾಪನೆಗೆ ಅನುವು ಮಾಡಿಕೊಡಬೇಕೆಂದು ಕರುನಾಡ ವಿಜಯ ಸೇವೆ ಕೋರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!