ಈಶ್ವರಪ್ಪ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ

255

Get real time updates directly on you device, subscribe now.

ಶಿರಾ: ಬಿಜೆಪಿ ಸರ್ಕಾರದವರು ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ವಿರುದ್ಧ ಕಿಚ್ಚನ್ನು ಹಚ್ಚಿ ಸಮಾಜ ಒಡೆಯುವ ಕೆಲಸ ಮಾಡಿ ರಾಜಕೀಯ ಲಾಭ ಮಾಡುವ ಕುತಂತ್ರ ನಡೆಯುತ್ತಿದ್ದಾರೆ, ಇಂತಹ ಸರಕಾರವನ್ನು ಕಿತ್ತೊಗೆಯುವ ಕೆಲಸವನ್ನು ಜನರು ಮಾಡಬೇಕು ಎಂದು ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಷ್ಟ್ರಧ್ವಜ ಕುರಿತು ನೀಡಿರುವ ಹೇಳಿಕೆ ಖಂಡಿಸಿ ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಭಾರತ ದೇಶದಲ್ಲಿ ತ್ರಿವರ್ಣ ಧ್ವಜ ಎಂದರೆ ಅದು ತ್ಯಾಗದ ಸಂಕೇತ, ಹೋರಾಟದ ಸಂಕೇತ, ಜಯದ ಸಂಕೇತ, ಸುಮಾರು 200 ವರ್ಷಗಳ ಕಾಲ ದೇಶದಲ್ಲಿದ್ದ ಬ್ರಿಟೀಷರ ವಿರುದ್ಧ ಮಹಾತ್ಮ ಗಾಂಧಿಜಿಯವರ ನೇತೃತ್ವದಲ್ಲಿ ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದಿದ್ದೇವೆ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಬಗ್ಗೆ ಮಾತನಾಡಬೇಕೆಂದರೆ ಕೆಲವು ನಿಯಮಗಳಿವೆ ಅದನ್ನು ಉಲ್ಲಂಘಿಸಿದರೆ, ಅಂತಹವರ ಮೇಲೆ ದೇಶದ್ರೋಹ ಮಾಡಿದಂತಹ ಅಪರಾಧವಾಗುತ್ತದೆ, ಆದ್ದರಿಂದ ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಬಗ್ಗೆ ಮಾತನಾಡಿರುವುದು ಅಕ್ಷಮ್ಯ ಅಪರಾಧ, ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ ಈಶ್ವರಪ್ಪ ಅವರ ರಾಜಿನಾಮೆ ಪಡೆಯಬೇಕು ಹಾಗೂ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಇಂತಹ ದೇಶ ದ್ರೋಹಿಗಳನ್ನು ಮನೆಗಟ್ಟಬೇಕು ಎಂದರು.
ಪ್ರತಿಭಟನೆಗೆ ಮೊದಲು ನಗರದ ಅಂಬೇಡ್ಕರ್ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿ ನಮನ ಸಲ್ಲಿಸಿ ನಂತರ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು, ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಅವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲು ಮಾಡಬೇಕೆಂದು ತಹಸೀಲ್ದಾರ್ ಮುಖೇನ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಹೆಚ್.ಗುರುಮೂರ್ತಿ, ಮಾಜಿ ಎಪಿಎಂಸಿ ಅಧ್ಯಕ್ಷ ಸತ್ಯನಾರಾಯಣ್, ಶಶಿಧರಗೌಡ, ನಗರಸಭಾ ಸದಸ್ಯರಾದ ಲಕ್ಷ್ಮೀಕಾಂತ್, ಪೂಜಾ ಪೆದ್ದರಾಜು, ಗ್ರಾಪಂ ಸದಸ್ಯ ಗಿಡಗನಹಳ್ಳಿ ಸ್ವಾಮಿ, ವಾಜರಹಳ್ಳಿ ರಮೇಶ್, ಡಿ.ಸಿ.ಅಶೋಕ್, ಯುವ ಕಾಂಗ್ರೆಸ್ ಅಧ್ಯಕ್ಷ ಧಯಾನಂದ್, ಲಕ್ಷ್ಮೀದೇವಮ್ಮ, ಟಿ.ಸಂತೋಷ್, ಅಜಯ್ಕುಮಾರ್ ಗಾಳಿ, ಗಜಮಾರನಹಳ್ಳಿ ಮಂಜುನಾಥ್, ಪಿ.ಬಿ.ನರಸಿಂಹಯ್ಯ, ನೂರುದ್ದೀನ್, ಧರಣಿಕುಮಾರ್, ಮಣಿ ನಾಯಕ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!