ಪಾವಗಡ: ಪಟ್ಟಣದ ಬೆಸ್ಕಾಂ ಕಚೇರಿಯ ಕ್ಯಾಷ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಮೇಲೆ 5 ಮಂದಿ ಹಲ್ಲೆ ನಡೆಸಿ ಹಣ ದೋಚಲು ಯತ್ನಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಪಾವಗಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಫೆ-17 ಗುರುವಾರ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿ ಯಲ್ಲೆಂದ್ರ ಬಾಬು ಎಂದು ತಿಳಿದಿದ್ದು ಈತ ಠಾಣೆಯಲ್ಲಿ ದೂರನ್ನು ನೀಡಿದ್ದಾನೆ. ಪಾವಗಡ ಪಟ್ಟಣದ ಬೆಸ್ಕಾಂ ಕಚೇರಿಯ ಕ್ಯಾಷ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಐದು ಮಂದಿ ಏಕಾಏಕಿ ಕ್ಯಾಷ್ ಕೌಂಟರ್‌ಗೆ ದಾಂಗುಡಿಯಿಟ್ಟು ಮನ ಬಂದಂತೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಕ್ಯಾಷ್ ಕೌಂಟರ್‌ಗೆ ಕೈ ಹಾಕಿ ಹಣ ದೋಚಲು ಯತ್ನಿಸಿದ್ದಾರೆ ಎಂದು ಕ್ಯಾಷಿಯರ್ ಯಲ್ಲೆಂದ್ರಬಾಬು ತಿಳಿಸಿದ್ದಾರೆ.
ಎಓಓ ಅವರು ಅನಧಿಕೃತ ಗೈರು ಹಾಜರಾಗಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿದ್ದನ್ನು ಪ್ರಶ್ನಿಸಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಬೆಸ್ಕಾಂ ಎಓಓ ಅಲಕುಂದಪ್ಪ, ಸಹಾಯಕ ಪ್ರದೀಪ್, ಜೆಇ ಸಂಜೀವರಾಯಪ್ಪ, ಎಂ.ಆರ್.ರಮೇಶ್ ಬಾಬು, ಮನೋಜ್ ಕುಮಾರ್ ಆರೋಪಿಗಳು ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಕ್ಯಾಷ್ ಕೌಂಟರ್ ನಲ್ಲಿದ್ದ ಹಣ ದೋಚಲು ಯತ್ನಿಸಿದ್ದಾರೆ. ನನಗೆ ಹಾಗೂ ನನ್ನ ಜೀವಕ್ಕೆ ಹಾನಿ ಮಾಡಬೇಕು ಎಂಬ ದುರುದ್ದೇಶದಿಂದ ಇಂತ ಕೃತ್ಯ ಎಸಗಿದ್ದಾರೆ. ಜೀವ ಬೆದರಿಕೆ ಹಾಕುವುದಲ್ಲದೆ ನಾನು ಕೆಲಸ ಮಾಡಿಕೊಳ್ಳಲು ಬಿಡದೆ ಸಮಸ್ಯೆ ಮಾಡುತ್ತಿರುವುದರಿಂದ ರಕ್ಷಣೆ ಕೊಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪಾವಗಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: ಪ್ರಕರಣ ದಾಖಲು
Get real time updates directly on you device, subscribe now.
Prev Post
Next Post
Comments are closed.