ಹರ್ಷನ ಹತ್ಯೆಗೆ ಕಾರಣರಾದವರನ್ನು ಬಂಧಿಸಿ: ಎಸ್‌.ಆರ್‌.ಗೌಡ

ಹಿಂದೂ ಹತ್ಯೆ, ದೇಶಭಕ್ತನಿಗೆ ಅಗೌರವ

144

Get real time updates directly on you device, subscribe now.

ಶಿರಾ: ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆ ಖಂಡಿಸಿ ಶಿರಾ ನಗರದ ಅಂಬೇಡ್ಕರ್‌ ಸರ್ಕಲ್ ನಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ರೇಷ್ಮೆ ಅಭಿವೃದ್ದಿ ನಿಗಮಗಳ ಅಧ್ಯಕ್ಷ ಎಸ್‌.ಆರ್‌.ಗೌಡ ಅವರು ಭಜರಂಗದಳದ ಸಕ್ರಿಯ ಕಾರ್ಯಕರ್ತ ಹರ್ಷ ಅವರನ್ನು ಜಿಹಾದಿಗಳು ಹತ್ಯೆ ಮಾಡಿರುವುದನ್ನು ಇಡೀ ದೇಶ ನಾಗರೀಕರು ಒಕ್ಕೋರಲಿನಿಂದ ಖಂಡಿಸುತ್ತಿದ್ದೇವೆ. ಈ ಕೃತ್ಯದ ಹಿಂದೆ ಹಲವಾರು ಷಡ್ಯಂತರಗಳು, ಸಮಾಜ ಘಾತಕ ಶಕ್ತಿಗಳ ಕೈವಾಡ ಇದೆ ಎಂಬುದು ಸಾಬೀತಾಗಿದೆ. ದೇಶದಲ್ಲಿ ಈ ರೀತಿಯ ಕೃತ್ಯಗಳು ಮಾಡಿದಷ್ಟು ಹಿಂದು ಸಮಾಜ ಒಗ್ಗಟ್ಟಾಗುತ್ತದೆ. ಇಂತಹ ಒಂದೊಂದು ಘಟನೆಗಳು ಸಂಭವಿಸಿದಾಗ ಸಾವಿರಾರು ಹಿಂದುಗಳ ಅದನ್ನು ಎದುರಿಸುವ ಶಕ್ತಿಯನ್ನು ಭಾರತ ಮಾತೆ ಕೊಟ್ಟಿದ್ದಾಳೆ. ಹರ್ಷ ಹತ್ಯೆ ಮಾಡಿದವರನ್ನು ಸರಕಾರ ಕೂಡಲೇ ಬಂಧಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅವರಿಗೆ ಮರಣ ದಂಡನೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕ ಮಂಜುನಾಥ್‌ ಮಾತನಾಡಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಹಿಂದೂಪರ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಹಿಂದೂಪರ ಕಾರ್ಯಕರ್ತರ ಮೇಲೆ ಹಾಕಿರುವ ರೌಡಿಶೀಟರ್‌ ಕೇಸುಗಳನ್ನು ತೆಗೆದು ಹಾಕಲೂ ನಿಮ್ಮಿಂದ ಆಗುತ್ತಿಲ್ಲ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ. ರಾಜ್ಯ ಸರಕಾರ ಎಸ್‌ಡಿಪಿಐ ಸಂಘಟನೆಯನ್ನು ಬ್ಯಾನ್‌ ಮಾಡಬೇಕು ಎಂದು ಒತ್ತಾಯಿಸಿದರು.
ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್‌ ಮಾತನಾಡಿ ಇತ್ತೀಚೆಗೆ ಜಿಹಾದಿಗಳು ಕರ್ನಾಟಕದಲ್ಲಿ ಹಿಂದೂಪರ ಕಾರ್ಯಕರ್ತರನ್ನು ಹತ್ಯೆ ಮಾಡಲು ಪ್ರಾರಂಭಿಸಿದ್ದಾರೆ. ಇದರ ಬಗ್ಗೆ ಬಿಜೆಪಿ ಸರಕಾರ ಕೂಡ ಶೀಘ್ರವಾಗಿ ಕ್ರಮ ಕೈಗೊಂಡು. ಎಸ್ಡಿಪಿಐ ಸಂಘಟನೆ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯ ರಂಗರಾಜು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರವಿಕುಮಾರ್‌, ಎಲ್‌.ಟಿ.ಶ್ರೀನಿವಾಸ ನಾಯ್ಕ, ಗೋವಿಂದರಾಜು, ಧನುಷ್‌, ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!