ಕಾಂಗ್ರೆಸ್‌ ಅಧಿಕಾರಕ್ಕಾಗಿ ಪಕ್ಷ ಸಂಘಟಿಸಿ: ಡಿಕೆಶಿ

ಡಿಜಿಟಲ್ ಸದಸ್ಯತ್ವಕ್ಕೆ ಕೈ ಜೋಡಿಸೋಣ । ಮೇಕೆದಾಟು ಪಾದಯಾತ್ರೆ ಯಶಸ್ವಿಗೊಳಿಸೋಣ

217

Get real time updates directly on you device, subscribe now.

ತಿಪಟೂರು: ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರಿಗೆ ಅರಿವು ಮೂಡಿಸಿ ಐವತ್ತು ಸಾವಿರ ಸದಸ್ಯರನ್ನು ನೋಂದಣಿ ಮಾಡಿಸುವವರಿಗೆ ಪಕ್ಷದ ಟಿಕೆಟ್‌ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದ ಒಕ್ಕಲಿಗರ ಸಮುದಾಯದಲ್ಲಿ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೊಂದಣಿ ಮತ್ತು ಮೇಕೆದಾಟು ಪಾದಯಾತ್ರೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಸದಸ್ಯತ್ವ ಪಡೆಯುವುದು ದೇಶದ ಪುಣ್ಯದ ಕೆಲಸ. ಕಷ್ಟದ ಕಾಲದಲ್ಲಿದ್ದ ಜನರಿಗೆ ಸಹಾಯ ಮಾಡಿ ಸಮಾನತೆ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಶ್ರಮವಿದೆ. ರಾಜ್ಯದಾದ್ಯಂತ ಜನರಿಗೆ ಅರಿವು ಮೂಡಿಸಿ ಕಾರ್ಯಕರ್ತರು ಸದಸ್ಯತ್ವ ಮಾಡಿಸಿ ಮೇಕೆದಾಟು ಕುಡಿಯುವ ನೀರು ಯೋಜನೆಯ ವಿಚಾರದಲ್ಲಿ ಯಾವ ಪಕ್ಷಗಳು ರಾಜಕೀಯ ಮಾಡಬಾರದು ಪ್ರತಿ ಬೂತ್‌ ಮಟ್ಟದಿಂದ ಎರಡು ಬಸ್ಸುಗಳ ಜನರು ಪಾದಯಾತ್ರೆಗೆ ಆಗಮಿಸಬೇಕು, ಮುಂದಿನ ದಿನಗಳಲ್ಲಿ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷವು ದೇಶದಲ್ಲಿ ಏಕತೆ ಮತ್ತು ಸಾಮರಸ್ಯ ಸಾರಿದ ಏಕೈಕ ಪಕ್ಷವಾಗಿದ್ದು ನೀರಾವರಿ ಜನಸಾಮಾನ್ಯರ ಸ್ಪಂದನೆಗೆ ಸ್ಪಂದಿಸಿದೆ. ಪಕ್ಷಕ್ಕೆ ನೋಂದಣಿಯಾಗಿ ರಾಷ್ಟ್ರದಲ್ಲಿ ಏಕತೆ ಸ್ಥಾಪಿಸೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಪಕ್ಷವು ಆಯೋಜಿಸಿದ್ದ ಕಾಂಗ್ರೆಸ್‌ ಸಾಧನೆಯ ಮತ್ತು ಮೇಕೆದಾಟು ಯೋಜನೆಯ ವೀಡಿಯೋಗಳನ್ನು ಪರದೆಯ ಮೇಲೆ ಬಿತ್ತರಿಸಲಾಯಿತು. ಮಾಜಿ ಶಾಸಕ ಷಡಕ್ಷರಿ 15ರೂ.ಹಣ ಕೊಟ್ಟು ರಾಜ್ಯ ಕೆಪಿಸಿಸಿ ಅಧ್ಯಕ್ಷರ ಮುಂದೆ ಸದಸ್ಯರಾಗಿ ಕಾರ್ಯಕರ್ತರಿಗೆ ಅರಿವು ಮೂಡಿಸಿದರು.
ಬೃಹತ್‌ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌, ಟಿ.ಬಿ.ಜಯಚಂದ್ರ, ಮುರುಳಿಧರ ಹಾಲಪ್ಪ, ಜಿಲ್ಲಾಧ್ಯಕ್ಷ ರಾಮಕೃಷ್ಣ ಉಪಸ್ಥಿತರಿದ್ದು.

ನಿವೃತ್ತ ಎಸಿಪಿ ಲೋಕೇಶ್ವರ್‌ ಪಕ್ಷಕ್ಕೆ ಸೇರ್ಪಡೆಯಾದರು, ಕೆ.ಟಿ.ಶಾಂತಕುಮಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಮುಖಂಡರಾದ ಮಾಜಿ ತಾಲೂಕು ಪಂಚಾಯತ್‌ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್‌, ಕೆಎಂಎಫ್‌ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್‌, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಡೇನೂರು ಕಾಂತರಾಜು, ನಗರ ಕಾಂಗ್ರೆಸ್‌ ಅಧ್ಯಕ್ಷ ತರಕಾರಿ ಪ್ರಕಾಶ್‌, ಕೆಪಿಸಿಸಿ ಸದಸ್ಯ ಹಾಗೂ ನಗರಸಭಾ ಸದಸ್ಯ ವಿ, ಯೋಗೇಶ್‌, ಗುರುಗುಂಡ ಹಳ್ಳಿ ಸುದರ್ಶನ್‌, ಲೋಕ್‌ನಾಥ್‌ಸಿಂಗ್‌, ಸುನಿಲ್‌ ಮೇಗಲಮನೆ, ನಗರಸಭೆ ಸದಸ್ಯರುಗಳು ಭಾಗವಹಿಸಿದ್ದರು,

ತಾಲ್ಲೂಕಿನ ಪ್ರತಿ ಬೂತ್‌ ನಲ್ಲಿ 250 ಜನ ಸದಸ್ಯತ್ವ ನೋಂದಣಿ ಮಾಡಿಸಿದ ಪಕ್ಷದ ಕಾರ್ಯಕರ್ತರನ್ನು ನಾನೇ ಖುದ್ದಾಗಿ ಬಂದು ವಿಶೇಷ ಉಡುಗೊರೆ ನೀಡಿ ಸನ್ಮಾನಿಸುತ್ತೆನೆ.
ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಪಕ್ಷಕ್ಕಾಗಿ ಯಾವುದೇ ಪಕ್ಷಾಂತರ ಮಾಡದೆ 38 ವರ್ಷಗಳ ಕಾಲದಿಂದ ಸೇವೆ ಸಲ್ಲಿಸುತ್ತಿದ್ದೇನೆ, ಪಕ್ಷಕ್ಕೆ ಸೇರ್ಪಡೆಯಾದವರು ಯಾವುದೇ ಕಾರ್ಯಕ್ರಮ ಮಾಡುವುದಾದರೆ ರಾಜ್ಯಾಧ್ಯಕ್ಷರ ಅನುಮತಿ ಪಡೆಯಬೇಕು, ಪಕ್ಷಕ್ಕಾಗಿ ದುಡಿಯಬೇಕು.
। ಕೆ.ಷಡಕ್ಷರಿ, ಮಾಜಿ ಶಾಸಕ

Get real time updates directly on you device, subscribe now.

Comments are closed.

error: Content is protected !!