ಬೃಹತ್‌ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ

ಕಲ್ಲು ಗಣಿಗಾರಿಕೆ ನಿಲ್ಲಿಸದಿದ್ರೆ ಸುಮ್ಮನಿರಲ್ಲ: ಸಿದ್ಧರಬೆಟ್ಟ ಶ್ರೀ

852

Get real time updates directly on you device, subscribe now.

ಕೊರಟಗೆರೆ: ತಾಲ್ಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ನೀಲಗೊಂಡನಹಳ್ಳಿ, ಎಲೆರಾಂಪುರ ಗ್ರಾಪಂ, ಮಹಿಳಾ ಸಂಘಗಳಿಂದ ಹಾಗೂ ವಿದ್ಯಾರ್ಥಿಗಳಿಂದ ಕಲ್ಲುಗಣಿಗಾರಿಕೆ ವಿರುದ್ಧ ರಸ್ತೆ ತಡೆ ಜೊತೆಗೆ ಬೃಹತ್‌ ಪ್ರತಿಭಟನೆಯನ್ನು ಮಾಡಿ ತಹಶೀಲ್ದಾರ್‌ ನಹೀದಾ ಜಮ್‌ಜಮ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಪ್ರತಿಭಟನೆಯ ವೇಳೆ ಮಾತನಾಡಿ, ಕಲ್ಲು ಗಣಿಗಾರಿಕೆ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನೀಲಗೊಂಡನಹಳ್ಳಿ ಹಾಗೂ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ರೈತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಆಗುವಂತಹ ಅನಾಹುತಗಳನ್ನು ತಡೆಯಲು ಈ ಬೃಹತ್‌ ಪ್ರತಿಭಟನೆ ಮಾಡಲಾಗುತ್ತಿದೆ. ಈ ಭಾಗಗಳಲ್ಲಿ ಕಲ್ಲುಗಣಿಗಾರಿಕೆ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಈ ಭಾಗದ ಶಾಲೆಗಳಲ್ಲಿ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಗಣಿಗಾರಿಕೆಯನ್ನು 600 ಮೀ ಹತ್ತಿರದಲ್ಲಿ, ಕೆರೆಯ ಪಕ್ಕದಲ್ಲಿ ಮತ್ತು ಮಠದ ಪಕ್ಕದಲ್ಲಿ ಈ ಗಣಿಕಾರಿಕೆ ಮಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ, ರೈತರಿಗೆ, ಮತ್ತು ಸ್ಥಳೀಯ ನಿವಾಸಿಗಳಿಗೆ ಅನಾಹುತಗಳು ಸಂಭವಿಸುತ್ತವೆ. ಸರ್ಕಾರ ಕಲ್ಲುಗಣಿಗಾರಿಕೆಗೆ ನೀಡಿರುವಂತಹ ಅನುಮತಿಯನ್ನು ಕೂಡಲೇ ಹಿಂಪಡೆದು ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, 2018 ರಿಂದಲೂ ಈ ಕಲ್ಲುಗಣಿಗಾರಿಕೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಿಕೊಳ್ಳುತ್ತಾ ಬಂದಿದ್ದಾರೆ. ಗಣಿಗಾರಿಕೆಯನ್ನು ನಿಲ್ಲಿಸಲು ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿ ಇಬ್ಬರು ಎಸಿ ಯವರಿಗೆ ಮನವಿ ಪತ್ರ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ರೈತ ಸಂಘಟನೆಗಳಿಂದ ಮತ್ತು ವಿದ್ಯಾರ್ಥಿಗಳಿಂದ, ಮೂರು ಪಕ್ಷಗಳ ರಾಜಕೀಯ ಮುಖಂಡರಗಳು ಮತ್ತು ಸ್ವಾಮೀಜಿಗಳ ಸಮ್ಮುಖದಲ್ಲಿ ಬೃಹತ್‌ ಪ್ರತಿಭಟನೆ ಮಾಡಲಾಯಿತು. ಕಲ್ಲುಗಣಿಗಾರಿಕೆಯನ್ನು ನಿಲ್ಲಿಸುವಂತೆ ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಆದೇಶಿಸಿ ಈ ಬಾಗದ ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಪಿಆರ್‌ ಸುಧಾಕರ್‌ಲಾಲ್‌ ಮಾತನಾಡಿ, ನೀಲಗೊಂಡನಹಳ್ಳಿ ಮತ್ತು ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಭಾಗಗಳಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸುವಂತೆ ಸರ್ಕಾರ ಆದೇಶಿಸಬೇಕು. ಈ ಭಾಗದಲ್ಲಿ ಹೆಚ್ಚಿನದಾಗಿ ಶಾಲೆಗಳಿವೆ ಮತ್ತು ದೇವಲಾಯಗಳಿವೆ, ರೈತರ ಜಮೀನುಗಳಿವೆ ಈ ಕಲ್ಲುಗಣಿಕಾರಿಕೆ ಪ್ರಾರಂಭಿಸುವುದರಿಂದ ಅನಾಹುತಗಳು ಹೆಚ್ಚಾಗಿ ಸಂಭವಿಸುತ್ತವೆ ಕೂಡಲೇ ಸರ್ಕಾರ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆದೇಶಿಸದೆ ಹೋದರೆ ಮುಂದಿನ ದಿನಗಳಲ್ಲಿ ಪರಮ ಪೂಜ್ಯರ ಸಮ್ಮುಖದಲ್ಲಿ ಮತ್ತು ರೈತರೊಂದಿಗೆ ವಿದ್ಯಾರ್ಥಿಗಳೊಂದಿಗೆ, ಮಹಿಳೆಯರೊಂದಿಗೆ ಈ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ತಹಶೀಲ್ದಾರ್‌ ನಹೀದ್‌ ಜಮ್‌ಜಮ್‌ ಅವರು ಭೇಟಿ ಕೊಟ್ಟು ರೈತರಿಂದ ಮನವಿ ಪತ್ರ ಸ್ವೀಕರಿಸಿ ನಂತರ ಮಾತನಾಡಿದ ಅವರು, ಎಲೆರಾಂಪುರ ಮತ್ತು ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಂಗನಹಳ್ಳಿ ಕಾಶಿ ಅನ್ನಪೂರ್ಣೆಶ್ವರಿ ಸಂಸ್ಥಾನದ ಶ್ರೀಬಸವಲಿಂಗ ಮಹಾಸ್ವಾಮಿ, ಹನುಮಂತಪುರದ ನಾಗೇಂದ್ರ ಮಹಾಸ್ವಾಮಿ, ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶ್ವತ್‌್ಥ ನಾರಾಯಣ್‌, ಅರಕೆರೆ ಶಂಕರ್‌, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌ ಮೂರ್ತಿ, ಬೋರಣ್ಣ, ನೀಲಗೊಂಡನಹಳ್ಳಿ ಮಾಜಿ ಅಧ್ಯಕ್ಷ ನಾಗರಾಜ್‌, ಉಪಾಧ್ಯಕ್ಷ ಕಿರಣ್‌ಕುಮಾರ್‌, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಿವಾಸ್‌, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಸುರೇಶ್‌, ತಿಲಕ್‌, ರಮ್ಯ, ಹನುಮಂತರಾಜು, ಮಂಗಳಗೌರಮ್ಮ, ವೆಂಕಟೇಶ್‌ ರೈತ ಮುಖಂಡರುಗಳು, ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!