ಕಾಮಗಾರಿ ಪರಿಶೀಲಿಸದೆ ವಾಪಸ್ಸಾದ ಅಧಿಕಾರಿಗಳು

ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಮುಂದೆ ಗ್ರಾಮಸ್ಥರ-ಗುತ್ತಿಗೆದಾರ ನಡುವೆ ವಾಗ್ವಾದ

165

Get real time updates directly on you device, subscribe now.

ಕುಣಿಗಲ್‌: ಕಾಮಗಾರಿ ಮಾಡದೆ ಬಿಲ್‌ ಪಡೆದಿದ್ದಾರೆ ಎಂಬ ಅರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾಮಗಾರಿ ಪರಿಶೀಲನೆಗೆ ಗ್ರಾಮಕ್ಕೆ ತೆರಳಿದಾಗ, ಅಧಿಕಾರಿಗಳ ಮುಂದೆಯೆ ಗ್ರಾಮಸ್ಥರು, ಕಾಮಗಾರಿ ನಿರ್ವಹಣೆ ಮಾಡಿದ ಕಡೆಯವರು ವಾಗ್ವಾದ ಮಾಡಿಕೊಂಡು ಪರಸ್ಪರ ಹಲ್ಲೆಗೆ ಇಳಿದಾಗ ಅಧಿಕಾರಿಗಳು ಸ್ಥಳದಿಂದ ಹೊರನಡೆದ ಘಟನೆ ತಡವಾಗಿ ಬೆಳಕಿಗೆಬಂದಿದೆ.

ನಾಗಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿನ ತುರಗನೂರು ಗ್ರಾಮದಲ್ಲಿ ಗ್ರಾಪಂನ ಅನಿರ್ಭಂದಿತ ಅನುದಾನದಲ್ಲಿ ಪಂಪು,ಮೋಟಾರ್‌ ಹಾಗೂ ಪೈಪ್‌ ಲೈನ್‌ ಕಾಮಗಾರಿಗೆ 3.78ಲಕ್ಷರೂ. ಬಿಡುಗಡೆಯಾಗಿತ್ತು. ಅದರೆ, ಸದರಿ ಕಾಮಗಾರಿ ಮಾಡದೆಯೆ ಬಿಲ್‌ ಪಡೆಯಲು ಮುಂದಾಗಿದ್ದಾರೆಂದು ಕೆಲ ಗ್ರಾಮಸ್ಥರು ವ್ಯಾಪಕವಾಗಿ ದೂರಿದ್ದರ ಹಿನ್ನೆಲೆಯಲ್ಲಿ, ಗ್ರಾಮೀಣ ಕುಡಿಯುವನೀರು ಮತ್ತು ನೈರ್ಮಲ್ಯ ಇಲಾಖೆ, ಕುಣಿಗಲ್‌ ಉಪವಿಭಾಗದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಕಳೆದವಾರ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಗ್ರಾಮಸ್ಥರು ಕಾಮಗಾರಿ ಈ ಹಿಂದಯೆ ಜಿಲ್ಲಾಪಂಚಾಯಿತಿ ಅನುದಾನದಲ್ಲಿ ಮಾಡಲಾಗಿದೆ ಎಂದು ಅರೋಪಿಸಿದರು. ಇದಕ್ಕೆ ಕಾಮಗಾರಿ ನಿರ್ವಹಣೆ ಮಾಡಿದ ಕಡೆಯವರು ಅಕ್ಷೇಪಿಸಿ ಅಧಿಕಾರಿಗಳ ಮುಂದೆಯೆ ವಾಗ್ವಾದ ನಡೆಸಿ, ಮಾರಾಮಾರಿಗೆ ಇಳಿದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತು. ಎರಡೂ ಕಡೆಯವರ ಗೊಂದಲದ ಕಾರಣ ಸ್ಥಳ ಪರಿಶೀಲನೆಗೆ ತೆರಳಿದ ಅಧಿಕಾರಿಗಳು, ಕಾಮಗಾರಿ ಪರಿಶೀಲನೆ ಮಾಡದೆ ಸ್ಥಳದಿಂದ ಹೊರನಡೆದರು.
ಘಟನೆಗೆ ಸಂಬಂಧಿಸಿದಂತೆ ಕಾಮಗಾರಿ ಮಾಡದೆ ಬಿಲ್‌ ಪಡೆಯಲು ಮುಂದಾಗಿದ್ದು ಬಿಲ್‌ ಮಾಡದಂತೆ ತಡೆಹಿಡಿಯಬೇಕೆಂದು ಪಾಂಡುರಂಗ, ಶ್ರೀನಿವಾಸ, ಹನುಮೇಗೌಡ ಇತರರು ಉಪವಿಭಾಗದ ಎಇಇ ಅವರಿಗೆ ದೂರುನೀಡಿದ್ದಾರೆ. ಅಧಿಕಾರಿಗಳು ದೂರನ್ನು ಅಧರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!