ಕೊರಟಗೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಆಗ ತಾನೆ ಜನಿಸಿರುವ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅನುಮಾನಾಸ್ಪದವಾಗಿ ಹೆಣ್ಣು ಮಗು ಬೇಡ ಎನ್ನುವ ದೃಷ್ಟಿಯಿಂದ ಅಲ್ಲಿ ಹಾಕಿರುವುದೋ ಅಥವಾ ಯಾವುದೋ ಅನೈತಿಕ ಸಂಬಂಧದಿಂದ ಆಗಿರುವ ಮಗುವೋ ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಇಲ್ಲಿ ಎದ್ದು ಕಾಣುತ್ತದೆ, ಏಕೆಂದರೆ ರಾತ್ರಿ ಸಮಯದಲ್ಲಿ ಒಬ್ಬರು ಅಥವಾ ಇಬ್ಬರು ವೈದ್ಯರು ಇರುತ್ತಾರೆ, ರಾತ್ರಿ ಸಮಯದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯೂ ಕಡಿಮೆ ಇರುತ್ತದೆ, ಅದರಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಫುಟೇಜ್ ಮೂಲಕ ತನಿಖೆ ಹೊರ ಬರುಬಹುದೇ ಎಂದು ಕಾದು ನೋಡಬೇಕಾಗಿದೆ.
ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಪುಷ್ವಲತಾ ಮಾತನಾಡಿ, ಆಸ್ಪತ್ರೆ ಸಿಬ್ವಂದಿ ಶೌಚಾಲಯ ಶುಚಿಗೊಳಿಸಲು ಹೋದಂತಹ ಸಮಯದಲ್ಲಿ ಮಹಿಳಾ ಶೌಚಾಲಯದಲ್ಲಿ ಆಗ ತಾನೇ ಜನಸಿರುವಂತಹ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು ಕೂಡಲೇ ಪೊಲೀಸ್ ಇಲಾಖೆಗೆ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದೇವೆ, ಅವರ ಆದೇಶದ ಮೇರೆಗೆ ಆಸ್ಪತ್ರೆಯಲ್ಲಿರುವ ಸಿಸಿ ಟಿವಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಆಸ್ಪತ್ರೆಗೆ ಪಿಎಸ್ಐ ಮಂಜುಳ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆಸ್ಪತ್ರೆ ಶೌಚದಲ್ಲಿ ನವಜಾತ ಶಿಶು ಶವ ಪತ್ತೆ
Get real time updates directly on you device, subscribe now.
Prev Post
Next Post
Comments are closed.