ತುಮಕೂರು: ಐತಿಹಾಸಿಕ ಪ್ರಸಿದ್ದ ಶ್ರೀಸಿದ್ದಗಂಗಾ ಮಠದಲ್ಲಿ ಶ್ರೀಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ಕೊಡ ಮಾಡುವ ಬಹುಮಾನಕ್ಕಾಗಿ ಉತ್ತಮ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಳೆದ ಒಂದು ವಾರದಿಂದ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದನಗಳ ಜಾತ್ರೆ ನಡೆಯುತ್ತಿದ್ದು, ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರು ನಡೆಸಿಕೊಂಡು ಬಂದಿರುವ ಉತ್ತರ ರಾಸುಗಳಿಗೆ ಬಹುಮಾನ ನೀಡುವ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗಲಾಗುತ್ತಿದೆ, ಉತ್ತಮ ರಾಸುಗಳ ಆಯ್ಕೆಗಾಗಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಪಶು ಇಲಾಖೆ ವೈದ್ಯರು, ಅನುಭವಿ ರೈತರು, ವರ್ತಕರು ಸೇರಿದಂತೆ 14 ಮಂದಿ ಸದಸ್ಯರಿದ್ದಾರೆ.
ಈ ಆಯ್ಕೆ ಸಮಿತಿ ಪ್ರತಿ ವರ್ಷವೂ ಉತ್ತಮ ರಾಸುಗಳ ಆಯ್ಕೆ ಮಾಡುತ್ತಿದೆ, ಅದರಂತೆ ಈ ಬಾರಿಯೂ 60 ರಿಂದ 65 ರಾಸುಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಿತು.
ಪ್ರಶಸ್ತಿಗಾಗಿ ಬಿತ್ತನೆ ಹೋರಿ ಮತ್ತು ಜತೆ ಎತ್ತುಗಳು ಎಂಬ ಎರಡು ವಿಭಾಗದಲ್ಲಿ ರಾಸುಗಳನ್ನು ಆಯ್ಕೆ ಮಾಡಲಾಗಿದ್ದು, ಬಿತ್ತನೆ ಹೋರಿ ವಿಭಾಗದಲ್ಲಿ ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ ಬಾಯಿ ಕೂಡಿದ ಹೋರಿ ಹಾಗೂ ಜತೆ ಎತ್ತಿನ ವಿಭಾಗದಲ್ಲೂ ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ ಬಾಯಿ ಕೂಡಿದ ಎತ್ತುಗಳು ಮತ್ತು ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ. ಈ ಎರಡು ವಿಭಾಗಗಳಲ್ಲೂ ಉತ್ತಮ ರಾಸುಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಸದಸ್ಯ ಕೋರಿ ಮಂಜುನಾಥ್ ತಿಳಿಸಿದರು.
ಬಹುಮಾನಕ್ಕಾಗಿ ಉತ್ತಮ ರಾಸುಗಳ ಆಯ್ಕೆ
Get real time updates directly on you device, subscribe now.
Prev Post
Comments are closed.