ಮೇಯರ್ಸ್ ಕಪ್‌ ಪಂದ್ಯಾವಳಿ 25ರಂದು ಆರಂಭ

221

Get real time updates directly on you device, subscribe now.

ತುಮಕೂರು: ಮಹಾನಗರ ಪಾಲಿಕೆ, ರಾಕ್‌ ಯೂತ್‌ ಕ್ಲಬ್‌ ಹಾಗೂ ಜಿಲ್ಲಾ ಅಮಚೂರ್‌ ಕಬಡ್ಡಿ ಸಂಸ್ಥೆಯ ಸಹಯೋಗದಲ್ಲಿ ಮೇಯರ್ಸ್ ಕಪ್‌ ಪಂದ್ಯಾವಳಿಯನ್ನು ನಗರದ ಸರ್ಕಾರಿ ಜೂನಿಯರ್‌ ಕಾಲೇಜಿನ ಮೈದಾನದಲ್ಲಿ ಫೆ. 25, 26 ಹಾಗೂ 27 ರಂದು ಏರ್ಪಡಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಮೇಯರ್‌ ಬಿ.ಜಿ. ಕೃಷ್ಣಪ್ಪ ತಿಳಿಸಿದರು.

ಮೇಯರ್ಸ್‌ ಕಪ್‌ಗಾಗಿ ಸಿದ್ದಗೊಳ್ಳುತ್ತಿರುವ ಸರ್ಕಾರಿ ಜೂನಿಯರ್‌ ಮೈದಾನ ಪರಿಶೀಲಿಸಿದ ನಂತರ ಮಾತನಾಡಿ, ಕಳೆದ ವರ್ಷದಂತೆ ಈ ಬಾರಿಯೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮೇಯರ್ಸ್ ಕಪ್‌ ಪಂದ್ಯಾವಳಿಯಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ, ಪಾಲಿಕೆ ಸದಸ್ಯರು, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕ್ರಿಕೆಟ್‌ ಪಂದ್ಯ ಆಯೋಜಿಸಲಾಗಿದೆ ಎಂದರು.
ಶುಕ್ರವಾರ ಸಂಜೆ ಈ ಮೇಯರ್ಸ್‌ ಕಪ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತಿದ್ದು, ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸಲಿವೆ, ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪಾಲಿಕೆ ವತಿಯಿಂದ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗುವುದು, ಪಂದ್ಯಾವಳಿಯಲ್ಲಿ ವಿಜೇತರಾದವರಿಗಾಗಿ ನಗದು ಬಹುಮಾನ ನೀಡಲಾಗುವುದು ಎಂದರು.
ಈ ಕ್ರೀಡಾಕೂಟದಲ್ಲಿ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗಾಗಿ ಬಾಲ್‌ ಇನ್‌ ದ ಬಕೆಟ್‌, ಮ್ಯೂಸಿಕಲ್‌ ಚೇರ್‌, ಲೆಮನ್‌ ಅಂಡ್‌ ಸ್ಪೂನ್‌, ಹಗ್ಗ ಜಗ್ಗಾಟ, ಪಾಲಿಕೆಯ ಮಹಿಳಾ ಸಿಬ್ಬಂದಿಗಾಗಿ ಥ್ರೋಬಾಲ್‌, ಕಬಡ್ಡಿ, ಹಗ್ಗ ಜಗ್ಗಾಟ, ಬಾಲ್‌ ಇನ್‌ ದ ಬಕೆಟ್‌, ಮ್ಯೂಸಿಕಲ್‌ ಚೇರ್‌, ಲೆಮನ್‌ ಅಂಡ್‌ ಸ್ಪೂನ್, ಪಾಲಿಕೆಯ ಮಹಿಳಾ ಸದಸ್ಯರಿಗಾಗಿ ಬಾಲ್‌ ಇನ್‌ ದ ಬಕೆಟ್‌, ಮ್ಯೂಸಿಕಲ್‌ ಚೇರ್‌, ಲೆಮನ್‌ ಅಂಡ್‌ ಸ್ಪೂನ್‌, ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿವೆ.
ಪುರುಷ ಪೌರ ಕಾರ್ಮಿಕರಿಗಾಗಿ ಕಬಡ್ಡಿ, ಹಗ್ಗ ಜಗ್ಗಾಟ, ರನ್ನಿಂಗ್‌, ವಾಲ್ ಮನ್ ಗಳಿಗಾಗಿ ಹಗ್ಗ ಜಗ್ಗಾಟ, ರನ್ನಿಂಗ್‌, ಪಾಲಿಕೆಯ ಪುರುಷ ಸಿಬ್ಬಂದಿಗಾಗಿ ಕ್ರಿಕೆಟ್‌, ಕಬಡ್ಡಿ, ಹಗ್ಗ ಜಗ್ಗಾಟ, ರನ್ನಿಂಗ್‌, ಶಾಟ್ ಪುಟ್‌, ಪಾಲಿಕೆಯ ಪುರುಷ ಸದಸ್ಯರಿಗಾಗಿ ಕಬಡ್ಡಿ, ಶಾಟ್ ಪುಟ್‌, ಕ್ರಿಕೆಟ್‌, ವಿಶೇಷ ನೌಕರರಿಗಾಗಿ ಪಾಸಿಂಗ್‌ ದ ಬಾಲ್‌ ಮತ್ತು ಮ್ಯೂಸಿಕಲ್‌ ಚೇರ್‌ ಸ್ಪರ್ಧೆ ನಡೆಸಲಾಗುವುದು ಎಂದರು.
ಕ್ರೀಡಾಕೂಟಕ್ಕೆ ಹೊರಗಡೆಯಿಂದ ಬರುವ ಕಬಡ್ಡಿ, ಖೋಖೋ, ವಾಲಿಬಾಲ್‌ ತಂಡಗಳ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಸಂಘ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲಾಗಿದೆ, ಈ ಕ್ರೀಡಾಕೂಟಕ್ಕೆ ಕ್ರೀಡಾಂಗಣ ಸಂಪೂರ್ಣ ಸಜ್ಜಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಾ. 27 ರಂದು ಮೇಯರ್ಸ್‌ ಕಪ್‌ ಮುಕ್ತಾಯ ಸಮಾರಂಭ ನಡೆಯಲಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಮೈದಾನದ ಸಿದ್ದತೆ ವೀಕ್ಷಿಸಿದ ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್‌ ಮಾತನಾಡಿ, ಕ್ರೀಡಾಕೂಟಕ್ಕೆ ಮೈದಾನ ಸಿದ್ಧಗೊಳಿಸಿ ಕೊಡಲಾಗಿದೆ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಿಂದಲೂ ತಂಡಗಳು ಬರುತ್ತಿದ್ದು, ಪಾಲಿಕೆ ಸದಸ್ಯರು ಸಹ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಖೋಖೋ, ಕಬಡ್ಡಿ ಮತ್ತು ಕ್ರಿಕೆಟ್‌ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಎಲ್ಲರೂ ಭಾಗವಹಿಸಿ ಮೇಯರ್ಸ್ ಕಪ್‌ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಳೆದ 2 ವರ್ಷದಿಂದ ಕೊರೊನಾ ಕಾರಣದಿಂದಾಗಿ ಮನೆಯಲ್ಲೆ ಉಳಿದಿರುವ ಜನತೆ ಇದೀಗ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡಾಕೂಟ ವೀಕ್ಷಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನವನ್ನು ಅತ್ಯಾಧುನಿಕವಾಗಿ ಸಿದ್ದಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಕುಳಿತು ಕ್ರೀಡಾಕೂಟ ವೀಕ್ಷಿಸಲು ಗ್ಯಾಲರಿ ಸಹ ನಿರ್ಮಾಣ ಮಾಡಲಾಗಿದೆ ಎಂದರು.
ಸುಸಜ್ಜಿತ ಮೈದಾನ ನಿರ್ಮಾಣಕ್ಕಾಗಿ ಶಾಸಕರು 2 ಕೋಟಿ ರೂ.ನಷ್ಟು ಹೆಚ್ಚುವರಿ ಅನುದಾನ ನೀಡಿದ್ದಾರೆ. ಮೈದಾನದಲ್ಲಿ ಫೆಡ್‌ ಲೈಟ್‌, ಸುತ್ತಲೂ ಚಿಕ್ಕ ಲೈಟ್‌ಗಳನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಆಲದ ಮರದ ಪಾರ್ಕ್‌ನಲ್ಲಿ ದೊಡ್ಡವರಿಗೆ ಜಿಮ್‌ ಸೆಟ್‌ ಮತ್ತು ಮಕ್ಕಳಿಗೆ ಆಟಕ್ಕೂ ವ್ಯವಸ್ಥೆ ಮಾಡಲಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್‌. ನರಸಿಂಹರಾಜು, ಧನಿಯಕುಮಾರ್‌, ಅನಿಲ್‌, ತರಬೇತುದಾರ ಚನ್ನೇಗೌಡ, ನಂದೀಶ್‌, ನಿಖಿಲ್‌, ಜಯಣ್ಣ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!