ತುಮಕೂರು: ರಾಷ್ಟ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶವನ್ನು ಮತ್ತೊಂದು ತಾಲಿಬಾನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಟೌನ್ ಹಾಲ್ ವೃತ್ತದಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಖಂಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ, ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಈಗಾಗಲೇ ಇಂತಹ ಹಲವು ಉದಾಹರಣೆ ನಮ್ಮ ಕಣ್ಣ ಮುಂದಿವೆ, ಹರ್ಷ ಕೊಲೆ ಇದರಲ್ಲಿ ಒಂದು ಎಂದರು.
ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ರಾಜ್ಯದಲ್ಲಿ ಸುಮಾರು 27 ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗಿದೆ, ಇದುವರೆಗೂ ಯಾರಿಗೂ ಸರಿಯಾದ ಶಿಕ್ಷೆಯಾಗಿಲ್ಲ, ಸದನದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಪ್ರಚೋದನಾತ್ಮಕ ಹೇಳಿಕೆಗಳಿಂದ ಉತ್ತೇಜನ ಪಡೆದ ಕೆಲವರು ಹರ್ಷನ ಕೊಲೆ ಮಾಡಿದರು, ಭಾರತದ ಸಂವಿಧಾನದ ಪ್ರಕಾರ ಎಲ್ಲಾ ವರ್ಗದವರಿಗೂ ಸಮಾನ ಅವಕಾಶವಿದೆ, ನಮ್ಮ ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಸ್ವಾತಂತ್ರ ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸುವುದಕ್ಕಲ್ಲ, ನಿಮ್ಮ ಮನೆಗಳಲ್ಲಿ ಆಚರಿಸಿಕೊಳ್ಳಲು ನಮ್ಮ ಯಾವುದೇ ಆಕ್ಷೇಪಣೆ ಇಲ್ಲ, ಹಿಜಾಬ್ ಗಲಭೆಯೇ ಹರ್ಷನ ಕೊಲೆಗೆ ಮೂಲ ಕಾರಣ, ಇದರ ವಿರುದ್ಧ ಫೆಬ್ರವರಿ 27ರ ವರೆಗೆ ಬಿಜೆಪಿ ಎಲ್ಲಾ ತಾಲೂಕುಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ ಎಂದು ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಕಾಂಗ್ರೆಸ್ ಪಕ್ಷದವರಿಗೆ ಸದನಕ್ಕಿಂತ ಈಶ್ವರಪ್ಪನವರ ಹೇಳಿಕೆಯೇ ಮುಖ್ಯವಾಯಿತು, ಪತ್ರಿಕಾ ಸಂವಾದದಲ್ಲಿ ನೀಡಿದ್ದ ಹೇಳಿಕೆಯನ್ನು ಈಶ್ವರಪ್ಪ ಅವರ ಸ್ವಂತ ಅಭಿಪ್ರಾಯವೆಂದು ಬಿಂಬಿಸಿ ನೂರಾರು ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕಾಗಿದ್ದ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಫೆಬ್ರವರಿ 24ರ ವರೆಗೆ ನಡೆಯಬೇಕಾಗಿದ್ದ ಅಧಿವೇಶವನ್ನು ಹಾಳು ಮಾಡಿದರು, ತಾಲಿಬಾನಿ ಸಂಸ್ಕೃತಿ ಪ್ರೋತ್ಸಾಹಿಸುತ್ತಿರುವ ಕಾಂಗ್ರೆಸ್ ಪಕ್ಷದಿಂದ ನಾವು ದೇಶ ಪ್ರೇಮ ಕಲಿಯುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಲಕ್ಷ್ಮೀಶ್ ಮಾತನಾಡಿ, ದೇಶಪ್ರೇಮವನ್ನೇ ಮೈಗೂಡಿಸಿಕೊಂಡಿರುವ, ಅದನ್ನೇ ತಮ್ಮ ಅಜೆಂಡವನ್ನಾಗಿಸಿಕೊಂಡಿರುವ ಬಿಜೆಪಿ ಪಕ್ಷದ ಕಾಂಗ್ರೆಸ್ ಪಕ್ಷದಿಂದ ದೇಶ ಪ್ರೇಮದ ಪಾಠ ಕಲಿಯಬೇಕಾಗಿಲ್ಲ. ವಿರೋಧ ಪಕ್ಷವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿ ಕಲಿಯಬೇಕಾಗಿದೆ, ನರೇಂದ್ರಮೋದಿ ಅವರು ಪ್ರಧಾನಿಯಾಗುವ ಮೊದಲು ಕಾಶ್ಮೀರದ ಬೀದಿ ಬೀದಿಗಳಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನವಾಗುವ ವೇಳೆ ಕಾಂಗ್ರೆಸ್ ಏನು ಮಾಡುತ್ತಿತ್ತು, ಮಿಲಿಟರಿಯವರಿಗೆ ಕಲ್ಲು ತೂರುವಾಗ ಎಲ್ಲಿದ್ದರೂ ಎಂದು ಪ್ರಶ್ನಿಸಿದ ಅವರು, ಹಿಜಾಬ್ ವಿಚಾರ ನ್ಯಾಯಾಲಯದಲ್ಲಿರುವಾಗ, ಒಂದು ಪಕ್ಷದ ಪರ ಮಾತನಾಡುವುದು ಶೋಭೆಯಲ್ಲ ಎಂದರು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಮತಿಭ್ರಮಣೆಯಾಗಿದೆ, ಭವಿಷ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೋ ಇಲ್ಲವೋ ಎಂಬ ಅನುಮಾನ ಉಂಟಾಗಿದೆ, ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ, ಅಧಿಕಾರ ಅನುಭವಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ, ಕುರ್ಚಿಯೊಂದನ್ನು ಬಿಟ್ಟು ಬೇರೆ ಏನು ಕಾಣುವುದಿಲ್ಲ, ಬಿಜೆಪಿ ಪಕ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಿಂದ ಮತ್ತೊಮ್ಮೆ ಅಧಿಕಾರ ಸಿಗುವುದಿಲ್ಲ ಎಂಬುದು ಖಚಿತಗೊಂಡು ಈ ರೀತಿಯ ಕೋಮು ದಳ್ಳುರಿ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ದೇಶದ್ರೋಹ ನೀತಿ ಖಂಡಿಸಲು ನಾವಿಲ್ಲಿ ಸೇರಿದ್ದೇವೆ, ಅವರ ಅಧಿಕಾರ ದಾಹ ದೇಶವನ್ನು, ರಾಜ್ಯವನ್ನು ಸುಡುತ್ತಿದೆ, ಕಾಂಗ್ರೆಸ್ ಪಕ್ಷಕ್ಕೆ ಮತೀಯ ಗಲಭೆ ಸೃಷ್ಟಿಸುವುದು ಹೊಸದಲ್ಲ, ನಮ್ಮ ಆಡಳಿತ ಸಹಿಸಲು ಸಾಧ್ಯವಿಲ್ಲದೆ ಈಗ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ದೂರಿದರು.
ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಟೂಡಾ ಅಧ್ಯಕ್ಷ ಬಿ.ಎಸ್.ನಾಗಣ್ಣ, ರವಿ ಹೆಬ್ಬಾಕ, ಹನುಮಂತರಾಜು, ಮೇಯುರ್ ಬಿ.ಜಿ.ಕೃಷ್ಣಪ್ಪ, ಟಿ.ಆರ್.ಸದಾಶಿವಯ್ಯ, ಕೊಪ್ಪಲ್ ನಾಗರಾಜು, ಮಲ್ಲಿಕಾರ್ಜುನ್, ವೇದಮೂರ್ತಿ, ರುದ್ರೇಶ್, ರಾಜೀವ್, ಚಂದ್ರಶೇಖರ್, ಕೆ.ಪಿ.ಮಹೇಶ್, ಶಬ್ಬೀರ್, ಜಗ್ಗಣ್ಣ ಪಾಲಿಕೆಯ ಎಲ್ಲಾ ಬಿಜೆಪಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದೇಶ ತಾಲಿಬಾನ್ ಆಗುತ್ತೆ
ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಖಂಡಿಸಿದ ಜ್ಯೋತಿಗಣೇಶ್
Get real time updates directly on you device, subscribe now.
Prev Post
Comments are closed.