ಹರ್ಷ ಹತ್ಯೆಯ ಹಿಂದೆ ಕಾಂಗ್ರೆಸ್‌ ಕೈವಾಡ: ಜ್ಯೋತಿಗಣೇಶ್

111

Get real time updates directly on you device, subscribe now.

ತುಮಕೂರು: ಹಿಜಾಬ್‌ ವಿವಾದ, ಹಿಂದೂ ಹರ್ಷನ ಹತ್ಯೆಗೆ ಕಾಂಗ್ರೆಸ್‌ ಪಕ್ಷದ ನಾಯಕರ ಪ್ರಚೋಧನಕಾರಿ ಹೇಳಿಕೆಗಳೇ ಮೂಲ ಕಾರಣ ಎಂದು ಶಾಸಕ ಜ್ಯೋತಿ ಗಣೇಶ್‌ ಆರೋಪಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಅತಿ ಅಮಾನುಷವಾಗಿ ವರ್ತನೆ ಮಾಡುತ್ತಿದೆ, ಧ್ವಂದ್ವ ನಿಲುವುಗಳ ಮೂಲಕ ರಾಜ್ಯದಲ್ಲಿ ಶಾಂತಿ ಕದಡುತ್ತಿದೆ, ಹಿಜಾಬ್‌ ವಿವಾದದ ವಿಚಾರದಲ್ಲಿ ಧರ್ಮಗಳ ನಡುವೆ ಕೋಮು ಕಿಡಿ ಹಚ್ಚುವ ಕಾರ್ಯ ಮಾಡಿದೆ, ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆಯ ಹಿಂದೆ ಕಾಂಗ್ರೆಸ್‌ ಕೈವಾಡವಿದೆ ಎಂದು ಆರೋಪಿಸಿದರು.
ಸದನದಲ್ಲಿ ಜನರ ಕುಂದು ಕೊರತೆಗಳ ಕುರಿತು ಬಹುಮುಖ್ಯ ಚರ್ಚೆಯ ಸಮಯವನ್ನೆಲ್ಲ ಕಾಂಗ್ರೆಸ್‌ ದಿವಾಳಿತನದ ನಡೆ ಅಸೆಂಬ್ಲಿ ಚರ್ಚೆ ನಡೆಯದಂತೆ ಅಡ್ಡಿಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಒಡನಾಟವನ್ನಿಟ್ಟಿಕೊಂಡು ರಾಷ್ಟ್ರ ಒಡೆಯುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಹಿಂದೆ ಕಾಂಗ್ರೆಸ್‌ ಪ್ರಚೋದನ ಶಕ್ತಿ ಕೆಲಸ ಮಾಡುತ್ತಿದೆ, ಭಾರತವನ್ನ ತಾಲಿಬಾನ್‌ ರೀತಿಯಲ್ಲಿ ಬಿಂಬಿಸಲು ಹೊರಟಿದೆ ಜೊತೆಗೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯರ ಆಂತರಿಕ ಜಗಳ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಮುಂದಾಗಿವೆ ಎಂದು ಛೇಡಿಸಿದರು.
ಈ ಹಿಂದೆ ಕಾಶ್ಮೀರದಲ್ಲಿ ರಾಷ್ಟ್ರ ಧ್ವಜವನ್ನು ಅವಮಾನಿಸಿದ ಘಟನೆ ನಡೆದಿತ್ತು, ಅದನ್ನ ಪ್ರಶ್ನೆ ಮಾಡದ ಕಾಂಗ್ರೆಸ್‌ ನವರು ಕೆ.ಎಸ್‌.ಈಶ್ವರಪ್ಪ ಅವರ ಕೇಸರಿ ಬಾವುಟ ಹಾರಿಸುವ ಸಣ್ಣ ವಿಚಾರವನ್ನು ದೊಡ್ಡದು ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು. ಜನವಿರೋಧಿ, ಸದನದಲ್ಲಿ ಗೊಂದಲ ಎಬ್ಬಿಸಿ ಭಯೋತ್ಪಾದಕರಿಗೆ ಮತ್ತು ಉಗ್ರರ ಪರ ನಿಂತಿರುವ ಕಾಂಗ್ರೆಸ್‌ ದಿವಾಳಿತನದ ವಿರುದ್ಧ ಇದೇ 27, 28 ರಂದು ನಮ್ಮ ಜಿಲ್ಲೆ ಒಳಗೊಂಡಂತೆ ರಾಜ್ಯದೆಲ್ಲೆಡೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್‌ ಮಾತನಾಡಿ ರಾಜ್ಯದಲ್ಲಿ ಕೋಮುಗಲಭೆ ಹುಟ್ಟಿಸುವಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿದೆ, ಹಿಂದೂ ಪರ ಸಂಘಟನೆ ಪ್ರತಿರೋಧ ಮಾಡುತ್ತದೆ ವಿನಹ ಕಾಂಗ್ರೆಸ್‌ ತರ ಪ್ರತಿಕಾರಕ್ಕೆ ಇಳಿದಿಲ್ಲ, ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ 27 ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆದಿವೆ, ಇದೆಲ್ಲವೂ ಕಾಂಗ್ರೆಸ್‌ ಓಟು ಬ್ಯಾಂಕ್‌ ನಡೆಸುವ ಹುನ್ನಾರದ ಹಿಂದೆ ಪ್ರತಿಕಾರ ಅಡಗಿತ್ತು ಎಂದು ಕಾಂಗ್ರೆಸ್ಸಿಗರ ವಿರುದ್ಧ ಗುಡುಗಿದರು.
ಈ ವೇಳೆ ಬಿಜೆಪಿ ಮುಖಂಡರಾದ ಕೃಷ್ಣಪ್ಪ, ಬಾವಿಕಟ್ಟೆ ನಾಗಣ್ಣ, ಹೆಬ್ಬಾಕ ರವಿಶಂಕರ್‌, ಹನುಮಂತರಾಜು, ಜಗದೀಶ್‌, ವಕ್ತಾರ ಕೆ.ಪಿ.ಮಹೇಶ್, ಸದಾಶಿವಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!