ಶಿವಮೊಗ್ಗ ಘಟನೆಗೆ ಕಾಂಗ್ರೆಸ್‌ ಕಾರಣ

118

Get real time updates directly on you device, subscribe now.

ಕುಣಿಗಲ್‌: ಶಿವಮೊಗ್ಗ ಘಟನೆಗೆ ಕಾಂಗ್ರೆಸ್‌ ಮುಖಂಡರ ಒಂದು ವರ್ಗದ ಓಲೈಕೆ ನೀತಿಗಳೆ ಕಾರಣ ಎಂದು ಬಿಜೆಪಿ ಪ್ರಬುದ್ದ ಕೋಷ್ಠದ ಜಿಲ್ಲಾ ಸಂಚಾಲಕ ನಟರಾಜ್‌ ಹೇಳಿದರು.

ತಾಲೂಕಿನ ಹುಲಿಯೂರು ದುರ್ಗದಲ್ಲಿ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿದ್ದ ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಶಿವಮೊಗ್ಗದಲ್ಲಿ ನಡೆದ ಕೃತ್ಯದ ಹಿಂದೆ ಕಾಂಗ್ರೆಸ್‌ ಪಕ್ಷದ ವರ್ಗ ಓಲೈಕೆ ನೀತಿ ಖಂಡನೀಯ, ಸಮಾಜದಲ್ಲಿ ಧ್ವನಿ ಅಡಗಿಸುವುದಕ್ಕೆ ಕೊಲೆಯಂತಹ ಅಪರಾಧಿಕ ಕೃತ್ಯ ಉತ್ತರವಾಗಬಾರದು, ಇದು ಯಾವುದೇ ವರ್ಗಕ್ಕೂ ಶೋಭೆ ತರುವುದಿಲ್ಲ, ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಈ ಘಟನೆ ಸರ್ಕಾರಕ್ಕೂ ಶೋಭೆ ತರುವುದಿಲ್ಲ, ಇಂತಹ ಕೃತ್ಯದಲ್ಲಿ ತೊಡಗಿರುವ ಸಮಾಜಘಾತುಕರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರೆ ತಕ್ಕ ಉತ್ತರ ನೀಡುವ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರವು ಹಿಂದೂ ಸಂಘಟನೆಯ ಕಾರ್ಯಕರ್ತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು, ಇಂತಹ ಘಟನೆಗಳು ಮರು ಕಳಿಸದ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಯುವ ಮೊರ್ಚಾ ಜಿಲ್ಲಾಧ್ಯಕ್ಷ ಯಶಸ್‌ ಮಾತನಾಡಿ, ಶಿವಮೊಗ್ಗದ ಘಟನೆ ಹಿಂದು ವಿರೋಧಿಗಳ ರಾಕ್ಷಸ ಪ್ರವೃತ್ತಿಯ ವರ್ತನೆ, ಇಂತಹ ಘಟನೆಗಳಿಂದ ಏನು ಸಾಧಿಸಲಾಗದು, ಹಿಂದು ಯುವ ಜನತೆ ಸಂಯಮದಿಂದ ಗಮನಿಸುತ್ತಿದ್ದಾರೆ, ಎಲ್ಲವೂ ಮಿತಿಯಲ್ಲಿದ್ದರೆ ಒಳಿತು ಎಂಬುದ ವಿರೋಧಿಗಳು ಅರಿತುಕೊಳ್ಳಬೇಕೆಂದರು.
ಮೊಂಬತ್ತಿ ಬೆಳಗಿಸಿ ಮೌನಾಚರಣೆ ನೆರವೇರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಪ್ರಮುಖರಾದ ಧನುಶ್‌, ದೊಡ್ಡಮಾದಪ್ಪ, ರಮಾನಂದ, ವೆಂಕಟೇಶ, ವಿನಾಯಕ, ಜಗದೀಶ್‌, ಶ್ರೇಯಸ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!