ಕುಣಿಗಲ್: ತಾಲೂಕಿನ ಹುತ್ರಿದುರ್ಗ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಕ ಹಣಕಾಸು ಅವ್ಯಹಾರವಾಗಿದ್ದರೂ ಇಲಾಖಾಧಿಕಾರಿಗಳು ಜಾಣಕುರುಡು ಪ್ರದರ್ಶನ ಮಾಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹುತ್ರಿದುರ್ಗ ಹಿತರಕ್ಷಣ ಸಮಿತಿ ಅಧ್ಯಕ್ಷ ಮಲ್ಲೇಶ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಹುತ್ರಿದುರ್ಗ ಗ್ರಾಮ ಪಂಚಾಯಿತಿಯಲ್ಲಿ 2013- 2020ರ ವರೆಗೆ ಲೆಕ್ಕ ಪರಿಶೋಧನೆಯಲ್ಲಿ 32.40 ಲಕ್ಷ ವ್ಯತ್ಯಾಸ ಬಂದಿದೆ, ಪಾವತಿಗೆ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ 2020ರ ಮಾರ್ಚ್ ಮಾಹೆಯಲ್ಲಿ ಪತ್ರಬರೆದಿದ್ದರೂ ಯಾವುದೇ ಕ್ರಮವಾಗಿಲ್ಲ, ಇದಲ್ಲದೆ ಇತ್ತೀಚೆಗೆ ವರ್ಗ ಒಂದರ ತೆರಿಗೆ ಹಣ ಅಸರ್ಮಪಕ ನಿರ್ವಹಣೆಯಾಗಿದೆ, ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾದ ಮೇರೆಗೆ ತಾಪಂ ಇಒ ನೋಟಿಸ್ ನೀಡಿದ್ದಾರೆ, ಆದರೆ ಯಾವುದೆ ಕ್ರಮವಾಗಿಲ್ಲ, ಗ್ರಾಪಂ ಪಿಡಿಒ ಮಧುಸೂಧನ್ ಕೆಲ ಸಾಲಿನಿಂದ ಕಾರ್ಯ ನಿರ್ವಹಿಸುತ್ತಿದ್ದು ಎರಡು ಬಾರಿ ವರ್ಗಾವಣೆಯಾದರೂ ವರ್ಗಾವಣೆ ರದ್ದುಗೊಳಿಸಿ ಇಲ್ಲಿಯೆ ಉಳಿಸಿಕೊಂಡಿದ್ದಾರೆ, ಅಧ್ಯಕ್ಷರು ಹಾಗೂ ಪಿಡಿಒ ಇಬ್ಬರೂ ಸರ್ವಾಧಿಕಾರಿ ಧೋರಣೆ ತಳೆದಿದ್ದು ಪಂಚಾಯತಿ ಅಭಿವೃದ್ಧಿ ನಿಟ್ಟಿನಲ್ಲಿ ಒಂದೂ ಗ್ರಾಮಸಭೆ ಮಾಡಿಲ್ಲ, ಇಲಾಖೆಯ ಮೇಲಾಧಿಕಾರಿಗಳು ನೋಟಿಸ್ ನೀಡಿ ಸುಮ್ಮನಾಗಿರುವುದು ನೋಡಿದರೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ, ಪಂಚಾಯಿತಿಯಲ್ಲಿ ಆಗಿರುವ ಹಣಕಾಸು ಅವ್ಯವಹಾರ ಸಮಗ್ರ ತನಿಖೆಗೆ ಸಚಿವರಿಗೂ ಸಹ ಮನವಿ ನೀಡಲಾಗಿದೆ, ಅಧಿಕಾರಿಗಳು ಜಾಣಕುರುಡುತನ ಬಿಟ್ಟು ಆಗಿರುವ ಲೋಪ ಸರಿಪಡಿಸಿ ಗ್ರಾಪಂ ಹಣಕಾಸು ವ್ಯತ್ಯಾಸ ದ ಹಣ ವಸೂಲು ಮಾಡಿ, ಸಮಗ್ರ ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಹುತ್ರಿದುರ್ಗ ಗ್ರಾಪಂನಲ್ಲಿ ಅವ್ಯವಹಾರ ತನಿಖೆಗೆ ಆಗ್ರಹ
Get real time updates directly on you device, subscribe now.
Next Post
Comments are closed.