ಕುಣಿಗಲ್: ತಾಲೂಕಿನ ಇತಿಹಾಸ ಪ್ರಸಿದ್ದ ದೊಡ್ಡಕೆರೆಯ ಏರಿಯ ಮೇಲೆ ಕೆಲವೆಡೆ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಗಮನ ಹರಿಸದ ಶಾಸಕರು, ಮೇಕೆದಾಟು ಪಾದಯಾತ್ರೆಯಲ್ಲಿ ಬ್ಯುಸಿಯಾಗಿರುವುದು ಖಂಡನೀಯ ಎಂದು ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಹೇಳಿದರು.
ಸೋಮವಾರ ಪಟ್ಟಣದ ದೊಡ್ಡಕೆರೆ ಏರಿಯ ಮೇಲೆ ಸುಮಾರು ಒಂದು ಕಿ.ಮೀ ದೂರದಷ್ಟು ಬಿರುಕು ಕಾಣಿಸಿಕೊಂಡಿರುವ ಬಗ್ಗೆ ಸಾರ್ವಜನಿಕರು, ಕಾರ್ಯಕರ್ತರು ಗಮನ ಸೆಳೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ದೂರವಾಣಿ ಮೂಲಕ ತರಾಟೆ ಗೆತೆಗೆದುಕೊಂಡು ಕೂಡಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತಾಲೂಕಿನ ಪಾಲಿನೆ ಹೇಮೆ ನೀರನ್ನು ಶಾಸಕ ಡಾ.ರಂಗನಾಥ ನಾಗಮಂಗಲ ಹಾಗೂ ಮಾಗಡಿಗೆ ಹರಿಸುವ ಭರವಸೆ ನೀಡುವ ಮೂಲಕ ತಾಲೂಕಿಗೆ ಅನ್ಯಾಯ ಮಾಡಿದ್ದಾರೆ, ಇತಿಹಾಸ ಪ್ರಸಿದ್ದ ದೊಡ್ಡಕೆರೆ ಏರಿ ಬಿರಕು ಬಿಟ್ಟಿದ್ದು ಇದಕ್ಕೆ ಮೂಲ ಕಾರಣ ಪತ್ತೆ ಹಚ್ಚಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ನೀರಿನ ರಕ್ಷಣೆ ಮಾಡುವ ಜವಾಬ್ದಾರಿ ಮರೆತು, ಮೇಕೆದಾಟು ಪಾದಯಾತ್ರೆಯಲ್ಲಿ ಬ್ಯುಸಿಯಾಗುವ ಮೂಲಕ ತಾಲೂಕಿನ, ಕುಣಿಗಲ್ ಪಟ್ಟಣದ ಜನರ ಹಿತ ಕಡೆಗಣಿಸಿದ್ದಾರೆ. ಸಂಸದ ಡಿ.ಕೆ.ಸುರೇಶ್ ಕೇಂದ್ರ ರೇಷ್ಮೆ ಮಂಡಲಿ ಸದಸ್ಯರಾಗಿದ್ದರೂ ಚಿಕ್ಕಮಳಲವಾಡಿ, ನಾಗೇನಹಳ್ಳಿ ಫಾರಂ ರಕ್ಷಣೆ ಮಾಡಲು ಆಗಿಲ್ಲ, ಇದೀಗ ಮಾಜಿ ಸಂಸದರೊಬ್ಬರು ಪುನಹ ಮಂಜೂರು ಮಾಡಿಸಿದ್ದೇನೆ ಎನ್ನುತ್ತಿದ್ದಾರೆ, ಈ ಬಗ್ಗೆ ಇನ್ನು ಅಧಿಕೃತ ಆದೇಶವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈ ಭಾಗದ ಜನರ, ರೈತರ ಒತ್ತಾಸೆ ಹಿನ್ನೆಲೆಯಲ್ಲಿ ಹಿಂದಿನ ಮಾಜಿ ಸಿಎಂ ಯಡಿಯೂರಪ್ಪ ನವರಿಗೆ ತಾಲೂಕು ಬಿಜೆಪಿ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಈಭಾಗವನ್ನು ಪ್ರತಿನಿಧಿಸಿರುವ ಸಂಸದ ಡಿ.ಕೆ.ಸುರೇಶ್, ಸಿಎಸ್‌ಬಿ ಮಂಡಲಿ ಸದಸ್ಯರಾಗಿದ್ದರೂ ತಾಲೂಕಿನ ಜನರ, ರೇಷ್ಮೆ ಬೆಳೆಗಾರರ ಹಿತ ಕಾಪಾಡುವುದರಲ್ಲಿ ವಿಫಲವಾಗಿದ್ದಾರೆ, ಇನ್ನು ಶಾಸಕರಂತು ನೀರಾವರಿ ವಿಷಯದಲ್ಲಿ ತಾಲೂಕು ವಿರೋಧಿ ನೀತಿ ಕೈಗೊಂಡು ತಾಲೂಕಿಗೆ ಅನ್ಯಾಯ ಮಾಡಿದ್ದಾರೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಂತೋಷ್, ಕುಣಿಗಲ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯ ಪ್ರಮುಖ ತಾಣವಾಗಿರುವ ದೊಡ್ಡಕೆರೆಯ ರಕ್ಷಣೆಯ ನಿಟ್ಟಿನಲ್ಲಿ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕಿದೆ. ಅವರ ನಿರ್ಲಕ್ಷ್ಯತನ ದಿಂದ ಈ ಸ್ಥಿತಿ ನಿರ್ಮಾಣವಾಗಿದ್ದು ಇನ್ನಾದರೂ ಎಚ್ಚೆತ್ತು ತುರ್ತುಕ್ರಮ ಜರುಗಿಸಿ ಯಾವುದೇ ಹೆಚ್ಚಿನ ಅನಾಹುತವಾಗದಂತೆ ಕ್ರಮ ವಹಿಸಬೇಕಿದೆ ಎಂದರು.
ಪುರಸಭೆ ಸದಸ್ಯರಾದ ನಾಗೇಶ, ಗೋಪಿ, ಆನಂದಕುಮಾರ್, ಕುಮಾರ, ಪ್ರಮುಖರಾದ ದೇವರಾಜ, ಧನುಶ್, ಸುರೇಶ, ಅನೂಪ್‌ಕುಮಾರ, ಸುನಿಲ್, ರೇಣುಕಪ್ಪ, ವೆಂಕಟೇಶ ಇತರರು ಇದ್ದರು.
Get real time updates directly on you device, subscribe now.
Prev Post
Next Post
Comments are closed.